Dangers Of Using Sanitary Pads: ಪ್ರತಿ ಹುಡುಗಿಗೂ ತಿಂಗಳಾಯಿತೆಂದರೆ ಮುಟ್ಟಿನದೇ ಚಿಂದೆ. ಪೀರಿಯಡ್ಸ್ ಸಾಮಾನ್ಯವಾಗಿ 5 ರಿಂದ 6 ದಿನಗಳವರೆಗೆ ಇರುತ್ತವೆ. ಈ ಸಮಯದಲ್ಲಿ, ಮಹಿಳೆಯರು ಪ್ಯಾಡ್ ಬಳಸುತ್ತಾರೆ. ನೀವು ಬಳಸುವ ಪ್ಯಾಡ್ ಸುರಕ್ಷಿತವಾಗಿದೆಯೆ ಅಥವಾ ಇಲ್ಲವೇ ಎಂದು ಪ್ಯಾಡ್ ಬಳಸುವಾಗ ನೀವು ಎಂದಾದರೂ ಯೋಚಿಸಿದ್ದೀರಾ. ಪೀರಿಯಡ್ಸ್ ಸಮಯದಲ್ಲಿ ಸಾಕಷ್ಟು ಮಹಿಲಿಯರು ಪ್ಯಾಡ್‌ಗಳನ್ನು ಬಳಸುತ್ತಾರೆ. ಆದರೆ ಅದರ ಅನಾನುಕೂಲಗಳ ಬಗ್ಗೆ ಯೋಚಿಸಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಅದರ ಅನಾನುಕೂಲಗಳ ಬಗ್ಗೆ ಮತ್ತು ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂದು ಹೇಳಲಿದ್ದೇವೆ. ಇದನ್ನು ಪ್ರತಿಯೊಬ್ಬ ಮಹಿಳೆಯರು ತಿಳಿಯುವುದು ಬಹುಮುಖ್ಯವಾಗಿದೆ.
ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದರಿಂದ ಆಗುವ ಅನಾನುಕೂಲಗಳು (Disadvantages of using sanitary pads) -
ಕ್ಯಾನ್ಸರ್ ಅಪಾಯ- ಸೂಕ್ತ ರೀತಿಯಲ್ಲಿ ಪ್ಯಾಡ್ ಬಳಸದಿದ್ದರೆ ಜನನಾಂಗದ ಕ್ಯಾನ್ಸರ್ (Cancer) ಬರುವ ಅಪಾಯವಿದೆ. ಪ್ರತಿ ತಿಂಗಳು ಪ್ಯಾಡ್ ಬಳಸುವ ಮಹಿಳೆಯರಿಗೆ ಈ ಸಮಸ್ಯೆ ಇರಬಹುದು. ರಾಸಾಯನಿಕ ಪ್ಯಾಡ್‌ಗಳನ್ನು ಬಳಸುವವರಿಗೆ ಈ ಸಮಸ್ಯೆ ಉಂಟಾಗುತ್ತದೆ. ಪ್ಯಾಡ್‌ಗಳಲ್ಲಿರುವ ಈ ರಾಸಾಯನಿಕವು ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು.
ಇದನ್ನೂ ಓದಿ - Sanitary Napkins ಬಳಸುವುದರಿಂದ Cancer ಬರುತ್ತದೆಯೇ?
ಕೀಟನಾಶಕ ಅಪಾಯ - ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹತ್ತಿಯನ್ನು ಬಳಸಲಾಗುತ್ತದೆ. ಹಾಗಾಗಿ ಅದನ್ನು ಕೀಟಗಳಿಂದ ದೂರವಿಡಲು ಅವುಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಈ ಹತ್ತಿಯಿಂದ ಪ್ಯಾಡ್‌ಗಳನ್ನು ತಯಾರಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪ್ಯಾಡ್‌ಗಳನ್ನು ಬಳಸಿದಾಗ ಕೀಟನಾಶಕಗಳು ಜನನಾಂಗದ ಮೂಲಕ ದೇಹವನ್ನು ಪ್ರವೇಶಿಸುತ್ತವೆ.
ಬಂಜೆತನದ ಅಪಾಯ- ವಾಸನೆಯನ್ನು ನಿಯಂತ್ರಿಸಲು ಡಿಯೋಡರೆಂಟ್ ಅಥವಾ ನ್ಯೂಟ್ರಾಲೈಜರ್‌ಗಳನ್ನು ಪ್ಯಾಡ್‌ಗಳಿಗೆ ಸೇರಿಸಲಾಗುತ್ತದೆ. ಪರಿಮಳ ಪ್ಯಾಡ್‌ಗಳೊಂದಿಗಿನ ಅಪಾಯವೆಂದರೆ ಅವು ನಿಮ್ಮ ಜನನಾಂಗದ ಮೇಲೆ ತಪ್ಪಾದ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಇದು ಮಹಿಳೆಯರಲ್ಲಿ ಯೋನಿ ಯೀಸ್ಟ್ ಸೋಂಕು (Vaginal Yeast Infection) ಮತ್ತು ಇತರ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ - ಮಹಿಳಾ ಉದ್ಯೋಗಿಗಳಿಗೆ ಇಲ್ಲಿಲ್ಲ ಪೀರಿಯಡ್ಸ್ ಚಿಂತೆ; ಈ ಕಂಪನಿ ನೀಡುತ್ತೆ 'ವೇತನ ಸಹಿತ ರಜೆ'!
ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ (Keep these things in mind when using sanitary pads) :
* ಪೀರಿಯಡ್ಸ್ ಸಮಯದಲ್ಲಿ ನಿಮ್ಮ ಖಾಸಗಿ ಭಾಗವನ್ನು ಒಣಗಿಸಲು ಯಾವಾಗಲೂ ಕಾಳಜಿ ವಹಿಸಿ.
* ಅಲ್ಲದೆ, 5 ರಿಂದ 6 ಗಂಟೆಗಳ ನಂತರ ಪ್ಯಾಡ್ ಅನ್ನು ಬದಲಾಯಿಸಿ.
* ಸೋಂಕನ್ನು ತಡೆಗಟ್ಟಲು, ನಿಮ್ಮ ಪೀರಿಯಡ್ಸ್ ಸಮಯದಲ್ಲಿ ನೀವು ಸಾಕಷ್ಟು ನೀರು (Water) ಕುಡಿಯಬೇಕು.
* ನಿಮ್ಮ ಒಳ ಉಡುಪುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.