ಹಬ್ಬ ಅಂದರೆ ಸಂಭ್ರಮ , ಸಡಗರ ಬಾರಿಯ ವರಮಹಾಲಕ್ಷ್ಮೀ ಹಬ್ಬ ಕನ್ನಡಿಗರಿಗೆ ವಿಶಿಷ್ಟವಾಗಿರಲಿದ್ದು ತಮ್ಮ ನೆಚ್ಚಿನ ಕಲಾವಿದರ ಜೊತೆ ಆಚರಿಸಬಹುದಾಗಿದೆ. ವೀಕ್ಷಕರ ಜೊತೆ ವಿಶೇಷ ನಂಟು ಹೊಂದಿರುವ ಜೀ಼ಕನ್ನಡ ವಾಹಿನಿ ಅವರ ನಡುವೆಯೇ ಮನರಂಜನೆಯನ್ನು ಹಬ್ಬವಾಗಿಸುತ್ತಿದೆ.
ಪ್ರತಿದಿನ ರಾತ್ರಿ 9 ಗಂಟೆ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ ಹಾಗು 10 ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು , ತಂತ್ರಜ್ಞರು ಉತ್ಸವದಲ್ಲಿ ಭಾಗಿಯಲಿದ್ದು ಹಾಡಿ , ಕುಣಿದು ನೋಡುಗರನ್ನು ರಂಜಿಸಿ ಹಬ್ಬದ ಮೆರುಗನ್ನು ಹೆಚ್ಚಿಸಲಿದ್ದಾರೆ.
ಇದನ್ನೂ ಓದಿ-Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!
ಹದಡಿ ರಸ್ತೆಯ ಐಟಿಐ ಗೇಟ್ ಬಳಿಯಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಜರುಗಲಿದೆ . ಆಗಸ್ಟ್ 4 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆಗಸ್ಟ್ 3 ಶನಿವಾರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಪಾಸ್ ವಿತರಣೆಯಾಗಲಿದೆ.
ಸೀಮಿತ ಆಸನಗಳಿರಲಿದ್ದು ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ವಿಶೇಷ ಸೂಚನೆ ನೀಡಿದೆ.ದಾವಣಗೆರೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮನರಂಜನಾ ಉತ್ಸವಕ್ಕೆ ಆಗಮಿಸಿ ನೆಚ್ಚಿನ ಕಲಾವಿದರ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ