ಯಶ್ ನೋಡಲು ಬಂದ ಅಭಿಮಾನಿಯ ಕಾಲ ಮೇಲೆ ಹತ್ತಿದ ನಟನ ಬೆಂಗಾವಲು ಕಾರ್! ಅಭಿಮಾನಿಯ ಕಾಲಿಗೆ ಗಾಯ

Yash Fan injured : ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಕಾರು ಹರಿದಿದ್ದು ಯುವಕ ಕಾಲಿಗೆ ಗಾಯವಾಗಿದೆ.

Written by - Ranjitha R K | Last Updated : Feb 29, 2024, 03:02 PM IST
  • ಯಶ್ ಅಭಿಮಾನಿ ಕಾಲ ಮೇಲೆ ಹರಿದ ಬೆಂಗಾವಲು ಕಾರು
  • ಯಶ್ ನೋಡಲು ಬಂದಿದ್ದ ಅಭಿಮಾನಿ
  • ಅಭಿಮಾನಿ ಕಾಲಿಗೆ ತೀವ್ರ ಗಾಯ
ಯಶ್ ನೋಡಲು ಬಂದ ಅಭಿಮಾನಿಯ ಕಾಲ ಮೇಲೆ  ಹತ್ತಿದ ನಟನ ಬೆಂಗಾವಲು ಕಾರ್! ಅಭಿಮಾನಿಯ ಕಾಲಿಗೆ ಗಾಯ  title=

ಬಳ್ಳಾರಿ : Yash Fan injured : ರಾಕಿಂಗ್ ಸ್ಟಾರ್ ಯಶ್ ನೋಡಲು ಅವರ ಕಾರನ್ನು ಹಿಂಬಾಲಿಸುತ್ತಾ ಬಂದ ಅಭಿಮಾನಿಗಳ ಕಾಲುಗಳ ಮೇಲೆ ಯಶ್ ಬೆಂಗಾವಲು ವಾಹನ ಹರಿದಿದೆ. ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಕಾರು ಹರಿದಿದ್ದು ಯುವಕ ಕಾಲಿಗೆ ಗಾಯವಾಗಿದೆ.  

ಬಳ್ಳಾರಿಯ ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಬಂದಿದ್ದರು. ಈ ವೇಳೆ ಯಶ್ ಅನ್ನು ನೋಡುವ ಸಲುವಾಗಿ ಅಲ್ಲಿಗೆ ಅವರ ಅಭಿಮಾನಿಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡುವ ಭರದಲ್ಲಿ ಅಭಿಮಾನಿಗಳು ಯಶ್ ಇರುವ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ಅಚಾನಕಾಗಿ ಯಶ್ ಬೆಂಗಾವಲು ವಾಹನ ಅಭಿಮಾನಿಯೊಬ್ಬರ ಕಾಲಿನ ಮೇಲೆ ಹರಿದಿದೆ. 

ಇದನ್ನೂ ಓದಿ : 500 ಸಂಚಿಕೆಗಳನ್ನ‌ ಯಶಸ್ವಿಯಾಗಿ ಪೂರೈಸಿರುವ ʼʼಜನನಿʼʼ ಸೀರಿಯಲ್!

ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ರಾಕಿಂಗ್ ಸ್ಟಾರ್ ಬೆಂಗಾವಲು ವಾಹನ ಹರಿದಿದೆ. ಯುವಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಇದನ್ನೂ ಓದಿ : Ashika Ranganath: ನಟಿ ಆಶಿಕಾ ರಂಗನಾಥ್ ಮನೆಗೆ ಹೊಸ ಅಳಿಯನ ಆಗಮನ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News