ಬೆಂಗಳೂರು : ವಯಸ್ಸಾದಂತೆ ಬಿಳಿ ಕೂದಲಿನ ಸಮಸ್ಯೆ ಚರ್ಮದ ಸಮಸ್ಯೆ ಎದುರಿಸುವುದು ಸಾಮಾನ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಇದು ಒತ್ತಡಭರಿತ ಜೀವನ, ಕಳಪೆ ಆಹಾರ, ರಾಸಾಯನಿಕಗಳ ಬಳಕೆ ಮತ್ತು ಹೇರ್ ಕಲರ್ ಮುಂತಾದುವುಗಳಿಂದ ಉಂಟಾಗಬಹುದು. ಆದರೆ ಇದಕ್ಕೆ ಪರಿಹಾರವಾಗಿ ಮತ್ತೆ ರಾಸಾಯನಿಕಗಳ ಮೊರೆ ಹೋಗುವ ಪರಿಪಾಟ ಹೆಚ್ಚುತ್ತಿದೆ. ಮನೆ ಮದ್ದಿನ ಮೂಲಕ ಬಿಳಿ ಕೂದಲಿನ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕಬಹುದು. ಹೌದು, ತೆಂಗಿನೆಣ್ಣೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
ಬಿಳಿ ಕೂದಲು ಮತ್ತೆ ಕಪ್ಪಾಗಲು ಏನು ಮಾಡಬೇಕು ? :
ತೆಂಗಿನೆಣ್ಣೆಯನ್ನು ಕೂದಲಿನ ಆರೈಕೆಗೆ ಮುಖ್ಯ ಔಷಧಿ ಎಂದು ಹೇಳಲಾಗುತ್ತದೆ. ತೆಂಗಿನೆಣ್ಣೆ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಆದರೆ ಈ ಎಣ್ಣೆಯೊಂದಿಗೆ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಈ ಮಿಶ್ರಣ ಕೂದಲಿಗೆ ಉತ್ತಮ ಪೋಷಣೆಯನ್ನೂ ನೀಡುತ್ತದೆ.
ಇದನ್ನೂ ಓದಿ : Health Tips: ಕೂದಲು ಉದುರುವಿಕೆ ನಿಯಂತ್ರಣಕ್ಕೆ ಕೆಫೀನ್ ಸಹಕಾರಿ
ನಿಂಬೆ ಏಕೆ ಕೂದಲಿಗೆ ಒಳ್ಳೆಯದು?
ಕೂದಲಿನ ಆರೋಗ್ಯವನ್ನು ಸುಧಾರಿಸಲು ನಿಂಬೆಯನ್ನು ಬಳಸಲಾಗುತ್ತದೆ. ಇದು ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ತಲೆ ಹೊಟ್ಟಿನ ಸಮಸ್ಯೆ ಶಮನವಾದರೆ ಕೂದಲಿನ ಬೆಳವಣಿಗೆ ಸುಲಭವಾಗಿ ಆಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದನ್ನು ತಡೆಯಬೇಕಾದರೆ ತೆಂಗಿನೆಣ್ಣೆ ಜೊತೆ ಕೂದಲಿಗೆ ನಿಂಬೆರಸವನ್ನು ಹಚ್ಚಿ. ಇದು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ.
ಬಿಳಿ ಕೂದಲನ್ನು ಕಪ್ಪಾಗಿಸುವುದು ಹೇಗೆ ? :
ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾದರೆ ಈ ಸಮಸ್ಯೆಯನ್ನು ನಿಂಬೆ ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ಸರಿಪಡಿಸಬಹುದು. ದೇಹದಲ್ಲಿ ಮೆಲನಿನ್ ಉತ್ಪಾದನೆಯು ಕಡಿಮೆಯಾದಾಗ, ನಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ತೆಂಗಿನೆಣ್ಣೆಯೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚಬೇಕು. ನಿತ್ಯ ಹೀಗೆ ಮಾಡಿದರೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಇದನ್ನೂ ಓದಿ : Hair Care: ಮೊಟ್ಟೆ ಜೊತೆ 2 ಚಮಚ ಈ ಎಣ್ಣೆಯನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ: ತಕ್ಷಣವೇ ಕೂದಲು ಆಗುತ್ತೆ ಶೈನ್!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.