ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಈ ಪಾನೀಯ ಸೇವಿಸಿ

EasyRemedy for belly fat : ತೆಳ್ಳಗಿನ ಸೊಂಟವನ್ನು ಪಡೆಯುವುದು ಬಹುತೇಕರ ಬಯಕೆಯಾಗಿರುತ್ತದೆ. ನೀವು ಕೂಡಾ ಈ ಸಾಲಿನಲ್ಲಿದ್ದರೆ ನಾವು ಹೇಳುವ ಪಾನೀಯಗಳನ್ನು ನಿತ್ಯ ಸೇವಿಸಿ. 

Written by - Ranjitha R K | Last Updated : Apr 4, 2023, 02:04 PM IST
  • ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ.
  • ಕೆಲವರು ಇದಕ್ಕಾಗಿ ಜಿಮ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ.
  • ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುವ ಪಾನೀಯಗಳು
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರತಿದಿನ ಈ ಪಾನೀಯ  ಸೇವಿಸಿ  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಕೆಲವರು ಇದಕ್ಕಾಗಿ ಜಿಮ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಆದರೂ ಕೆಲವೊಮ್ಮೆ ನಿರೀಕ್ಷಿಸುವ ಫಲಿತಾಂಶ ಸಿಗುವುದಿಲ್ಲ. ಹೀಗಾದಾಗ ಚಿಂತಿಸಬೇಕಾಗಿಲ್ಲ. ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುವ ಕೆಲವು ಪಾನೀಯಗಳನ್ನು  ಸೇವಿಸಬಹುದು. ಈ ಪಾನೀಯಗಳನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.   ನಿಮ್ಮ  ಸೊಂಟ ಕೂಡಾ ಸ್ಲಿಮ್ ಆಗಬೇಕೆಂದರೆ ಇಂದಿನಿಂದಲೇ ಈ ಪಾನೀಯಗಳನ್ನು ಸೇವಿಸಲು ಪ್ರಾರಂಭಿಸಿ.

ತೆಳ್ಳಗಿನ ಸೊಂಟವನ್ನು ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ : 
ಜೀರಿಗೆ ನೀರು :
ಜೀರಿಗೆ ನೀರು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ,  ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದಕ್ಕಾಗಿ ಒಂದು ಚಮಚ ಜೀರಿಗೆಯನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಈ ನೀರನ್ನು ಬೆಳಿಗ್ಗೆ 5 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಸೋಸಿಕೊಂಡು ಕುಡಿಯಿರಿ. ಈ ನೀರು ನಿಮ್ಮ ಸೊಂಟವನ್ನು ತೆಳ್ಳಗೆ ಮಾಡಳು ಸಹಾಯ ಮಾಡುತ್ತದೆ. ಇದರೊಂದಿಗೆ ನಿಮ್ಮ ತೂಕ ಕೂಡಾ ವೇಗವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ.

ಇದನ್ನೂ ಓದಿ : Weight Loss Tips: ತೂಕ ಹೆಚ್ಚಾಗುವ ಚಿಂತೆಯೇ? ಹಾಗಾದ್ರೆ ಈ 5 ಪದಾರ್ಥ ಮುಟ್ಟಲೇಬೇಡಿ!

ಸೋಂಪು ನೀರು :
ಸೋಂಪು ನೀರನ್ನು ಕುಡಿಯುವುದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಟಾಕ್ಸಿನ್‌ಗಳು ಹೊರಹೋಗುತ್ತವೆ ಮತ್ತು ತೂಕವು ಶೀಘ್ರವಾಗಿ ಕಡಿಮೆಯಾಗುತ್ತದೆ. ಸೋಂಪು  ನೀರನ್ನು ತಯಾರಿಸಲು, ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೋಂಪು  ಅನ್ನು ನೆನೆಸಿಡಿ. ಬೆಳಗ್ಗೆ ಎದ್ದ ನಂತರ ಈ ನೀರನ್ನು 5 ನಿಮಿಷ ಕುದಿಸಿ ಫಿಲ್ಟರ್ ಮಾಡಿ ಕುಡಿಯಿರಿ. ಹೀಗೆ ಮಾಡುವುದರಿಂದ, ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ.

ನಿಂಬೆ ನೀರು :
ನಿಂಬೆ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ನಿಂಬೆ ನೀರನ್ನು ತಯಾರಿಸಲು, ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ನಿಂಬೆ ಹಿಂಡಿ ಆ ನೀರನ್ನು ಕುಡಿಯಿರಿ. ಈ ನೀರನ್ನು ಕುಡಿಯುವುದರಿಂದ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಳೆದುಕೊಳ್ಳಬಹುದು.

ಇದನ್ನೂ ಓದಿ Insomnia: ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ರಾತ್ರಿ ಈ 3 ಪದಾರ್ಥ ಸೇವಿಸಬೇಡಿ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News