ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಬಡವರ ಬಾದಾಮಿಯನ್ನು ಈ ಸಮಯದಲ್ಲಿ ಎಂದಿಗೂ ಸೇವಿಸಬೇಡಿ

ಬಡವರ ಬಾದಾಮಿ ಕಡಲೇಕಾಯಿ :  ಬಡವರ ಬಾದಾಮಿ, ಅಗ್ಗದ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಕಡಲೇಕಾಯಿಯಲ್ಲಿ ಅನೇಕ ಪ್ರಮುಖ ಪೋಷಕಾಂಶಗಳಿದ್ದು ಇದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.  ಆದರೆ ಇದನ್ನು ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಮಾತ್ರ ಪ್ರಯೋಜನ ಲಭ್ಯವಾಗಲಿದೆ.

Written by - Yashaswini V | Last Updated : Apr 25, 2022, 01:07 PM IST
  • ಕಡಲೇಕಾಯಿ ಅಥವಾ ನೆಲಗಡಲೆ ಬಾದಾಮಿಯಷ್ಟೇ ಪೌಷ್ಟಿಕವಾಗಿದೆ.
  • ಇದು ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ.
  • ಹಾಗಾಗಿಯೇ ಇದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ.
ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಬಡವರ ಬಾದಾಮಿಯನ್ನು ಈ ಸಮಯದಲ್ಲಿ ಎಂದಿಗೂ ಸೇವಿಸಬೇಡಿ  title=
Benefits Of Peanuts

ಬಡವರ ಬಾದಾಮಿ ಕಡಲೇಕಾಯಿ :  ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವನೆ ಅತ್ಯಗತ್ಯ. ಒಳ್ಳೆಯ ಆಹಾರ ಎಂದರೆ ಕೇವಲ ದುಬಾರಿ ಆಹಾರ ಎಂದು ಅರ್ಥವಲ್ಲ, ಉತ್ತಮ ಪೋಷಕಾಂಶ ಭರಿತ ಆಹಾರ ಎಂದರ್ಥ. ಇಂತಹ ಆಹಾರಗಳಲ್ಲೇ ಒಂದು ಕಡಲೇಕಾಯಿ. ಬಡವರ ಬಾದಾಮಿ, ಅಗ್ಗದ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಕಡಲೇಕಾಯಿಯಲ್ಲಿ ಅನೇಕ ಪ್ರಮುಖ ಪೋಷಕಾಂಶಗಳಿದ್ದು ಇದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.   ಮಧುಮೇಹ, ಹೃದಯ ಸಂಬಂಧಿತ ಕಾಯಿಲೆ ಸೇರಿದಂತೆ ಹಲವು ರೋಗಗಳಿಗೆ ಕಡಲೇಕಾಯಿಯನ್ನು ರಾಮಬಾಣ ಎಂದು ಹೇಳಲಾಗುತ್ತದೆ. ಆದರೆ, ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಮಾತ್ರ ಪ್ರಯೋಜನ ಸಿಗಲಿದೆ. 

ಬಡವರ ಬಾದಾಮಿ ಕಡಲೇಕಾಯಿ:
ಕಡಲೇಕಾಯಿ ಅಥವಾ ನೆಲಗಡಲೆ ಬಾದಾಮಿಯಷ್ಟೇ ಪೌಷ್ಟಿಕವಾಗಿದೆ. ಆದರೆ ಇದು ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತದೆ. ಹಾಗಾಗಿಯೇ ಇದನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ.  

ಈ ಸಮಯದಲ್ಲಿ ಕಡಲೇಕಾಯಿ ಸೇವನೆ ತಪ್ಪಿಸಿ:
ಕಡಲೇಕಾಯಿ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ರಾತ್ರಿ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುತ್ತದೆ. ಹಾಗಾಗಿ, ರಾತ್ರಿಯಲ್ಲಿ ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು ಎಂಬುದನ್ನು ನೆನಪಿಡಿ.

ಇದನ್ನೂ ಓದಿ- ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ

ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧ ನೆನೆಸಿದ ಕಡಲೆಕಾಯಿ:
ಆರೋಗ್ಯ ತಜ್ಞರ ಪ್ರಕಾರ, ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಣೆ ಪಡೆಯಲು ನೆನೆಸಿದ ಕಡಲೆಕಾಯಿ ರಾಮಬಾಣ ಇದ್ದಂತೆ. ಕಡಲೇಕಾಯಿಯು ಹಲವು ಗುಣಲಕ್ಷಣಗಳು ಚಯಾಪಚಯವನ್ನು ವೇಗಗೊಳಿಸಲು ಸಹಕಾರಿಯಾಗಿದೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ ಎಂದು ಹೇಳಲಾಗುತ್ತದೆ. 

ದೇಹಕ್ಕೆ ಅಗತ್ಯವಾದ ಪ್ರೋಟೀನ್‌ಗಳು, ಕೊಬ್ಬುಗಳು, ವಿಟಮಿನ್‌ಗಳು, ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಕಡಲೆಕಾಯಿಯಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. 

ಕಡಲೇಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು:
* ಹೃದಯದ ಆರೋಗ್ಯ:

ಬೇರೆ ಡ್ರೈ ಫ್ರೂಟ್ಸ್ ಗಳಂತೆ ಕಡಲೆಕಾಯಿ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಕಡಲೆಕಾಯಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಮಧುಮೇಹಿಗಳು ಬೆಲ್ಲದ ಚಹಾ ಸೇವಿಸಬಹುದೇ?

* ಕ್ಯಾನ್ಸರ್ ಅಪಾಯ ಕಡಿಮೆ ಮಾಡಲಿದೆ:
ಕಡಲೆಕಾಯಿ ಅಥವಾ ಪೀನಟ್ಸ್ ಬಟರ್ ಸೇವನೆಯಿಂದ  ಗ್ಯಾಸ್ಟ್ರಿಕ್ ನಾನ್ಕಾರ್ಡಿಯಾ ಅಡೆನೊಕಾರ್ಸಿನೋಮಾ ಎಂಬ ನಿರ್ದಿಷ್ಟ ರೀತಿಯ ಕೊಲೊನ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಟೈಪ್ 2 ಮಧುಮೇಹದ ಅಪಾಯ:
ಕಡಲೆಕಾಯಿಯನ್ನು ತಿನ್ನುವುದರಿಂದ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸಿದೆ. ಕಡಲೆಕಾಯಿ ಕಡಿಮೆ ಗ್ಲೈಸೆಮಿಕ್ ಆಹಾರವಾಗಿದೆ, ಇದನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದಿಲ್ಲ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News