ಭೋಜನದ ವೇಳೆ ಮಾಡುವ ಈ ನಾಲ್ಕು ತಪ್ಪು ಭಾರೀ ಸಮಸ್ಯೆಗಳನ್ನು ಉಂಟು ಮಾಡಬಹುದು .!

Mistakes While Having Meal: ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು.  ಯಾವ್ಯಾವುದೋ ಸಮಯದಲ್ಲಿ ತಿನ್ನುತ್ತಿದ್ದರೆ, ತೊಂದರೆ ಉದ್ಬವಿಸುತ್ತವೆ.   

Written by - Ranjitha R K | Last Updated : Aug 2, 2022, 01:02 PM IST
  • ಸಾಮಾನ್ಯವಾಗಿ ನಾವು ದಿನಕ್ಕೆ ಕನಿಷ್ಠ ಮೂರು ಬಾರಿ ತಿನ್ನುತ್ತೇವೆ.
  • ಇದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
  • ನಮಗೆ ಗೊತ್ತಿಲ್ಲದೇ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತವೆ.
 ಭೋಜನದ ವೇಳೆ ಮಾಡುವ ಈ ನಾಲ್ಕು ತಪ್ಪು ಭಾರೀ ಸಮಸ್ಯೆಗಳನ್ನು ಉಂಟು ಮಾಡಬಹುದು .!  title=
Mistakes While Having Meal (file photo)

Mistakes While Having Meal: ಸಾಮಾನ್ಯವಾಗಿ ನಾವು ದಿನಕ್ಕೆ ಕನಿಷ್ಠ ಮೂರು ಬಾರಿ ತಿನ್ನುತ್ತೇವೆ. ಇದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆಹಾರ ಸೇವನೆಯಿಂದ ನಮ್ಮ ದೇಹವು ಶಕ್ತಿಯನ್ನು ಪಡೆಯುತ್ತದೆ ಮತ್ತು ದೇಹದ ಆಂತರಿಕ ಚಟುವಟಿಕೆಗಳಿಗೆ ಇದು ಅವಶ್ಯಕ. ಆದರೆ ಭೋಜನದ ವೇಳೆ ಸಾಮಾನ್ಯವಾಗಿ ನಮಗೆ ಗೊತ್ತಿಲ್ಲದೇ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು.  ಯಾವ್ಯಾವುದೋ ಸಮಯದಲ್ಲಿ ತಿನ್ನುತ್ತಿದ್ದರೆ, ತೊಂದರೆ ಉದ್ಬವಿಸುತ್ತವೆ. 

ಭೋಜನದ ವೇಳೆ ಆಡುವ ತಪ್ಪುಗಳು : 
1. ಊಟಕ್ಕೆ ಮುಂಚೆ ಮೊಸರು ಸೇವನೆ :
ಮೊಸರು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಅದಕ್ಕಾಗಿಯೇ ಇದನ್ನು ಜೀರ್ಣಕ್ರಿಯೆಗೆ ಸಹಾಯಕ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಊಟಕ್ಕೆ ಮೊದಲು  ತಿನ್ನಬಾರದು. ಅಂದರೆ ಖಾಲಿ ಹೊಟ್ಟೆಯಲ್ಲಿ ಮೊಸರು ತಿಂದರೆ ಆಸಿಡಿಟಿಯಾಗುತ್ತದೆ. . ಮೊಸರನ್ನು ಯಾವಾಗಲೂ ಊಟದ ನಂತರ ತಿನ್ನಬೇಕು. ಹಾಗಾದಾಗ ಮಾತ್ರ ಇದು ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಸ್ನಾಯುಗಳನ್ನು ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ : Skin Care Tips: ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ

2. ರಾತ್ರಿ ಭೋಜನಕ್ಕೆ ಅನ್ನವನ್ನು ತಿನ್ನುವುದು :
ಅನ್ನವು ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಅದನ್ನು ರಾತ್ರಿ ವೇಳೆ ತಿನ್ನಬಾರದು. ಅನ್ನ ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲವಾಗಿರುವುದರಿಂದ, ಅದರ ಜೀರ್ಣಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳು ನಿಮ್ಮ ತೂಕವನ್ನು ಹೆಚ್ಚಿಸಬಹುದು.

3. ಬಿಸಿ ಹಾಲು ಕುಡಿಯುವುದು :
ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಬಹುತೇಕ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಬಿಸಿ ಬಿಸಿ ಹಾಲನ್ನು ಎಂದಿಗೂ ಬಿಸಿಯಾಗಿ ಸೇವಿಸಬಾರದು. ಇದು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ, ಉಗುರುಬೆಚ್ಚಗಿನ ಹಾಲನ್ನು ಕುಡಿಯುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ಇದನ್ನೂ ಓದಿ : ಈ ನಾಲ್ಕು ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೃದ್ರೋಗ ಹತ್ತಿರವೂ ಸುಳಿಯುವುದಿಲ್ಲ

4. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು :
ಬಾಳೆಹಣ್ಣು ತಿನ್ನುವುದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೂ ಅದನ್ನು ಸರಿಯಾದ ಸಮಯದಲ್ಲಿ ತಿನ್ನದಿದ್ದರೆ ಅದು ಹಾನಿಯನ್ನುಂಟುಮಾಡುವುದು ಖಚಿತ. ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಎಂದಿಗೂ ತಿನ್ನಬೇಡಿ. ಅತಿಸಾರ ಮತ್ತು ಕರುಳಿನ ಸಿಂಡ್ರೋಮ್‌ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆ ತುಂಬಿದಾಗ ಮಾತ್ರ ಬಾಳೆಹಣ್ಣು ತಿನ್ನಿ.

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News