Lemon Side Effects: ಅತಿಯಾಗಿ ನಿಂಬೆ ಸೇವಿಸ್ತೀರಾ, ಹುಷಾರ್!

Side Effects Of Lemon: ನಿಂಬೆ, ನೀರಿಗೆ ರುಚಿ, ಪರಿಮಳ ನೀಡುವುದರ ಜೊತೆಗೆ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳಾದ ಪೊಟ್ಯಾಸಿಯಮ್ ಮತ್ತು ಫೋಲೇಟ್‌ನಂತಹ ಅಗತ್ಯ ಪೋಷಕಾಂಶಗಳನ್ನು ಸಹ ನೀಡುತ್ತದೆ. ಉತ್ತಮ ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಿರುವ ನಿಂಬೆಯ ಅತಿಯಾದ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Apr 3, 2023, 01:36 PM IST
  • ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಭರಪೂರಿತವಾದ ರಿಫ್ರೆಶ್ ನಿಂಬೆ ಪಾನೀಯ ಆರೋಗ್ಯಕ್ಕೆ ತ್ಗುಂಬಾ ಪ್ರಯೋಜನಕಾರಿ.
  • ಅದರಲ್ಲೂ ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರಿಗೆ ಇದು ದಿವ್ಯೌಷಧಕ್ಕಿಂತ ಕಡಿಮೆ ಇಲ್ಲ.
  • ಆದರೆ, ನಿಂಬೆ ರಸದ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
Lemon Side Effects: ಅತಿಯಾಗಿ ನಿಂಬೆ ಸೇವಿಸ್ತೀರಾ, ಹುಷಾರ್! title=
Side effects of lemon

Lemon Side Effects: ನಿಂಬೆಹಣ್ಣಿನಲ್ಲಿ ಅದರ ಬೀಜವಿಲ್ಲದಿದ್ದರೆ ಅದು ಅಮೃತವೇ ಆಗುತ್ತಿತ್ತು ಎಂದು ನೀವು ಕೇಳಿರಬಹುದು. ನಿಂಬೆ ಹಣ್ಣು ವಿಟಮಿನ್ ಸಿಯ ಅತ್ಯುತ್ತಮ ಮೂಲ. ತೂಕ ಇಳಿಕೆಯಿಂದ ಹಿಡಿದು ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ನಿಂಬೆ ಹಣ್ಣು ಆರೋಗ್ಯಕ್ಕೆ ವರದಾನವಿದ್ದಂತೆ ಎಂಬ ಮಾತಿನಲ್ಲಿ ಖಂಡಿತವಾಗಿಯೂ ಅತಿಶಯೋಕ್ತಿ ಏನಿಲ್ಲ. ಹಾಗಂತ, ಅತಿಯಾದರೆ ಅಮೃತವೂ ವಿಷ ಎಂಬ ಮಾತನ್ನೂ ಮರೆಯುವಂತಿಲ್ಲ. ಉತ್ತಮ ಆರೋಗ್ಯಕ್ಕೆ ನಿಂಬೆಯ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು, ಆದರೆ, ಇದನ್ನು ಅತಿಯಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಅಡ್ಡಪರಿಣಾಮಗಳು ಬೀರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ....

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಭರಪೂರಿತವಾದ ರಿಫ್ರೆಶ್  ನಿಂಬೆ ಪಾನೀಯ ಆರೋಗ್ಯಕ್ಕೆ ತ್ಗುಂಬಾ ಪ್ರಯೋಜನಕಾರಿ. ಅದರಲ್ಲೂ ತೂಕ ಇಳಿಕೆ ಪ್ರಕ್ರಿಯೆಯಲ್ಲಿರುವವರಿಗೆ ಇದು ದಿವ್ಯೌಷಧಕ್ಕಿಂತ ಕಡಿಮೆ ಇಲ್ಲ. ಆದರೆ, ನಿಂಬೆ ರಸದ ಅತಿಯಾದ ಸೇವನೆಯು ಹೊಟ್ಟೆಯ ಸಮಸ್ಯೆಗಳು, ಹಲ್ಲಿನ ಸಮಸ್ಯೆಗಳು, ನಿರ್ಜಲೀಕರಣ ಮತ್ತು ತೀವ್ರ ಮೈಗ್ರೇನ್‌ಗೆ ಹೇಗೆ ಕಾರಣವಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಿದ್ದರೆ. ಅತಿಯಾದ ನಿಂಬೆ ಸೇವನೆ ಅಥವಾ ನಿಂಬೆ ಪಾನೀಯ ಸೇವನೆಯಿಂದ ಆರೋಗ್ಯದ ಮೇಲೆ ಏನೆಲ್ಲಾ ಅಡ್ಡಪರಿಣಾಮಗಳು ಕಂಡು ಬರುತ್ತವೆ ಎಂದು ತಿಳಿಯೋಣ...

ಅತಿಯಾದ ನಿಂಬೆ ಸೇವನೆಯ ಅಡ್ಡಪರಿಣಾಮಗಳು:- 
ತೀವ್ರ ಜೀರ್ಣಕಾರಿ ಸಮಸ್ಯೆ:

ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ನಿತ್ಯ ಜೇನುತುಪ್ಪದೊಂದಿಗೆ ನಿಂಬೆ ಪಾನೀಯವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದಾಗ್ಯೂ, ದಿನವಿಡೀ ಇದನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರವನ್ನು ಕಿರಿಕಿರಿಗೊಳಿಸುತ್ತದೆ. ಅಷ್ಟೇ ಆಳ, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಾತ್ರವಲ್ಲ, ಇದು ಎದೆಯುರಿ, ಹೊಟ್ಟೆ ನೋವು, ವಾಕರಿಕೆ ಮತ್ತು ವಾಯುವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಋತುಚಕ್ರದ ಸಮಯದಲ್ಲಿ ಚಹಾ ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತಾ..?

ದಂತಕವಚ ಸವೆತ ಅಥವಾ ದಂತಕ್ಷಯ: 
ನಿಂಬೆಹಣ್ಣುಗಳು ಹೆಚ್ಚು ಆಮ್ಲೀಯ ಸಿಟ್ರಸ್ ಹಣ್ಣುಗಳಾಗಿವೆ. ದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಉಪಯುಕ್ತವಾಗಿದೆ, ಆದರೆ ಅದರ ಅತಿಯಾದ ಬಳಕೆಯು ಹಲ್ಲುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಯಾವುದೇ ಒಬ್ಬ ವ್ಯಕ್ತಿ ನಿಂಬೆ ರಸವನ್ನು ಅತಿಯಾಗಿ ಸೇವಿಸಿದರೆ, ಇಲ್ಲವೇ, ನಿಂಬೆ ರಸ ನೇರವಾಗಿ ಹಲ್ಲುಗಳ ಸಂಪರ್ಕಕ್ಕೆ ಬಂದರೆ ಅದು ದಂತಕವಚದ ಸವೆತಕ್ಕೆ ಕಾರಣವಾಗಬಹುದು.  

ನಿರ್ಜಲೀಕರಣಕ್ಕೆ ಕಾರಣವಾಗಬಹುದು:
ಆರೋಗ್ಯ ತಜ್ಞರ ಪ್ರಕಾರ, ನಿಂಬೆ ರಸವು ದೇಹದಿಂದ ವಿಷವನ್ನು ತೆಗೆದುಹಾಕುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಇದು ಮೂತ್ರವರ್ಧಕ ಮತ್ತು ಮೂತ್ರಪಿಂಡದಲ್ಲಿ ಹೆಚ್ಚು ಮೂತ್ರ ಉತ್ಪಾದನೆಗೆ ಕಾರಣವಾಗಬಹುದು. ಹೀಗಾಗಿ, ನೀರಿನ ಜೊತೆಗೆ, ಆಗಾಗ್ಗೆ ಮೂತ್ರ ವಿಸರ್ಜನೆಯು ದೇಹದಿಂದ ಎಲೆಕ್ಟ್ರೋಲೈಟ್‌ಗಳನ್ನು ಹೊರಹಾಕುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಸೇವಿಸುವುದರಿಂದ ಇದು ನಿರ್ಜಲೀಕರಣ, ದಣಿವು, ಒಣ ತುಟಿಗಳು ಮತ್ತು ಹೆಚ್ಚುವರಿ ಬಾಯಾರಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ- Diabetes: ಮಧುಮೇಹ ನಿಯಂತ್ರಿಸಲು ಈ ಎಣ್ಣೆಯಿಂದ ಮಾಡಿದ ಆಹಾರ ಸೇವಿಸಿ

ಮೈಗ್ರೇನ್: 
ಅತಿಯಾದ ನಿಂಬೆ ಪಾನೀಯ ಸೇವನೆಯು ಮೈಗ್ರೇನ್ ಅನ್ನು ಪ್ರಚೋದಿಸುತ್ತದೆ. ವಾಸ್ತವವಾಗಿ ಸಿಟ್ರಸ್ ಹಣ್ಣುಗಳು ಸಾಮಾನ್ಯವಾಗಿ ಮೈಗ್ರೇನ್ ಮತ್ತು ತಲೆನೋವುಗಳನ್ನು ಪ್ರಚೋದಿಸುತ್ತವೆ. ನಿಂಬೆಹಣ್ಣುಗಳು ಟೈರಮೈನ್ ಅನ್ನು ಉತ್ಪಾದಿಸುವ ಕಾರಣದಿಂದಾಗಿರಬಹುದು, ಇದು ಸಾಮಾನ್ಯವಾಗಿ ತಲೆನೋವು ಉಂಟುಮಾಡುವ ನೈಸರ್ಗಿಕ ಮೊನೊಅಮೈನ್. ನೀವು ವಿಪರೀತ ತಲೆನೋವು ಅನುಭವಿಸುವವರಾಗಿದ್ದರೆ, ನಿಂಬೆ ರಸವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಒಳಿತು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News