ನವದೆಹಲಿ: ಸಲ್ಮಾನ್ ಖಾನ್ ಬಹು ನಿರಿಕ್ಷೀತ ಚಿತ್ರ 'ಭರತ್' ಚಿತ್ರದಲ್ಲಿ ನಟಿಸಬೇಕಾಗಿದ್ದ ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಸಲ್ಲು ಬಾಯಿ ಜೊತೆ ನಟಿಸಲು ನಿರಾಕರಿಸಿದ್ದಾಳೆ. ಇದು ಚಿತ್ರದ ಅಭಿಮಾನಿಗಳಲ್ಲಿ ನಿಜಕ್ಕೂ ಆಚ್ಚರಿ ಮೂಡಿಸಿದೆ, ಬಾಲಿವುಡ್ ನ ಬಾಕ್ಸ್ ಆಫಿಸ್ ಸುಲ್ತಾನ್ ಸಲ್ಮಾನ್ ಅಂದ್ರೆ ಎಂತ ನಟಿಯಾದರು ಕೂಡ ನಟಿಸಲು ಹಿಂದೆ ಮುಂದೆ ನೋಡುವುದಿಲ್ಲ ಅಂತದ್ದರಲ್ಲಿ ಈಗ ಪ್ರಿಯಾಂಕ್ ಚೋಪ್ರಾ ನಿರಾಕರಿಸಿಸುವುದು ನಿಜಕ್ಕೂ ಅಚ್ಚರಿಯಾಗಿದೆ.
Yes Priyanka Chopra is no more part of @Bharat_TheFilm & and the reason is very very special , she told us in the Nick of time about her decision and we are very happy for her ... Team Bharat wishes @priyankachopra loads of love & happiness for life 😊😉😍
— ali abbas zafar (@aliabbaszafar) July 27, 2018
ಹಾಗಾದರೆ ಈ ನಟಿ ಚಿತ್ರದಲ್ಲಿ ನಟಿಸಲು ನಿರಾಕರಿಸಿರುವುದಕ್ಕೆ ನೀಡಿದ ಕಾರಣವನ್ನು ಅಬ್ಬಾಸ್ ಅಲಿ ಜಾಫರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ " ಹೌದು ಪ್ರಿಯಾಂಕಾ ಚೋಪ್ರಾ ಇನ್ನು ಮುಂದೆ ಭರತ್ ಚಿತ್ರದ ಭಾಗವಾಗಿರುವುದಿಲ್ಲ ಇದಕ್ಕೆ ಕಾರಣವಂತೂ ವಿಶಿಷ್ಟವಾಗಿದೆ..ನಮಗೆ ಅವಳು ನಿಕ್ ಸಮಯದ ವೇಳೆ ಹೇಳಿರುವುದು ನಿಜಕ್ಕೂ ಸಂತಸವಾಗಿದೆ. ಭರತ್ ಟೀಮ್ ಅವಳ ಜೀವನಕ್ಕೆ ಪ್ರೀತಿ ಪೂರಕವಾಗಿ ಹಾರೈಕೆಗಳನ್ನು ತಿಳಿಸಲು ಇಚ್ಚಿಸುತ್ತದೆ" ಎಂದು ಅವರು ತಿಳಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಗಾಯಕ ಮತ್ತು ಬಾಯ್ ಫ್ರೆಂಡ್ ನಿಕ್ ಜೋನಾಸ್ ಜೊತೆ ಮದುವೆಯಾಗಲಿದ್ದಾರೆ ಎನ್ನುವ ರೂಮರ್ ಕೂಡ ಹರಡಿದೆ. ಈ ಹಿನ್ನಲೆಯಲ್ಲಿ ಈಗ ಅವರು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಭರತ್ ಚಿತ್ರವು ೨೦೧೪ ರ ದಕ್ಷಿಣ ಕೊರಿಯಾದ ಚಿತ್ರ ಓಡ್ ಟು ಮೈ ಫಾದರ್ ರೀಮೇಕ್ ಆಗಿದೆ .ಈ ಚಿತ್ರ ೧೯೪೭ರ ದೇಶ ವಿಭಜನೆಯ ಸೆಟ್ ಹಿನ್ನಲೆಯಲ್ಲಿ ಚಿತ್ರಿಕರಣಗೊಳ್ಳುತ್ತದೆ. ೨೦೦೮ ರ ಗಾಡ್ ತುಸ್ಸಿ ಗ್ರೇಟ್ ಹೋ ಚಿತ್ರದ ನಂತರ ಇದೆ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದರು.