ನವದೆಹಲಿ : 5 Common Lifestyle Mistakes : ಇತ್ತೀಚಿನ ದಿನಗಳಲ್ಲಿ ಹೃದ್ರೋಗಗಳ ಅಪಾಯವು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕೆಟ್ಟ ಜೀವನಶೈಲಿ (Unhealthy Lifestyle) ಮತ್ತು ಆಹಾರ ಪದ್ಧತಿ. ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸದಿದ್ದರೆ, ಗಂಭೀರ ಕಾಯಿಲೆಗಳಿಗೆ ಬಲಿಯಾಗಬೇಕಾಗಬಹುದು. ಇದು ಹೃದಯ ರೋಗಗಳು ಮತ್ತು ಮೂತ್ರಪಿಂಡದ ಕಾಯಿಲೆಗಳ (Kidney Disease) ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ, ಇದು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ವ್ಯಾಯಾಮ ಮಾಡದೆ ಇರುವುದು :
40 ವರ್ಷ ವಯಸ್ಸಿನ ನಂತರ ವ್ಯಾಯಾಮ (Exercise) ಮಾಡದಿದ್ದರೆ, ಅದು ನಿಮಗೆ ಹಾನಿ ಉಂಟು ಮಾಡುತ್ತದೆ. ಈ ವಯಸ್ಸಿನಲ್ಲಿ, ದೈನಂದಿನ ವ್ಯಾಯಾಮವು ಮನಸ್ಸು ಮಟ್ಟು ದೇಹ ಎರಡಕ್ಕೂ ಅವಶ್ಯಕವಾಗಿದೆ. ನಿಮ್ಮ ದಿನಚರಿಯಲ್ಲಿ ಧ್ಯಾನ ಮತ್ತು ವ್ಯಾಯಾಮಗಳನ್ನು ಸೇರಿಸಿ. ಇದರೊಂದಿಗೆ ಬೊಜ್ಜು (Fat) ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ತಪ್ಪಿಸಬಹುದು.
ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದು :
ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಮೂಳೆ ನೋವು ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಇದು ಬೆನ್ನುಹುರಿಗೆ ( Back pain) ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ : Egg Consumption and Type 2 Diabetes: ಮೊಟ್ಟೆ ಸೇವನೆಯಿಂದ ಮಧುಮೇಹದ ಅಪಾಯ ಹೆಚ್ಚುತ್ತದೆಯೇ?
ಧೂಮಪಾನ :
ಧೂಮಪಾನ (Smoking) ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸುತ್ತದೆ.
ಬ್ರೈನ್ ಎಕ್ಸರ್ಸೈಜಫ್ :
40 ವರ್ಷ ವಯಸ್ಸಿನ ನಂತರ ಮೆದುಳಿನ ವ್ಯಾಯಾಮವು (brain exercise) ಬಹಳ ಮುಖ್ಯವಾಗಿರುತ್ತದೆ. ಇದನ್ನೂ ಮಾಡುವಲ್ಲಿ ವಿಫಲವಾದರೆ, ಆಲ್ಜೈಮರ್ ಕಾಯಿಲೆ ಅಥವಾ ಕಡಿಮೆ ಜ್ಞಾಪಕ ಶಕ್ತಿಯ ಸಮಸ್ಯೆಗೆ ಕಾರಣವಾಗಬಹುದು. ಮೆದುಳಿನ ವ್ಯಾಯಾಮಕ್ಕಾಗಿ ಒಗಟುಗಳನ್ನು ಪರಿಹರಿಸಿ. ದೈನಂದಿನ ದಿನಚರಿಯಲ್ಲಿ ಇದನ್ನು ಸೇರಿಸಿ.
ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸಿ :
ಕಾಲಕಾಲಕ್ಕೆ ನಿಮ್ಮ ರಕ್ತದೊತ್ತಡವನ್ನು (Blood pressure) ಪರೀಕ್ಷೆ ಮಾಡುತ್ತಿರಿ. ಇಲ್ಲವಾದರೆ ಇದು ಅಪಾಯವನ್ನು ಹೆಚ್ಚಿಸುತ್ತದೆ. ಬಿಪಿ ಇರುವ ರೋಗಿಗಳಿಗೆ ಕಿಡ್ನಿ ರೋಗಗಳು ಮತ್ತು ಹೃದ್ರೋಗಗಳು (Heart disease) ಬರುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಬಿಪಿಯನ್ನು ನಿಯಮಿತವಾಗಿ ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ : Omicron Vs Delta: ಡೆಲ್ಟಾಗಿಂತ ಭಿನ್ನವಾಗಿರುವ ಓಮಿಕ್ರಾನ್‌ನ ನಾಲ್ಕು ಲಕ್ಷಣಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.