Coronavirus Vaccine Update: ಶೀಘ್ರದಲ್ಲಿಯೇ ಭಾರತದಲ್ಲಿ ಈ ಲಸಿಕೆ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ

Coronavirus Vaccine Update: ಶೀಘ್ರದಲ್ಲಿಯೇ ಭಾರತ ಸರ್ಕಾರ ಆಕ್ಸ್ಫರ್ಡ್ ಹಾಗೂ ಅಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.

Written by - Nitin Tabib | Last Updated : Dec 23, 2020, 01:35 PM IST
  • ದತ್ತಾಂಶ ಒದಗಿಸಿದ ಸಿರಮ್
  • ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಕೋವಿಶೀಲ್ಡ್ ವ್ಯಾಕ್ಸಿನ್ ಅಭಿವೃದ್ಧಿಪಡಿಸುತ್ತಿದೆ.
  • ಅನುಮತಿ ಸಿಕ್ಕರೆ ಅನುಮೋದನೆ ಪಡೆದ ಮೊದಲ ವ್ಯಾಕ್ಸಿನ್ ಇದಾಗಲಿದೆ.
Coronavirus Vaccine Update: ಶೀಘ್ರದಲ್ಲಿಯೇ ಭಾರತದಲ್ಲಿ ಈ ಲಸಿಕೆ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ title=
Coronavirus Vaccine Update (File Photo)

ನವದೆಹಲಿ: Coronavirus Vaccine Update-ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ  ಕೊರೊನಾ ವೈರಸ್ ಲಸಿಕೆಯ ನಿರೀಕ್ಷೆಯಲ್ಲಿರುವ ಜನರಿಗೆ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಆಕ್ಸ್ಫರ್ಡ್-ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತುಬಳಕೆಗೆ ಮುಂದಿನ ವಾರದಲ್ಲಿ ಭಾರತ ಸರ್ಕಾರದ ಅನುಮೋದನೆ ನೀಡುವ ಸಾಧ್ಯತೆ ಇದೆ.

ಇದನ್ನು ಓದಿ- Serum Institute Corona ಲಸಿಕೆಗೆ ಸರಕಾರ ಅನುಮತಿ ನೀಡಿಲ್ಲವೆ? ಇಲ್ಲಿದೆ ವಾಸ್ತವಿಕತೆ

ದತ್ತಾಂಶಗಳನ್ನು ಒದಗಿಸಿದ ಸಿರಮ್ ಇನ್ಸ್ಟಿಟ್ಯೂಟ್
ಪ್ರಸ್ತುತ ಈ ವಿಷಯದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಸರ್ಕಾರಕ್ಕೆ ಹೆಚ್ಚಿನ ಮಾಹಿತಿ ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಭಾರತದಲ್ಲಿನ ಸೀರಮ್ ಇನ್ಸ್ಟಿಟ್ಯೂಟ್ (SII) ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಪಡಿಸುತ್ತಿದೆ.

ಇದನ್ನು ಓದಿ- Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ

ಕೋವಿಶೀಲ್ಡ್ ಭಾರತದ ಮೊದಲ ವ್ಯಾಕ್ಸಿನ್
ಆಕ್ಸ್ಫರ್ಡ್ ಹಾಗೂ ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಗೆ ಒಂದು ವೇಳೆ ಸರ್ಕಾರ ಅನುಮೋದನೆ ನೀಡಿದರೆ, ತುರ್ತು ಬಳಕೆಗೆ ಸರ್ಕಾರದಿಂದ ಅನುಮೋದನೆ ಪಡೆದ ಮೊದಲ ಲಸಿಕೆ ಎಂಬ ಹೆಗ್ಗಳಿಕೆಗೆ ಕೋವಿಶೀಲ್ಡ್ ಪಾತ್ರವಾಗಲಿದೆ. ಏಕೆಂದರೆ ಇದುವರೆಗೆ ಭಾರತದಲ್ಲಿ ಯಾವುದೇ ಲಸಿಕೆಯ ಬಳಕೆಗೆ ಅನುಮೋದನೆ ನೀಡಲಾಗಿಲ್ಲ.

ಇದನ್ನು ಓದಿ- Side Effect ಆರೋಪ, Serum Instituteನಿಂದ 100 ಕೋಟಿ ರೂ.ಮಾನಹಾನಿ ಬೆದರಿಕೆ

ಅಸ್ಟ್ರಾಜೆನಿಕಾ ಜೊತೆಗೆ ಒಡಂಬಡಿಕೆ ಮಾಡಿಕೊಂಡ ಸಿರಮ್ ಇನ್ಸ್ಟಿಟ್ಯೂಟ್ 
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಲಸಿಕೆ ತಯಾರಿಸಲು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ತಮ್ಮ ಕರೋನಾ ಲಸಿಕೆ ಕೊನೆಯ ಹಂತದ ಪ್ರಯೋಗಗಳಲ್ಲಿಶೇ.90 ರಷ್ಟು  ಪರಿಣಾಮಕಾರಿ ಎಂದು ಹೇಳಿಕೊಂಡಿವೆ.

ಇದನ್ನು ಓದಿ- ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಲು 2024 ರವರೆಗೆ ಕಾಯಬೇಕಂತೆ...!

ಭಾರತದಲ್ಲಿ 2.89 ಲಕ್ಷ ಸಕ್ರೀಯ ಪ್ರಕರಣಗಳಿವೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 23 ಸಾವಿರ 950 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ, 26 ಸಾವಿರ 895 ರೋಗಿಗಳನ್ನು ಗುಣಪಡಿಸಲಾಗಿದೆ. ಇದರಿಂದ ಕರೋನಾದಿಂದ ಚೇತರಿಸಿಕೊಂಡ ರೋಗಿಗಳ ಪ್ರಮಾಣ ಕೂಡ ಶೇ. 95.69 ಕ್ಕೆ ತಲುಪಿದೆ. ಕೋವಿಡ್ -19 ರ ಸಾವಿನ ಪ್ರಮಾಣ ಇಳಿಕೆಯಾಗಿದೆ ಮತ್ತು ಅದು ಶೇಕಡಾ 1.45 ಕ್ಕೆ ತಲುಪಿದೆ. ಭಾರತದಲ್ಲಿ ಸದ್ಯ 2 ಲಕ್ಷ 89 ಸಾವಿರ 240 ಸಕ್ರೀಯ  ಪ್ರಕರಣಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News