Apple For Weight Loss: ಸ್ಥೂಲಕಾಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಹಿಳೆಯೇ ಆಗಿರಲಿ ಅಥವಾ ಪುರುಷನೇ ಆಗಲಿ ಎಲ್ಲರೂ ಇಂದು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಪ್ಪಗಿರುವುದರಿಂದ ವ್ಯಕ್ತಿಯ ಆತ್ಮವಿಶ್ವಾಸದ ಮಟ್ಟವೂ ಕಡಿಮೆಯಾಗುತ್ತದೆ. ಇದರಿಂದಾಗಿ ತೂಕ ಇಳಿಕೆ ಮಾಡಿಕೊಳ್ಳಲು ಅವರು ವಿವಿಧ ರೀತಿಯ ಔಷಧಗಳನ್ನು ಸೇವಿಸಲು ಆರಂಭಿಸುತ್ತಾರೆ. ಆದರೆ ಔಷಧವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಕೆಲ ಸಂಗತಿಗಳನ್ನು ನಾವು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ, ಬೊಜ್ಜಿನ ಸಮಸ್ಯೆಯನ್ನು ನಾವು ತೊಡೆದುಹಾಕಬಹುದು. ಹೀಗಿರುವಾಗ, ನಮ್ಮ ಆಹಾರದಲ್ಲಿ ನಾವು ಸೇಬುಹಣ್ಣನ್ನು ಸೇರಿಸಿಕೊಳ್ಳಬಹುದು. ಹೌದು, ಸೇಬು ಆರೋಗ್ಯಕರವಾಗಿರುವುದರ ಜೊತೆಗೆ ತೂಕವನ್ನು ಇಳಿಕೆ ಮಾಡುವಲ್ಲಿ ಪರಿಣಾಮಕಾರಿ ಸಾಬೀತಾಗಲಿದೆ. ಸೇಬಿನಲ್ಲಿರುವ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೇಬುಹಣ್ಣನ್ನು ಸೇವಿಸಿ ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ತೂಕ ಇಳಿಕೆಯಲ್ಲಿ ಸೇಬಿನ ಪ್ರಯೋಜನಗಳು
ಸೇಬು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ
ಸೇಬು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಆಹಾರವಾಗಿದೆ, ಆದ್ದರಿಂದ ತೂಕ ಇಳಿಕೆಗೆ ಸೇಬು ಪ್ರಯೋಜನಕಾರಿಯಾಗಿದೆ. ದೊಡ್ಡ ಗಾತ್ರದ ಸೇಬು ಅಂದರೆ ಸುಮಾರು 225 ಗ್ರಾಂ ಸೇಬು 116 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನಿಮ್ಮ ಲಘು ಆಹಾರದಲ್ಲಿ ನೀವು ಸೇಬುಹಣ್ಣನ್ನು ಸೇರಿಸಿಕೊಳ್ಳಬಹುದು. ಪ್ರೋಟೀನ್ ಮತ್ತು ಕೊಬ್ಬಿನೊಂದಿಗೆ ಬೆರೆಸಿ ಸೇಬುಹಣ್ಣನ್ನು ಸೇವಿಸಿದರೆ, ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ ಮತ್ತು ತೂಕವು ನಿಯಂತ್ರಣದಲ್ಲಿರುತ್ತದೆ.
ಸೇಬುಹಣ್ಣು ಫೈಬರ್ನಿಂದ ಸಮೃದ್ಧವಾಗಿದೆ
ಫೈಬರ್ ಭರಿತ ಆಹಾರಗಳು ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿರುತ್ತವೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಫೈಬರ್ ನಿಂದ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದ ಅನುಭವವಾಗುತ್ತದೆ ಮತ್ತು ಬೇಗನೆ ಹಸಿವಾಗುವುದಿಲ್ಲ. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಸೇಬುಹಣ್ಣು ಫೈಬರ್ನ ಅತ್ಯುತ್ತಮ ಮೂಲವಾಗಿದೆ. ಸೇಬು ಸೇವನೆಯು ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಇರುತ್ತದೆ
ಸೇಬು ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುತ್ತದೆ, ಸೇಬು ಹಣ್ಣುಗಳನ್ನು ತಿನ್ನುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಹೈಡ್ರೇಟೆಡ್ ದೇಹವು ತೂಕ ಇಳಿಕೆ ಮತ್ತು ಕೊಬ್ಬು ಸುಡುವಿಕೆಗೆ ಕಾರಣವಾಗುತ್ತದೆ. ಸೇಬುಗಳಲ್ಲಿ ಇರುವ ನೀರು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ-Hairfall Reducing Juice: ಕೂದಲುದುರುವಿಕೆ ಮತ್ತು ಮಲಬದ್ಧತೆ ಸಮಸ್ಯೆಗೆ ರಾಮಬಾಣ ಉಪಾಯ ಈ ಜ್ಯೂಸ್
ತೂಕ ಇಳಿಕೆಗಾಗಿ ಸೇಬು ಹಣ್ಣನ್ನು ಹೇಗೆ ಸೇವಿಸಬೇಕು?
1- ತೂಕ ಇಳಿಕೆಗಾಗಿ, ಸೇಬನ್ನು ಕತ್ತರಿಸುವ ಮೂಲಕ ನೇರವಾಗಿ ಸೇವಿಸಬಹುದು.
2- ತೂಕ ಇಳಿಕೆಗಾಗಿ ನೀವು ಸೇಬುಹಣ್ಣಿನ ಜ್ಯೂಸ್ ಅನ್ನು ಕೂಡ ಸೇವಿಸಬಹುದು ಆದರೆ ಮನೆಯಲ್ಲಿ ತಯಾರಿಸಿದ ಅದರ ರಸವನ್ನು ಕುಡಿಯಿರಿ.
3- ಸೇಬುಹಣ್ಣನ್ನು ಓಟ್ಸ್ ಇತ್ಯಾದಿಗಳೊಂದಿಗೆ ಬೆರೆಸಿ ಕೂಡ ನೀವು ಸೇವಿಸಬಹುದು.
ಇದನ್ನೂ ಓದಿ-Body Detox: ಶರೀರವನ್ನು ನಿರ್ವಿಷಗೊಳಿಸುವ ಅವಶ್ಯಕತೆ ಇದೆ ಎನ್ನುತ್ತವೆ ಈ ಸಂಕೇತಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.