Best Type Of Banana For Weight Loss:ಇತರ ಹಣ್ಣುಗಳಂತೆ ಬಾಳೆಹಣ್ಣಿನಲ್ಲಿ ಕೂಡ ಅನೇಕ ಪೌಷ್ಠಿಕಾಂಶಗಳು ಕಂಡುಬರುತ್ತವೆ. ಇದರೊಂದಿಗೆ ಬಾಳೆಹಣ್ಣನ್ನು ಉತ್ತಮ ಶಕ್ತಿಯ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆ ಹಣ್ಣಿನ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ನಿಯಮಿತವಾಗಿ ಬಾಳೆಹಣ್ಣನ್ನು ಸೇವಿಸುವುದರ ಮೂಲಕ ನಿಮ್ಮ ತೂಕವನ್ನು ಸಹ ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ಹೌದು, ತೂಕ ಇಳಿಸಿಕೊಳ್ಳಲು, ನೀವು ಯಾವ ರೀತಿಯ ಬಾಳೆಹಣ್ಣನ್ನು (Banana) ಸೇವಿಸಬೇಕು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ನೀವು ತೂಕ ಇಳಿಸಿಕೊಳ್ಳಲು (Weight Loss) ಬಯಸಿದರೆ, ಯಾವ ರೀತಿಯ ಬಾಳೆಹಣ್ಣನ್ನು ಸೇವಿಸಬೇಕು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ.
ಇದನ್ನೂ ಓದಿ - Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ
ಹಳದಿ ಬಾಳೆಹಣ್ಣು - ಹಳದಿ ಬಾಳೆಹಣ್ಣನ್ನು ಎಲ್ಲರಿಗೂ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇತರೆ ಬಾಳೆಹಣ್ಣಿಗಿಂತ ಹಳದಿ ಬಾಳೆಹಣ್ಣು ಹೆಚ್ಚು ಪ್ರಯೋಜನಕಾರಿಯಾಗಿದೆ. ಹಳದಿ ಬಾಳೆಹಣ್ಣಿನ (Banana) ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿರಿಸುತ್ತದೆ.
ಕಂದು ಬಾಳೆಹಣ್ಣು (ಓವರ್‌ರೈಪ್) - ಬಾಳೆಹಣ್ಣನ್ನು ದೀರ್ಘಕಾಲ ಇಟ್ಟಾಗ ಅದು ಕರಗಲು ಪ್ರಾರಂಭಿಸುತ್ತದೆ ಮತ್ತು ಅದರ ಮೇಲಿನ ಪದರವು ಕಂದು ಬಣ್ಣಕ್ಕೆ ತಿರುಗುತ್ತದೆ. ಕಂದು ಬಾಳೆಹಣ್ಣಿನಲ್ಲಿ 0.45 ಗ್ರಾಂ ಪಿಷ್ಟವಿದೆ ಎಂದು ಹೇಳಲಾಗುತ್ತದೆ. ಹಳದಿ ಬಾಳೆಹಣ್ಣಿನಲ್ಲಿ 3.1 ಗ್ರಾಂ ಫೈಬರ್ ಇದ್ದು, ಇದು ನಮ್ಮ ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ. ಕಂದು ಬಾಳೆಹಣ್ಣಿನ ಬಗ್ಗೆ ಹೇಳುವುದಾದರೆ ಅದರಲ್ಲಿ 1.9 ಗ್ರಾಂ ಫೈಬರ್ ಇರುತ್ತದೆ.
ಇದನ್ನೂ ಓದಿ - Immunity Booster: ಈ 5 ಆಹಾರ ಸೇವಿಸಿದರೆ ನಿಮ್ಮ ಹತ್ತಿರವೂ ಸುಳಿಯಲ್ವಂತೆ ಕರೋನಾ!
ಹಸಿರು ಬಾಳೆಹಣ್ಣು- ವರದಿಯ ಪ್ರಕಾರ, ಹಸಿರು ಬಾಳೆಹಣ್ಣಿನಲ್ಲಿ ಕಂದು ಬಾಳೆಹಣ್ಣುಗಿಂತ ಕಡಿಮೆ ಸಕ್ಕರೆ ಇರುತ್ತದೆ. ಇದರಲ್ಲಿ ಪ್ರತಿರೋಧಕ ಪಿಷ್ಟ ಕಂಡುಬರುತ್ತದೆ, ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವು ಉಂಟಾಗುವುದಿಲ್ಲ. ಹಾಗಾಗಿ ಆಹಾರ ತಜ್ಞರು ಹಸಿರು ಬಾಳೆಹಣ್ಣನ್ನು ತಿನ್ನಲು ಶಿಫಾರಸು ಮಾಡುತ್ತಾರೆ.
ಡಯಾಬಿಟಿಸ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ಕಂದು ಬಾಳೆಹಣ್ಣಿನ ಬದಲು ಹಳದಿ ಬಾಳೆಹಣ್ಣನ್ನು ತಿನ್ನಲು ಬಯಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ವೇಗವಾಗಿ ಹೆಚ್ಚಾಗುವುದಿಲ್ಲ. ನೀವು ತೂಕ ಇಳಿಸಿ (Weight Loss)ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಳದಿ ಬಾಳೆಹಣ್ಣು ನಿಮಗೆ ಉತ್ತಮವಾಗಿದೆ. ಉತ್ತಮ ಮಾಗಿದ ಬಾಳೆಹಣ್ಣು ತಿನ್ನುವುದಕ್ಕೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.