ನವದೆಹಲಿ: ಕೂದಲು ಉದುರುವಿಕೆ ಬಹುತೇಕ ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಪೋಷಕಾಂಶಗಳ ಕೊರತೆ, ಮಾನಸಿಕ ಒತ್ತಡ, ಅನಾರೋಗ್ಯ ಮುಂತಾದ ಕಾರಣಗಳಿಂದ ಕೂದಲು ಉದುರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಕೆಲವರಿಗೆ ಬೊಕ್ಕು ತಲೆಯ ಸಮಸ್ಯೆ ಕಂಡುಬರುತ್ತಿದೆ. ಇಂದು ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ.
ಕೂದಲು ಉದುರುವಿಕೆ ಸಮಸ್ಯೆ ಎದುರಿಸುವವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಬಳಸಬೇಕೆಂದು ತಲೆಕೆಡೆಸಿಕೊಳ್ಳುತ್ತಾರೆ. ಕೂದಲು ಉದುರುವಿಕೆ ನಿಯಂತ್ರಿಸಿ ಮತ್ತೆ ಬೆಳೆಯುವಂತೆ ಮಾಡಲು ಅನೇಕ ನೈಸರ್ಗಿಕ ಚಿಕಿತ್ಸೆಗಳಿವೆ. ಕೂದಲಿನ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುವ ಕೆಫೀನ್ ಸಾಮರ್ಥ್ಯದ ಬಗ್ಗೆ ಆರೋಗ್ಯ ತಜ್ಞರು ಏನು ಹೇಳಿದ್ದಾರೆಂದು ತಿಳಿಯಿರಿ.
ಇದನ್ನೂ ಓದಿ: ಉತ್ತಮ ಸ್ಕಿನ್ ಟೋನರ್ ರೋಸ್ ವಾಟರ್
ಕೂದಲಿನ ಆರೋಗ್ಯಕ್ಕೆ ಕೆಫೀನ್ ಹೇಗೆ ಸಹಕಾರಿ?
* ಕೂದಲು ಮತ್ತು ನೆತ್ತಿಗೆ ಕಾಫಿ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಮತ್ತೆ ಬೆಳೆಯಲು ಇದು ಸಹಕಾರಿಯಾಗಿದೆ.
* ಸಂಶೋಧನೆಯ ಪ್ರಕಾರ ಕಾಫಿಯಲ್ಲಿರುವ ಕೆಫೀನ್ ಅಂಶವು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮತ್ತು ಕೂದಲು ಉದುರುವಿಕೆ ನಿಯಂತ್ರಿಸಲು ಸಹಕಾರಿ.
* ಪುರುಷರ ಬೊಕ್ಕು ತಲೆ ಸಮಸ್ಯೆ, ಮಿತಿ ಮೀರಿದ ಕೂದಲು ಉದುರುವಿಕೆಗೆ ಹಾಗೂ ಕೂದಲ ಬುಡ ಹಾನಿಗೀಡಾಗುವುದಕ್ಕೆ ಕಾರಣವಾಗುವ ಲೈಂಗಿಕ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ ಪರಿಣಾಮಗಳನ್ನು ತಡೆಯುತ್ತದೆ.
* ಹೆಚ್ಚು ಡಿಎಚ್ಟಿ ಹೊಂದಿರುವ ಮಹಿಳೆಯರು ಕೂಡ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸಬಹುದು.
* ಕಾಫಿಯು ನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಗಳ ಖನಿಜವಾಗಿದ್ದು, ಇದು ಕೂದಲಿನ ಆರೋಗ್ಯಕ್ಕೆ ಸಹಕಾರಿ.
* ಕೂದಲಿನ ಉದ್ದ ಹಾಗೂ ಆರೋಗ್ಯವು ಹೇರ್ ಫೋಲಿಕಲ್ಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಕಾಫಿಯು ಈ ಹೇರ್ ಫೋಲಿಕಲ್ಗಳನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುತ್ತದೆ.
* ಅತಿಯಾದ ಧೂಮಪಾನ, ಮದ್ಯಪಾನದಿಂದಲೂ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುತ್ತದೆ.
* ಹಾರ್ಮೋನ್ ಗಳ ವ್ಯತ್ಯಾಸ ಉಂಟಾದಾಗ ಕೂದಲು ಉದುರುತ್ತವೆ. ವಿಪರೀತ ಕೂದಲು ಉದುರುವ ಸಮಸ್ಯೆ ಇದ್ದರೆ ವೈದ್ಯರಿಂದ ಸೂಕ್ತ ಸಲಹೆ ಪಡೆಯುವುದು ಉತ್ತಮ.
* ಕಾಫಿಯಿಂದ ಕೂದಲಿಗೆ ಹಲವಾರು ಲಾಭಗಳಿವೆ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.
* ಕೆಫೀನ್ ಅಂಶವು ಕೂದಲು ಉದುರುವಿಕೆಯನ್ನು ತಪ್ಪಿಸಿ ಅದರ ಬೆಳವಣಿಗೆಗೆ ಕಾರಣವಾಗುತ್ತದೆ.
* ಕೂದಲು ಉದುರುವಿಕೆ ನಿಯಂತ್ರಣ ಮತ್ತು ಅದರ ಬೆಳವಣಿಗೆಯ ಮೇಲೆ ಕೆಫೀನ್ನ ವಿಶೇಷ ಪರಿಣಾಮ ಬೀರುತ್ತದೆ.
* ಕೂದಲು ಬೆಳವಣಿಗೆಯ ಉತ್ತೇಜನಕ್ಕೆ ಕೆಫೀನ್ ಉತ್ತಮ ಆಯ್ಕೆಯಾಗಿದೆ ಎಂದು ಅನೇಕ ಅಧ್ಯಯನಗಳು ತಿಳಿಸಿದೆ.
* ಕೂದಲು ಕೋಶದ ಬೆಳವಣಿಗೆಗೆ ಕೆಫೀನ್ ಅತ್ಯುತ್ತಮ ಸಾಧನವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Lifestyle: ತಿಂಗಳು ಗಟ್ಟಲೇ ಒಂದೇ ಬ್ರೆಶ್ನಿಂದ ಹಲ್ಲು ಉಜ್ಜುತ್ತೀರಾ..? ಹಾಗಿದ್ರೆ ಹುಷಾರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.