ಕೊರೊನಾದಿಂದ ಶ್ವಾಸಕೋಶ-ಹೃದಯಕ್ಕೆ ದೀರ್ಘಕಾಲದ ಹಾನಿ

ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ವರದಿಯ ಪ್ರಕಾರ, ಕರೋನಾದಿಂದ ಬಳಲುತ್ತಿರುವ ಜನರಲ್ಲಿ ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಹೊರಬರುತ್ತಿವೆ.

Last Updated : Sep 7, 2020, 05:34 PM IST
  • ಕರೋನಾ ವೈರಸ್ ನಿಂದ ಶ್ವಾಸಕೋಶ ಮತ್ತು ಹೃದಯಕ್ಕೆ ಹಾನಿ.
  • ಕರೋನಾದಿಂದ ಚೇತರಿಸಿಕೊಳ್ಳುವವರಲ್ಲಿ ಕಾಣಿಸಿಕೊಳ್ಳುತ್ತಿವೆ ದೀರ್ಘಕಾಲ ಪ್ರಭಾವ ಬೀರುವ ರೋಗಗಳು.
  • ದೇಹದ ಪ್ರತಿರೋಧಕ ವ್ಯವಸ್ಥೆಯು ರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ
ಕೊರೊನಾದಿಂದ ಶ್ವಾಸಕೋಶ-ಹೃದಯಕ್ಕೆ ದೀರ್ಘಕಾಲದ ಹಾನಿ title=

ನವದೆಹಲಿ: ಕೊರೊನಾ ಮಹಾಮಾರಿ (Corona Pandemic) ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ವರದಿಯ ಪ್ರಕಾರ, ಕರೋನಾದಿಂದ ಬಳಲುತ್ತಿರುವ ಜನರಲ್ಲಿ ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗಳು ಹೊರಬರುತ್ತಿವೆ. ಆದರೆ ಇದರಲ್ಲಿ ನೆಮ್ಮದಿಯ ಸುದ್ದಿ ಎಂದರೆ, ನಮ್ಮ ಶರೀರದ ಸಿಸ್ಟಂ ತನ್ನಷ್ಟಕ್ಕೆ ತಾನೇ ನಿಧಾನವಾಗಿ ಮತ್ತು ಕ್ರಮೇಣವಾಗಿ ಇದರೊಂದಿಗೆ ಹೋರಾಡುತ್ತದೆ ಹಾಗೂ ಈ ಕಾಯಿಲೆ ನಿಧಾನವಾಗಿ ಗುಣಮುಖವಾಗುತ್ತದೆ ಎನ್ನಲಾಗಿದೆ.

ನಮ್ಮ ಶರೀರ ನಿಧಾನವಾಗಿ ಹಾಗೂ ಕ್ರಮೇಣ ಸಮಸ್ಯೆಗಳ ಮೇಲೆ ಹಿಡಿತ ಸಾಧಿಸುವುದು
ಯುರೋಪಿಯನ್ ರೆಸ್ಪಿರೇಟರಿ ಸೊಸೈಟಿ ಇಂಟರ್ನ್ಯಾಷನಲ್ ಕಾಂಗ್ರೆಸ್ ಪ್ರಕಾರ, ಈ ನಿಟ್ಟಿನಲ್ಲಿ ನಡೆದ ಹೊಸ ಸಂಶೋಧನೆಯಾ ಫಲಿತಾಂಶಗಳು ಇದೀಗ ಹೊರಬಂದಿದ್ದು, ಕರೋನಾದಿಂದಾಗಿ, ಶರೀರಕ್ಕೆ ಸಿಕ್ಕ ಶಾಶ್ವತ ಕಾಯಿಲೆಗಳಲ್ಲಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಿವೆ ಎಂದು ಹೇಳಲಾಗಿದೆ. ಇದರ ಕಾರಣ ಮಾನವ ದೇಹದ ರೋಗನಿರೋಧಕ ಶಕ್ತಿ, ಇದು ಶ್ವಾಸಕೋಶ ಮತ್ತು ಹೃದಯಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳನ್ನು ನಿಧಾನವಾಗಿ ಗುಣಪಡಿಸುತ್ತದೆ ಎನ್ನಲಾಗಿದೆ.

ಆಸ್ಟ್ರೀಯಾದಲ್ಲಿ ನಡೆದಿದೆ ಈ ಸಂಶೋಧನೆ
ಆಸ್ಟ್ರಿಯಾದ ಟೈರೋಲಿಯನ್ ಪ್ರದೇಶದಲ್ಲಿನ ಕರೋನಾ ಹಾಟ್ ಸ್ಪಾಟ್‌ ನಲ್ಲಿರುವ ಜನರ ಮೇಲೆ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ. ಈ ಜನರು ಕರೋನಾ ಪರೀಕ್ಷೆಗೆ ಋಣಾತ್ಮಕವಾಗಿ ಪ್ರತಿಕ್ರಿಯಿಸಿದ ನಂತರ, ಅವರನ್ನು ಇನ್ಸ್‌ಬರ್ಗ್‌ನ ಯೂನಿವರ್ಸಿಟಿ ಕ್ಲಿನಿಕ್‌ನ ಆಂತರಿಕ ಔಷಧ ವಿಭಾಗದಲ್ಲಿ ಮತ್ತು ಜನಮ್‌ನ ವೆಂಜನ್ಸ್ ಆಸ್ಪತ್ರೆಯಲ್ಲಿ ಇರಿದಲಾಗಿತ್ತು. ಇನ್ನುಳಿದ ಕೆಲವನ್ನು ಮುಂಟಾಸರ್‌ನ ಹೃದಯ-ಶ್ವಾಸಕೋಶ ಕೇಂದ್ರದಲ್ಲಿ ಇರಿಸಲಾಗಿತ್ತು.

ವರ್ಚ್ಯುವಲ್ ಕಾಂಗ್ರೆಸ್ ನಲ್ಲಿ ಜಾರಿಗೊಳಿಸಲಾಗಿದೆ ಅಂಕಿ-ಅಂಶಗಳು
ಸಂಶೋಧಕರು ಏಪ್ರಿಲ್ 29 ಮತ್ತು ಜೂನ್ 9 ರ ನಡುವೆ ಒಟ್ಟು 86 ರೋಗಿಗಳ ಮೇಲೆ ನಿಗಾವಹಿಸಿದ್ದರು. ಅವರ ಸಂಖ್ಯೆ ಕ್ರಮೇಣ 150 ಕ್ಕೆ ತಲುಪಿದೆ. ಇವರನ್ನು ಒಟ್ಟು 6 ವಾರ, 12 ವಾರ ಮತ್ತು 24 ವಾರಗಳವರೆಗೆ ಆಸ್ಪತ್ರೆಯಲ್ಲಿ ಇರಿಸಲಾಗುತ್ತಿದ್ದು, ಅವರಿಗೆ ಔಷಧಿಗಳನ್ನು ಸಹ ನೀಡಲಾಗುತ್ತಿದೆ. ಈ ಸಮಯದಲ್ಲಿ, ಅವರ ಮೇಲೆ ಅನೇಕ ಪರೀಕ್ಷೆಗಳನ್ನು ನಡೆಸಲಾಗಿದೆ. 

ಯಾವ ರೀತಿಯ ಬದಲಾವಣೆಯನ್ನು ಗಮನಿಸಲಾಗಿದೆ
ಈ ಜನರು ಮೊದಲ ಬಾರಿಗೆ ಸಂಶೋಧನಾ ಕೇಂದ್ರವನ್ನು ತಲುಪಿದಾಗ, ಈ ಜನರಲ್ಲಿ ಅರ್ಧದಷ್ಟು ಜನರಿಗೆ ಕಫ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡುಬಂದವು. ಇದರಲ್ಲಿ 88 ಪ್ರತಿಶತ ಜನರು ಶ್ವಾಸಕೋಶದ ಮೇಲೆ ಪರಿಣಾಮ ಉಂಟಾಗಿತ್ತು. ಆದರೆ, 12 ವಾರಗಳ ನಂತರ ಅವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿದಾಗ ಈ ಜನರ ಶ್ವಾಸಕೋಶದ ಹಾನಿ ಶೇ. 56ಕ್ಕೆ ಇಳಿಕೆಯಾಗಿತ್ತು.

ಸಂಶೋಧಕರು ಹೇಳಿದ್ದೇನು?
ಕರೋನಾ ಜನರ ಶ್ವಾಸಕೋಶ ಮತ್ತು ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದೆ ಎಂದು ಕ್ಲಿನಿಕಲ್ ಟ್ರಯಲ್ ತಂಡದ ಸದಸ್ಯೆ ಡಾ.ಸಬೀನಾ ಸಹಾನಿಕ್ ಹೇಳಿದ್ದಾರೆ, ಆದರೆ ಒಳ್ಳೆಯ ಸುದ್ದಿ ಎಂದರೆ ನಿಧಾನವಾಗಿ ನಿಮ್ಮ ದೇಹವು ಈ ಸಮಸ್ಯೆಗಳನ್ನು ತನ್ನದೇ ಆದ ರೀತಿಯಲ್ಲಿ ಪರಿಹರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ  ನಮ್ಮ ದೇಹದ ಆಂತರಿಕ ವ್ಯವಸ್ಥೆಯು ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದು ನಂಬಬಹುದು. ಆದರೆ, 24 ವಾರಗಳ ಬಳಿಕ ಅವರ ಮೇಲೆ ಯಾವ ಪರಿಣಾಮ ಉಂಟಾಗಿದೆ ಎಂಬುದರ ಪರಿಣಾಮ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ.

Trending News