ರಿಯಲ್‌ ಲೈಫ್‌ನಲ್ಲಿ ಜೋಡಿಯಾಗ್ತಾರಾ ರೀಲ್‌ ಜೋಡಿ..? ರಕ್ಸ್‌-ರುಕ್ಸ್‌ ಮದುವೆಯಾಗಿ ಎಂದ ಫ್ಯಾನ್ಸ್‌.

Rakshith Shetty: ರಶ್ಮಿಕಾ ಮಂದಣ್ಣ ಜೊತೆ ಎಂಗೇಜ್‌ಮೆಂಟ್‌ ಬ್ರೇಕ್‌ ಆದ ನಂತರ ರಕ್ಷಿತ್‌ ಮತ್ತೊಮ್ಮೆ ಮದುವೆ ಬಗ್ಗೆ ಎಲ್ಲೂ ಮಾತಾಡಿಲ್ಲ, ಅದ್ರೆ ಫ್ಯಾನ್ಸ್‌ ಮಾತ್ರ ಶೆಟ್ರೆ ಮದುವೆ ಯಾವಾಗ ಅಂತ ಕೇಳ್ತಾನೆ ಇದ್ದಾರೆ. ರೀಲ್‌ ಲೈಫ್‌ ಜೋಡಿ ರಿಯಲ್‌ ಆಗಿ ಬೇಗ ಮದುವೆ ಆಗಿ ಅಂತ ರಕ್ಷಿತ್‌ ಫ್ಯಾನ್ಸ್‌ ಡಿಮ್ಯಾಂಡ್‌ ಮಾಡಿದ್ದಾರೆ.

Written by - Zee Kannada News Desk | Last Updated : Jun 9, 2024, 03:17 PM IST
  • ರುಕ್ಸ್‌ ರಕ್ಸ್‌ ಬೇಗ ಮದುವೆ ಆಗಿ ಎಂದ ಫ್ಯಾನ್ಸ್‌.
  • ರಕ್ಷಿತ್‌ ಹುಟ್ಟು ಹಬ್ಬಕ್ಕೆ ರುಕ್ಮಿಣಿ ವಸಂತ್‌ ಕ್ಯೂಟ್‌ ವಿಶ್‌.
  • ವೈರಲ್‌ ಆಯ್ತು ರೀಲ್‌ ಕಪಲ್‌ ಕ್ಯೂಟ್‌ ಕಾನ್ವರ್‌ಸೇಶನ್‌.
ರಿಯಲ್‌ ಲೈಫ್‌ನಲ್ಲಿ ಜೋಡಿಯಾಗ್ತಾರಾ ರೀಲ್‌ ಜೋಡಿ..? ರಕ್ಸ್‌-ರುಕ್ಸ್‌ ಮದುವೆಯಾಗಿ ಎಂದ ಫ್ಯಾನ್ಸ್‌. title=

Rakshith Rukmini: ರಶ್ಮಿಕಾ ಮಂದಣ್ಣ ಜೊತೆ ಎಂಗೇಜ್‌ಮೆಂಟ್‌ ಬ್ರೇಕ್‌ ಆದ ನಂತರ ರಕ್ಷಿತ್‌ ಮತ್ತೊಮ್ಮೆ ಮದುವೆ ಬಗ್ಗೆ ಎಲ್ಲೂ ಮಾತಾಡಿಲ್ಲ, ಅದ್ರೆ ಫ್ಯಾನ್ಸ್‌ ಆಗಿದ್ದು ಆಯ್ತು ಸರ್‌, ಮುಂದುವರೀರಿ ಅಂತಾ ಹೇಳ್ತಾನೆ ಬರ್ತಿದ್ದಾರೆ. ಚ್ಯಾನ್ಸ್‌ ಸಿಕ್ರೆ ಸಾಕು ಅಭಿಮಾನಿಗಳು ರಕ್ಷಿತ್‌ ಹೆಸರನ್ನು ನಟಿಯರ ಹೆಸರೊಂದಿಗೆ ಮೆಲಕು ಹಾಕಿ ಮದುವೆ ಪುಕಾರು ಎಬ್ಬಿಸಿಯೇ ಬಿಡ್ತಾರೆ. ಇದೀಗ ಆ ನಟಿ ಮಾಡಿದ ಅದೊಂದು ಪೋಸ್ಟ್‌ನಿಂದ ಅಭಿಮಾನಿಗಳು ರಕ್ಷಿತ್‌ ಮದುವೆ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭಿಸಿದ್ದಾರೆ. ಹಾಗದ್ರೆ ಆ ನಟಿ ಯಾರು? ಆಕೆ ಮಾಡಿದ ಪೋಸ್ಟ್‌ ಆದ್ರೂ ಏನು? ಈ ಸ್ಟೋರಿ ಓದಿ.

ಇತ್ತೀಚೆಗಷ್ಟೆ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡರು. ಸಾಕಷ್ಟು ಜನ ರಕ್ಷಿತ್‌ಗೆ ಶುಭ ಕೋರಿದರು. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಶೆಟ್ರಿಗೆ ಜೋಡಿಯಾಗಿ ನಟಿಸಿದ್ದ ರುಕ್ಮಿಣಿ ವಸಂತ್‌ ರಕ್ಷಿತ್‌ಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದರು. ಇದೀಗ ಅವರು ಮಾಡಿದ ಆ ಪೋಸ್ಟ್‌ ಎಲ್ಲೆಡೆ ಫುಲ್‌ ವೈರಲ್‌ ಆಗ್ತಾ ಇದೆ.

ಇದನ್ನೂ ಓದಿ: ಬರಹಗಾರರಿಗಾಗಿ ಇಲ್ಲಿದೆ ಸುವರ್ಣ ಅವಕಾಶ.. ಸ್ಕ್ರಿಪ್ಟ್ ಬರೆದು ಹಣ ಗೆಲ್ಲಿ !

ರುಕ್ಮಿಣಿ ಮಾಡಿರೋ ಪೋಸ್ಟ್‌ನಲ್ಲಿ ರಕ್ಷಿತ್‌ರನ್ನ ಕ್ಯೂಟ್‌ ಆಗಿ ‘ರಕ್ಸ್‌’ ಅಂತ ಕರೆದಿದ್ದಾರೆ. ರುಕ್ಕು ವಿಶ್‌ಗೆ ರಿಪ್ಲೈ ಮಾಡಿರೋ ರಕ್ಷಿತ್‌ ಕೂಡ ಕ್ಯೂಟ್‌ ಆಗಿ ರುಕ್ಮಿಣಿ ಅವರನ್ನ  ‘ರುಕ್ಸ್’ ಅಂತಾ ಹೇಳುವ ಮೂಲಕ ರಿಪ್ಲೈ ಮಾಡಿದ್ದಾರೆ. ಇದೀಗ ಇವರಿಬ್ಬರ ಕ್ಯೂಟ್‌ ಕಾನ್‌ವರ್ಸೇಷನ್‌ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ರೀಲ್‌ ಲೈಫ್‌ನಲ್ಲಿ ಜೋಡಿ ಹಿಟ್‌ ಆದ್ರೆ ಸಾಕು ಆ ಜೋಡಿ ರಿಯಲ್‌ ಲೈಫ್‌ನಲ್ಲಿ ಒಂದಾದ್ರೆ ಚೆನ್ನಾಗಿರುತೆ ಅಂತ ಜನ ಫಿಕ್ಸ್‌ ಆಗಿಯೇ ಬಿಡ್ತಾರೆ. ಅದ್ರಲ್ಲಂತೂ ಶೆಟ್ರು ಬೇರೆ ಬ್ಯಾಚುಲರ್‌,  ಜನ ಸುಮ್ನೆ ಬಿಡ್ತಾರಾ. ಸೋಶಿಯಲ್‌ ಮಿಡಿಯಾದಲ್ಲಿ ಸುದ್ದಿ ಹಬ್ಬಿಸೋ ಮೂಲಕ ವಿಷಯವನ್ನ ಮದುವೆ ಮಾಡಿಸೋ ರೇಂಜ್‌ಗೆ ತೆಗೆದುಕೊಂಡು ಹೋಗ್ತಾರೆ. 

ಹಾಗಾಗ ಶೆಟ್ರ ಮದುವೆ ಪುಕಾರು ಮಡ್ತಾ ಇರೋ ಜನ, ಶೆಟ್ರೇ ಬೇಗ ರುಕ್ಸ್‌ ಅನ್ನು ಮದುವೆ ಆಗಿ ಅಂತ ಕಮೆಂಟ್‌ ಮಾಡ್ತಾ ಇದ್ದಾರೆ.

Trending News