Detox Water For Weight Loss: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುತ್ತವೆ ಈ ಪಾನೀಯಗಳು, ತೂಕ ಇಳಿಕೆಗೂ ಸಹಕಾರಿ

Weight Loss Drinks: ತೂಕ ಇಳಿಕೆಗೆ ಜನ ಏನೆಲ್ಲಾ ಕಸರತ್ತು ಮಾಡುವುದನ್ನು ನೀವು ನೋಡಿರಬಹುದು. ಆದರೂ ಕೂಡ ಅವರಿಗೆ ತಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಸಿಗುವುದಿಲ್ಲ. ಹೀಗಿರುವಾಗ ಕೆಲ ವಿಶೇಷ ಪಾನೀಯಗಳನ್ನು ಸೇವಿರುವುದು ತುಂಬಾ ಅವಶ್ಯಕವಾಗಿದೆ. 

Written by - Nitin Tabib | Last Updated : May 16, 2022, 05:23 PM IST
  • ತೂಕ ಇಳಿಕೆಗೆ ಜನ ಏನೆಲ್ಲಾ ಕಸರತ್ತು ಮಾಡುವುದನ್ನು ನೀವು ನೋಡಿರಬಹುದು.
  • ಆದರೂ ಕೂಡ ಅವರಿಗೆ ತಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಸಿಗುವುದಿಲ್ಲ.
  • ಹೀಗಿರುವಾಗ ಕೆಲ ವಿಶೇಷ ಪಾನೀಯಗಳನ್ನು ಸೇವಿರುವುದು ತುಂಬಾ ಅವಶ್ಯಕವಾಗಿದೆ.
Detox Water For Weight Loss: ಶರೀರದಿಂದ ವಿಷಕಾರಿ ಪದಾರ್ಥ ಹೊರಹಾಕುತ್ತವೆ ಈ ಪಾನೀಯಗಳು, ತೂಕ ಇಳಿಕೆಗೂ ಸಹಕಾರಿ title=
Detox Water For Weight Loss:

Drinks To Remove Toxins: ನಮ್ಮ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುವುದು ತುಂಬಾ ಮಹತ್ವದದಾಗಿದೆ. ಏಕೆಂದರೆ ಇದರಿಂದ ಮೆಟಬೊಲಿಸಮ ಸರಿಯಾಗಿರುತ್ತದೆ ಮತ್ತು ಉದಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಹಾಗೂ ತೂಕ ಇಳಿಕೆಯಲ್ಲಿಯೂ ಕೂಡ ಸಹಾಯ ಸಿಗುತ್ತದೆ. ಬೇಸಿಗೆ ಕಾಲದಲ್ಲಿ ನಿಮ್ಮನ್ನು ನೀವು ಡಿಟಾಕ್ಸಿಕೇಟ್ ಆಗಿರಿಸಲು ಹಾಗೂ ಶರೀರದಿಂದ ವಿಷಕಾರಿ ಪದಾರ್ಥಗಳನ್ನು ನೀವು ಹಲವು ರೀತಿಯ ನಿರ್ವಿಷಗೊಳಿಸುವ ಪಾನೀಯಗಳ ನೆರವು ಪಡೆಯಬಹುದು. 

ತೂಕ ಇಳಿಕೆಗೆ ನಿರ್ವಿಷಗೊಳಿಸುವ ಪಾನೀಯ ಸೇವಿಸಿ
ಆಪಲ್  ಡಿಟಾಕ್ಸ ವಾಟರ್

ಆಪಲ್ ಡಿಟಾಕ್ಸ್ ವಾಟರ್ ನಿಮ್ಮ ದೇಹದಿಂದ ವಿಷಕಾರಿ ಪದಾರ್ಥಗಳನ್ನುಹೊರಹಾಕುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ, ಸೇಬನ್ನು ತುಂಡುಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿ. ನಂತರ ಅದಕ್ಕೆ ನಿಂಬೆ ರಸ ಮತ್ತು ದಾಲ್ಚಿನ್ನಿ ಸೇರಿಸಿ ನಂತರ ಸೇವಿಸಿ.

ನಿಂಬೆ ಹಣ್ಣಿನ ಡಿಟಾಕ್ಸ್ ವಾಟರ್
ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ನಿಂಬೆ ಡಿಟಾಕ್ಸ್ ವಾಟರ್ ಒಂದು ಅತ್ಯುತ್ತಮ ಮನೆಮದ್ದು. ಇದಕ್ಕಾಗಿ ಪುದೀನಾ ಎಲೆಗಳನ್ನು ನಿಂಬೆ ನೀರಿನಲ್ಲಿ ಬೆರೆಸಿ ಮಿಶ್ರಣ ಮಾಡಿ ನಂತರ ಸೇವಿಸಿ.

ಸೌತೆಕಾಯಿ ಡಿಟಾಕ್ಸ್ ವಾಟರ್ 
ಸೌತೆಕಾಯಿ ಡಿಟಾಕ್ಸ್ ನೀರಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ  ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇದನ್ನು ತಯಾರಿಸಲು, ಒಂದು ಲೋಟ ನೀರಿಗೆ ಕೆಲವು ಸೌತೆಕಾಯಿ ತುಂಡುಗಳನ್ನು ಹಾಕಿ, ಈಗ ನಿಂಬೆ ರಸ, ಕಪ್ಪು ಉಪ್ಪು ಮತ್ತು ಕೆಲವು ಪುದೀನ ಎಲೆಗಳನ್ನು ಸೇರಿಸಿ, ಚಮಚದೊಂದಿಗೆ ಬೆರೆಸಿ ಕುಡಿಯಿರಿ.

ಇದನ್ನೂ ಓದಿ-ಹೃದಯಾಘಾತ ಸಂಭವಿಸುವ ಮೊದಲು ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಕಿತ್ತಳೆ ಡಿಟಾಕ್ಸ್ ವಾಟರ್
ಆರೆಂಜ್ ಡಿಟಾಕ್ಸ್ ನೀರಿನಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ದೇಹದ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ, ಇದೇ ಕಾರಣದಿಂದ ಇದು ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೆಗೆದುಹಾಕುತ್ತದೆ ಮತ್ತು ತೂಕವನ್ನು ಇಳಿಕೆ ಮಾಡುತ್ತದೆ.

ಇದನ್ನೂ ಓದಿ-Cholesterol Control Tips: ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಈ 4 ವಸ್ತುಗಳು, ನಿಮ್ಮ ಡಯಟ್ ನಲ್ಲಿರಲಿ ಇವುಗಳಿಗೆ ಜಾಗ

(Disclaimer: ಈ ಲೇಖನದಲ್ಲಿ ನೀಡಲಾಗಿಡರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News