ನವದೆಹಲಿ: ಕರೋನವೈರಸ್ ಲಸಿಕೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಬರುತ್ತಿದೆ. ಭಾರತೀಯರಿಗೆ ಕರೋನಾ ಲಸಿಕೆ (Corona Vaccine) ನೀಡಲು ಕೇಂದ್ರ ಸರ್ಕಾರ 51 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. .3 ಬಿಲಿಯನ್ಗಿಂತಲೂ ಹೆಚ್ಚು ಭಾರತೀಯರು ಈ ಮೊತ್ತದಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಬ್ಲೂಮ್ಬರ್ಗ್ನ ವರದಿಯ ಪ್ರಕಾರ ಭಾರತೀಯರಿಗೆ ಲಸಿಕೆ ಹಾಕಲು ತುಂಬಾ ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಒಂದು ಲಸಿಕೆಗೆ ಸುಮಾರು 500 ರೂಪಾಯಿ ವೆಚ್ಚವಾಗಲಿದೆ. ಈ ಮೊತ್ತವನ್ನು 31 ಮಾರ್ಚ್ 2021 ರವರೆಗೆ ನಿಗದಿಪಡಿಸಲಾಗಿದೆ. ಆದರೆ ವ್ಯಾಕ್ಸಿನೇಷನ್ ಮಾಡಲು ಹಣದ ಕೊರತೆ ಇರುವುದಿಲ್ಲ. ಪ್ರತಿ ವ್ಯಕ್ತಿಗೆ ಎರಡು ಚುಚ್ಚುಮದ್ದಿನ ಅವಶ್ಯಕತೆ ಇದ್ದು ವೆಚ್ಚವು ಪ್ರತಿ ಶಾಟ್ಗೆ 150 ರೂ. ಉಳಿದ ಮೊತ್ತವನ್ನು ಚುಚ್ಚುಮದ್ದಿನ ನಿರ್ವಹಣೆಗಾಗಿ ಖರ್ಚು ಮಾಡಲಾಗುವುದು ಎಂದು ತಿಳಿದುಬಂದಿದೆ.
ಲಸಿಕೆಯ ಲೆಕ್ಕಾಚಾರ:
1 ಶಾಟ್ ಲಸಿಕೆ ಪ್ರತಿ ವ್ಯಕ್ತಿಗೆ 2 ಡಾಲರ್ (ಸುಮಾರು 150 ರೂಪಾಯಿ) ವೆಚ್ಚವಾಗಲಿದೆ.
ಲಸಿಕೆ ನಿರ್ವಹಣೆಗಾಗಿ 2 ರಿಂದ 3 ಡಾಲರ್ ಖರ್ಚು ಮಾಡಲಾಗುವುದು. ಇದು ಸಂಗ್ರಹಣೆ ಮತ್ತು ಸಾರಿಗೆಯನ್ನು ಒಳಗೊಂಡಿದೆ.
ಭಾರತವು ಸೋಂಕಿನ ಅತಿದೊಡ್ಡ ಮತ್ತು ವೇಗದ ಮಟ್ಟವನ್ನು ದಾಟಿದೆ ಎಂದು ಸರ್ಕಾರಿ ಸಮಿತಿ ಅಂದಾಜಿಸಿದೆ. ಫೆಬ್ರವರಿ ವೇಳೆಗೆ ಇದರ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದೂ ಕೂಡ ಉಲ್ಲೇಖಿಸಲಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೋವಿಡ್ 19 ಲಸಿಕೆ ಸಿದ್ಧವಾದಾಗ ಎಲ್ಲಾ ಭಾರತೀಯರಿಗೆ ಲಭ್ಯವಾಗುವಂತೆ ಸರ್ಕಾರ ಖಚಿತಪಡಿಸುತ್ತದೆ ಎಂದು ಭರವಸೆ ನೀಡಿದ್ದರು.
ಕರೋನಾದಿಂದ ರಕ್ಷಿಸಲು ಪ್ರಧಾನಿ ಇತ್ತೀಚೆಗೆ ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಅಭಿಯಾನದ ಅಡಿಯಲ್ಲಿ ಕರೋನಾದಿಂದ ರಕ್ಷಿಸಲು ಮೂರು ಸೂತ್ರಗಳನ್ನು ತಿಳಿಸಲಾಗಿದೆ. ಈ ಸೂತ್ರಗಳಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಮತ್ತು ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದ ಮೂಲ ಮಂತ್ರಗಳು ಎಂದು ಹೇಳಲಾಗಿದೆ.
Sputnik V COVID-19 Vaccine: ಭಾರತೀಯರ ಮೇಲೆ ನಡೆಯಲಿದೆ ಟ್ರಯಲ್
ಇದಲ್ಲದೆ ಕೊರೊನಾವೈರಸ್ (Coronavirus) ಟೆಸ್ಟ್ ರಿಪೋರ್ಟ್ ಗಳನ್ನೂ ಸಹ ಆದಷ್ಟು ಬೇಗ ನೀಡಲು ಕೂಡ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಹೊಸ ಕಿಟ್ನ ಫಲಿತಾಂಶವು ಅರ್ಧ ಘಂಟೆಯಲ್ಲಿ ಬರಲಿದೆ. ವಿಶೇಷ ಕಿಟ್ ರಚಿಸಲು ಟಾಟಾ ಸಮೂಹವು ಸಿಎಸ್ಐಆರ್ ಜೊತೆ ಕೈಜೋಡಿಸಿದೆ, ಇದು ಕೋವಿಡ್ -19 (Covid 19) ಫಲಿತಾಂಶವನ್ನು ಕೇವಲ 500 ರೂ.ಗಳಿಗೆ ನೀಡುತ್ತದೆ. ಈ ಕಿಟ್ನ ಹೆಸರು ಫೆಲುಡಾ (Feluda).
ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಸಿಎಸ್ಐಆರ್-ಐಜಿಐಬಿ) ಸಹಯೋಗದೊಂದಿಗೆ ಈ ಗುಂಪು ಕ್ಲಸ್ಟರ್ಡ್ ರೆಗ್ಯುಲರ್ ಇಂಟರ್ಸ್ಪೇಸ್ಡ್ ಶಾರ್ಟ್ ಪಾಲಿಂಡ್ರೊಮಿಕ್ ರಿಪೀಟ್ಸ್ ಕರೋನಾ ಟೆಸ್ಟ್ (CRISPR corona test) ಕಿಟ್ ಅನ್ನು ಸಿದ್ಧಪಡಿಸಿದೆ. ಫೆಲುಡಾ ಕಿಟ್ ಅನ್ನು ಈಗ ಸಾರ್ವಜನಿಕವಾಗಿ ಬಳಸಬಹುದು.
2022ರ ಮೊದಲು ಯುವ, ಆರೋಗ್ಯವಂತ ಜನರಿಗೆ ಸಿಗಲ್ಲವಂತೆ ಕರೋನಾ ಲಸಿಕೆ: WHO ಹೇಳಿದ್ದೇನು?
ಕರೋನಾದ ಒಂದು ನೋಟ:
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,366 ಹೊಸ ಕರೋನಾ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, 690 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ 73979 ರೋಗಿಗಳನ್ನು ಗುಣಪಡಿಸಲಾಗಿದೆ.
- ಒಟ್ಟು ಪ್ರಕರಣಗಳು - 77,61,312
- ಸಕ್ರಿಯ ಪ್ರಕರಣ -6, 95,509
- ಇಲ್ಲಿಯವರೆಗೆ ಗುಣಮುಖರಾದವರು - 69,48,497
- ಸಾವು - 1,17,306
- ಚೇತರಿಕೆ ದರ -89.53%
- ಮರಣ ಪ್ರಮಾಣ -1.51%