Colon Cancer Causes : ಈ ಆಹಾರ ಸೇವನೆಯಿಂದಲೇ ಹೆಚ್ಚುತ್ತದೆ ಕರುಳಿನ ಕ್ಯಾನ್ಸರ್. !

Colon Cancer Causes :ಆಹಾರದ ಕಾರಣದಿಂದಾಗಿ, ಗೆಡ್ಡೆ ಸಂಭವಿಸುತ್ತದೆ. ಕ್ಯಾನ್ಸರ್  ಅಪಾಯವನ್ನು ತಪ್ಪಿಸಬೇಕಾದರೆ, ಕೆಲವೊಂದು ಅಭ್ಯಾಸಗಳನ್ನು ಬಿಟ್ಟು ಬಿಡಬೇಕು.

Written by - Ranjitha R K | Last Updated : Oct 25, 2022, 02:32 PM IST
  • ಕಳಪೆ ಆಹಾರದಿಂದ ಕರುಳಿನ ಕ್ಯಾನ್ಸರ್ ಅಪಾಯ ಎದುರಾಗುತ್ತದೆ.
  • ಯುವಜನರಲ್ಲಿ ಕರುಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ.
  • ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿ ಇದಕ್ಕೆ ಕಾರಣ
Colon Cancer Causes : ಈ ಆಹಾರ ಸೇವನೆಯಿಂದಲೇ ಹೆಚ್ಚುತ್ತದೆ  ಕರುಳಿನ  ಕ್ಯಾನ್ಸರ್. !  title=
Stomach Cancer(file photo)

Colon Cancer Causes : ಕಳಪೆ ಆಹಾರದಿಂದ ಕರುಳಿನ ಕ್ಯಾನ್ಸರ್ ಅಪಾಯ ಎದುರಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಯುವಜನರಲ್ಲಿ ಕರುಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ದೊಡ್ಡ ಕಾರಣವೆಂದರೆ ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿ. ಆಹಾರದ ಕಾರಣದಿಂದಾಗಿ, ಗೆಡ್ಡೆ ಸಂಭವಿಸುತ್ತದೆ. ಕ್ಯಾನ್ಸರ್  ಅಪಾಯವನ್ನು ತಪ್ಪಿಸಬೇಕಾದರೆ, ಕೆಲವೊಂದು ಅಭ್ಯಾಸಗಳನ್ನು ಬಿಟ್ಟು ಬಿಡಬೇಕು.  

ಕರುಳಿನ ಕ್ಯಾನ್ಸರ್ ನ ಲಕ್ಷಣಗಳು :
-ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದರೆ, ಅದು ಕರುಳಿನ ಕ್ಯಾನ್ಸರ್  ಲಕ್ಷಣವಾಗಿರಬಹುದು. 
- ಮಲ ವಿಸರ್ಜನೆಯ ವೇಳೆ ರಕ್ತ ಬರುತ್ತಿದ್ದರೆ ಹೊಟ್ಟೆಯ ಕ್ಯಾನ್ಸರ್ ಆಗಿರಬಹುದು. 
-ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಉರಿ ಮತ್ತು ನೋವು ಕೂಡಾ ಕ್ಯಾನ್ಸರ್ ಸಂಕೇತವಾಗಿದೆ.
- ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಕಾಣಿಸಿಕೊಳ್ಳುವುದು ಹೊಟ್ಟೆಯ ಕ್ಯಾನ್ಸರ್ ಲಕ್ಷಣವಾಗಿರಬಹುದು.  
- ತ್ವರಿತವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ, ಹಸಿವು ಆಗದೆ ಇರುವುದು ಕೂಡಾ  ಹೊಟ್ಟೆಯ ಕ್ಯಾನ್ಸರ್  ಮುನ್ಸೂಚನೆಯಾಗಿರಬಹುದು. 

ಇದನ್ನೂ ಓದಿ :  Hypertension: ಹೈ ಬಿಪಿ ಇರುವವರು ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ, ಇಲ್ಲವೇ ಸಮಸ್ಯೆ ಹೆಚ್ಚಾಗಬಹುದು!

ಕರುಳಿನ ಕ್ಯಾನ್ಸರ್ ಗೆ ಕಾರಣ : 
ಕ್ಯಾನ್ಸರ್ ಸಮಸ್ಯೆಗಳು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು. ಕಳಪೆ ಆಹಾರ ಸೇವನೆಯೂ ಕರುಳಿನ ಕ್ಯಾನ್ಸರ್ ಗೆ ಕಾರಣ. ಮದ್ಯಪಾನ ಮತ್ತು ಧೂಮಪಾನವು ಕರುಳಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. 

ಹೆಚ್ಚು ಮಾಂಸ ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನುವುದು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. 

ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವು ಕ್ಯಾನ್ಸರ್ ಗೆ  ಕಾರಣವಾಗುತ್ತದೆ. ಆದ್ದರಿಂದ ಅಂತಹ  ಆಹಾರಗಳಿಂದ ಅಂತರ ಕಾಯ್ದುಕೊಳ್ಳಿ. 

- ಮೈದಾ  ಹೊಂದಿರುವ ವಸ್ತುಗಳು ಹೊಟ್ಟೆಗೆ ತುಂಬಾ ಹಾನಿಕಾರಕ. ಮೈದಾ ಇರುವ ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು. ಇಲ್ಲವಾದರೆ ಶೀಘ್ರದಲ್ಲೇ ಹೊಟ್ಟೆಯ ಕ್ಯಾನ್ಸರ್ ಬಲಿಯಾಗಬಹುದು.

ಇದನ್ನೂ ಓದಿ :  ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳು ಬ್ಲಡ್ ಶುಗರ್ ನಿಯಂತ್ರಿಸಲು ಸಹಕಾರಿ

-ಮಾರುಕಟ್ಟೆಯಲ್ಲಿ ಸಿಗುವ ಸಮೋಸಾಗಳಂತಹ ಕರಿದ ಪದಾರ್ಥಗಳು ಮತ್ತು ಪಿಜ್ಜಾ, ಬರ್ಗರ್‌ನಂತಹ ಫಾಸ್ಟ್ ಫುಡ್‌ಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಈ ಆಹಾರದಲ್ಲಿರುವ ಸ್ಟಾರ್ಚ್ ಕ್ಯಾನ್ಸರ್ ಗೆ ಕಾರಣವಾಗಬಹುದು. 

ರಕ್ಷಿಸಲು ಹೇಗೆ ? 
ಕ್ಯಾನ್ಸರ್ ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ. ನೀವು ಹೊಟ್ಟೆಯ ಕ್ಯಾನ್ಸರ್ ಅನ್ನು ತಪ್ಪಿಸಬೇಕಾದರೆ, ಹೆಚ್ಚು ಸ್ಟಾರ್ಚ್, ಕಾರ್ಬೋಹೈಡ್ರೇಟ್‌ಗಳು, ಇನ್ಸ್ಟಂಟ್ ಫುಡ್, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಮಾಂಸದಿಂದ ದೂರವಿರುವುದು ಮುಖ್ಯ. ಇದಲ್ಲದೆ, ಧೂಮಪಾನ ಮತ್ತು ಮದ್ಯಪಾನವನ್ನು ಸಹ ತ್ಯಜಿಸಬೇಕು. ನಿಮ್ಮ ದಿನಚರಿಯಲ್ಲಿ ಯೋಗ ಅಥವಾ ವ್ಯಾಯಾಮವನ್ನು ಸೇರಿಸಿ. ಕರುಳಿನ ಕ್ಯಾನ್ಸರ್‌ನ ಲಕ್ಷಣಗಳು ಕಂಡುಬಂದರೆ, ತಕ್ಷಣ ಕರುಳಿನ ಕ್ಯಾನ್ಸರ್ ಪರೀಕ್ಷೆಯನ್ನು ಮಾಡಿ. 

 

 ( ಸೂಚನೆ : ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನಗಳನ್ನು  Zee News ಅನುಮೋದಿಸುವುದಿಲ್ಲ. ಇವುಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ.  ಅನುಸರಿಸುವ ಮೊದಲು, ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News