ಲವಂಗವನ್ನು ಈ ರೀತಿ ಬಳಸಿದರೆ ಶುಗರ್‌ ಲೆವೆಲ್‌ ಎಂದಿಗೂ ಹೆಚ್ಚಾಗುವುದಿಲ್ಲ!!

Clove Benefits: ಮಧುಮೇಹವು ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿರುವುದರಿಂದ, ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಧ್ಯೆ ಮಧ್ಯೆ ಏನಾದರೂ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚುತ್ತದೆ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜೀವನಶೈಲಿ ಮತ್ತು ಆಹಾರಕ್ರಮವನ್ನು ಸುಧಾರಿಸುವುದು ಅವಶ್ಯಕ. ಇಂದು ನಾವು ಸಕ್ಕರೆ ಮಟ್ಟವನ್ನು ನಿಯಂತ್ರಿಸವಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ.

Written by - Savita M B | Last Updated : Jun 7, 2024, 02:38 PM IST
  • ಲವಂಗದ ಕಷಾಯವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ
  • ಹಾಗಾದರೆ ಮಧುಮೇಹಿಗಳು ಲವಂಗವನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ
ಲವಂಗವನ್ನು ಈ ರೀತಿ ಬಳಸಿದರೆ ಶುಗರ್‌ ಲೆವೆಲ್‌ ಎಂದಿಗೂ ಹೆಚ್ಚಾಗುವುದಿಲ್ಲ!! title=

Clove water health benefits: ಲವಂಗದ ಕಷಾಯವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ. ಇದರ ಒಂದು ಗುಣಲಕ್ಷಣವೆಂದರೆ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು.. ಹಾಗಾದರೆ ಮಧುಮೇಹಿಗಳು ಲವಂಗವನ್ನು ಹೇಗೆ ಬಳಸಬಹುದು ಎಂದು ತಿಳಿಯೋಣ

ಮಧುಮೇಹಿಗಳು ಲವಂಗವನ್ನು ಹೇಗೆ ಬಳಸಬೇಕು?

ಲವಂಗದ ಕಷಾಯ: ಲವಂಗದ ಕಷಾಯವು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ 8-10 ಲವಂಗವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ನಂತರ, ನೀರನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ತಣ್ಣಗಾದ ನಂತರ ಕುಡಿಯಿರಿ.  

ಇದನ್ನೂ ಓದಿ-ತೆಂಗಿನೆಣ್ಣೆಗೆ ಈ ಎರಡು ವಸ್ತುಗಳನ್ನು ಬೆರೆಸಿ ಹಚ್ಚಿದರೆ ದಟ್ಟ ನೀಳ ಉದ್ದ ಕೂದಲು ನಿಮ್ಮದಾಗುವುದು !

ಲವಂಗದ ನೀರು: ಮಧುಮೇಃಇಗಳು ಲವಂಗ ನೀರನ್ನು ಕುಡಿಯಬಹುದು. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ 4-5 ಲವಂಗವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಮುಂದೆ ಬೆಳಗ್ಗೆ ಬೇಗ ಎದ್ದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಅಲ್ಲದೇ ಒಂದು ಲವಂಗವನ್ನು ಆಗ್ಗಾಗೆ ಬಾಯಲ್ಲಿ ಇಟ್ಟುಕೊಳ್ಳುತ್ತಿರಿ.. ಹೀಗೆ ಕೆಲವು ದಿನಗಳ ಕಾಲ ಮಾಡಿದರೆ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.

ಲವಂಗವನ್ನು ನೀವು ಇಷ್ಟಪಡುವ ರೀತಿಯಲ್ಲಿ ಸೇವಿಸಿ. ಅದರಲ್ಲಿರುವ ಗುಣಗಳು ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಇದನ್ನು ಆಹಾರದಲ್ಲಿ ಮಸಾಲೆಯಾಗಿಯೂ ಬಳಸಬಹುದು. ಇದು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದಲ್ಲದೆ, ಲವಂಗವು ಇತರ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ-Raw Mango Benefits: ಜೀರ್ಣಕ್ರಿಯೆಯಿಂದ ತೂಕನಷ್ಟದವರೆಗೆ ತುಂಬಾ ಪ್ರಯೋಜನಕಾರಿ ಮಾವಿನ ಕಾಯಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News