ಈ ನಾಲ್ಕು ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೃದ್ರೋಗ ಹತ್ತಿರವೂ ಸುಳಿಯುವುದಿಲ್ಲ

Healthy oils for heart :  ಹೃದಯಾಘಾತಕ್ಕೆ ಹಲವು ಕಾರಣಗಳಿರಬಹುದು, ಆದರೆ ಆಹಾರದಲ್ಲಿ ಬಳಸುವ ಎಣ್ಣೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಡುಗೆಗೆ ಬಳಸುವ ಎಣ್ಣೆ ನಿಮ್ಮ ಹೃದಯ ಮತ್ತು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Written by - Ranjitha R K | Last Updated : Aug 2, 2022, 09:48 AM IST
  • ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದು ಎಲ್ಲೆಂದರಲ್ಲಿ ಕೇಳುತ್ತೇವೆ.
  • ಸಣ್ಣ ವಯಸ್ಸಿನಲ್ಲಿಯೇ ಅದೆಷ್ಟೋ ಜನ ಹೃದಯಾಘಾತಕ್ಕೆ ಬಲಿಯಾಗುತ್ತಾರೆ.
  • ಕೊಬ್ಬುಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಈ ನಾಲ್ಕು ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೃದ್ರೋಗ ಹತ್ತಿರವೂ ಸುಳಿಯುವುದಿಲ್ಲ  title=
Healthy oils for heart (file photo)

Healthy oils for heart : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದು  ಎಲ್ಲೆಂದರಲ್ಲಿ ಕೇಳುತ್ತೇವೆ. ಸಣ್ಣ ವಯಸ್ಸಿನಲ್ಲಿಯೇ ಅದೆಷ್ಟೋ ಜನ ಹೃದಯಾಘಾತಕ್ಕೆ ಬಲಿಯಾಗುತ್ತಾರೆ. ಹೃದಯಾಘಾತಕ್ಕೆ ಹಲವು ಕಾರಣಗಳಿರಬಹುದು, ಆದರೆ ಆಹಾರದಲ್ಲಿ ಬಳಸುವ ಎಣ್ಣೆಯು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಡುಗೆಗೆ ಬಳಸುವ ಎಣ್ಣೆ ನಿಮ್ಮ ಹೃದಯ ಮತ್ತು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೊಬ್ಬುಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಡುಗೆ ಎಣ್ಣೆಯು ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಈ ಪೋಷಕಾಂಶಗಳು ತುಂಬಾ ಬಿಸಿಯಾದ ತಾಪಮಾನದಲ್ಲಿ ನಾಶವಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಹಾಳುಮಾಡಲು ಕಾರಣವಾಗಿದೆ. ಹೃದಯದ ಆರೋಗ್ಯಕ್ಕೆ ಸಂಪೂರ್ಣವಾಗಿ ಉತ್ತಮವಾದ  ಎಣ್ಣೆಗಳು ಯಾವುವು ನೋಡೋಣ. 

1-ಹೃದಯದ ಆರೋಗ್ಯಕ್ಕಾಗಿ ಸೂರ್ಯಕಾಂತಿ ಎಣ್ಣೆ :
ಸೂರ್ಯಕಾಂತಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯನ್ನು ಸೀಮಿತ ಪ್ರಮಾಣದಲ್ಲಿ ಬಳಸುವುದು ಅವಶ್ಯಕ. ಏಕೆಂದರೆ ಸೂರ್ಯಕಾಂತಿ ಎಣ್ಣೆಯು ತುಂಬಾ ಬಿಸಿಯಾಗಿರುತ್ತದೆ. ಇದು ನಿಮ್ಮ ಹೃದಯಕ್ಕೆ ಹಾನಿಕಾರಕವಾಗಿದೆ.  

ಇದನ್ನೂ ಓದಿ : Skin Care Tips: ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ

2-ಹೃದಯದ ಆರೋಗ್ಯಕ್ಕಾಗಿ ಸೋಯಾ ಎಣ್ಣೆ : 
ಸೋಯಾ ಎಣ್ಣೆಯು ಪೋಷಕಾಂಶಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಇದು ನಮ್ಮ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

3-ಹೃದಯ ಆರೋಗ್ಯಕ್ಕಾಗಿ ಆಲಿವ್ ಎಣ್ಣೆ :
ಆಲಿವ್ ಎಣ್ಣೆಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಇತರ ಪೋಷಕಾಂಶಗಳಿರುತ್ತವೆ.  ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದರೂ  ಅಡುಗೆಗಾಗಿ ಯಾವಾಗಲೂ ಸಂಸ್ಕರಿಸಿದ ಮತ್ತು ಶುದ್ಧ ಆಲಿವ್ ಎಣ್ಣೆಯನ್ನು ಬಳಸಬೇಕು ಎನ್ನುವುದು ನೆನಪಿರಲಿ. 

ಇದನ್ನೂ ಓದಿ : Men Health Tips: ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿಪಡೆಯಲು ಬಯಸುವ ಪುರುಷರು ಈ ಉಪಾಯಗಳನ್ನು ಅನುಸರಿಸಿ

4 -ಹೃದಯ ಆರೋಗ್ಯಕ್ಕಾಗಿ ಆವಕಾಡೊ ಎಣ್ಣೆ :
ಆವಕಾಡೊ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಇ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿರುತ್ತದೆ. ಇದು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಎಣ್ಣೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News