ಬೆಳಿಗ್ಗೆ ಈ ವಸ್ತುಗಳನ್ನು ತಿಂದರೆ ದಿನವಿಡೀ ಕಾಡುವುದು ಆಲಸ್ಯ .! ಹೆಚ್ಚಾಗುತ್ತದೆ ಹೊಟ್ಟೆಯ ಕೊಬ್ಬು

ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.  ಇದು ದಿನವಿಡೀ ಚೈತನ್ಯವನ್ನು ನೀಡುತ್ತದೆ. ಆದರೆ ಬೆಳಗ್ಗೆ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದರೆ ದಿನಪೂರ್ತಿ ಆಲಸ್ಯ  ಕಾಡುತ್ತದೆ.   

Written by - Ranjitha R K | Last Updated : Aug 25, 2022, 12:42 PM IST
  • ದಿನದ ಆರಂಭ ಚೆನ್ನಾಗಿದ್ದರೆ ದಿನವಿಡೀ ಉತ್ತಮವಾಗಿ ಸಾಗುತ್ತದೆ.
  • ದಿನದ ಆರಂಭವೇ ಸರಿಯಾಗಿಲ್ಲದಿದ್ದರೆ ಇಡೀ ದಿನ ಹಾಳಾದಂತೆಯೇ.
  • ಬೆಳಿಗ್ಗೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸಬೇಡಿ
ಬೆಳಿಗ್ಗೆ ಈ ವಸ್ತುಗಳನ್ನು ತಿಂದರೆ  ದಿನವಿಡೀ ಕಾಡುವುದು ಆಲಸ್ಯ .!  ಹೆಚ್ಚಾಗುತ್ತದೆ ಹೊಟ್ಟೆಯ ಕೊಬ್ಬು  title=
morning breakfast tips (fil photo)

ಬೆಂಗಳೂರು : ದಿನದ ಆರಂಭ ಚೆನ್ನಾಗಿದ್ದರೆ ದಿನವಿಡೀ ಉತ್ತಮವಾಗಿ ಸಾಗುತ್ತದೆ. ದಿನದ ಆರಂಭವೇ ಸರಿಯಾಗಿಲ್ಲದಿದ್ದರೆ ಇಡೀ ದಿನ ಹಾಳಾದಂತೆಯೇ. ದಿನದ ಆರಂಭ ಚೆನ್ನಾಗಿ ಇರಬೇಕಾದರೆ ನಾವು ಉಪಹಾರದಲ್ಲಿ ಏನು ತಿನ್ನುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗುತ್ತದೆ.  ಅನೇಕ ಜನರು ಬೆಳಿಗ್ಗೆ ಬೇಗನೆ ಬ್ರೆಡ್, ಬಿಸ್ಕತ್ತು, ರಸ್ಕ್  ಮುಂತಾದವುಗಳನ್ನು ತಿನ್ನುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ. ಕೆಲವರು ಇದು ಆರೋಗ್ಯಕ್ಕೆ ಉತ್ತಮ ಎನ್ನುವ ಯೋಚನೆಯಿಂದ ಹೀಗೆ ಮಾಡಿದರೆ ಇನ್ನು ಕೆಲವರು ಕೆಲಸ ಕಡಿಮೆಯಾಗುತ್ತದೆ ಎನ್ನುವ ಉದ್ದೇಶದಿಂದ ಇವುಗಳ ಮೊರೆ ಹೋಗುತ್ತಾರೆ. ಆದರೆ ಈ ಎಲ್ಲಾ ವಸ್ತುಗಳು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಅವುಗಳನ್ನು ತಿಂದ ನಂತರ ದಿನಪೂರ್ತಿ ಆಲಸ್ಯ  ಕಾಡುತ್ತದೆ. 

ಬೆಳಿಗ್ಗೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸಬೇಡಿ :
 ಬೆಳಗ್ಗಿನ ಉಪಹಾರದಲ್ಲಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ದಿನವಿಡೀ ಚೈತನ್ಯವನ್ನು ನೀಡುತ್ತದೆ. ಬೆಳಗಿನ ಉಪಾಹಾರದಲ್ಲಿ ಹಣ್ಣುಗಳು, ಡ್ರೈ ಫ್ರೂಟ್ಸ್, ಸಲಾಡ್ ಮತ್ತು ಪ್ರೋಟೀನ್ ತೆಗೆದುಕೊಳ್ಳಬಹುದು. ಆದರೆ ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಬಾರದು.
 
 ಇದನ್ನೂ ಓದಿ : ಒಂದು ತುಂಡು ಬೆಲ್ಲ ಮತ್ತು ಉಗುರು ಬೆಚ್ಚಗಿನ ನೀರು ಮಹಿಳೆಯರ ಐದು ಸಮಸ್ಯೆಗಳಿಗೆ ನೀಡುತ್ತದೆ ಮುಕ್ತಿ

ಕಾರ್ಬೋಹೈಡ್ರೇಟ್‌ಗಳನ್ನು ಏಕೆ ತಿನ್ನಬಾರದು? :
ಕಾರ್ಬೋಹೈಡ್ರೇಟ್‌ಗಳೊಂದಿಗೆ ದಿನವನ್ನು ಪ್ರಾರಂಭಿಸಬಾರದು ಎಂದು ಆರೋಗ್ಯ ತಜ್ಞರು  ಅಭಿಪ್ರಾಯಪಡುತ್ತಾರೆ. ಕಾರ್ಬೋಹೈಡ್ರೇಟ್‌ಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದರಿಂದ  ಗ್ರೆಲಿನ್ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಹೀಗಾದಾಗ ಮತ್ತೆ ಮತ್ತೆ ಹಸಿವಾಗುತ್ತದೆ.  ಹೀಗೆ ಪದೇ ಪದೇ ಹಸಿವಾದಾಗ ಕೈಗೆ ಸಿಕ್ಕ ಆಹಾರ ಪದಾರ್ಥಗಳನ್ನು ಸೇವಿಸಿ ಬಿಡುತ್ತೇವೆ. ಇದು ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. 

ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವುದು ಹೇಗೆ ? 
ದಿನವನ್ನು ಚೆನ್ನಾಗಿ ಪ್ರಾರಂಭಿಸುವುದಾದರೆ, ಬೆಳಗ್ಗೆ ಎದ್ದ ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಿರಿ. ನಂತರ ಬಾದಾಮಿ, ವಾಲ್  ನಟ್ಸ್ ಅಥವಾ ನೆನೆಸಿದ ಕಡಲೆ ಕಾಳು ತಿನ್ನಬಹುದು. ಇದಲ್ಲದೆ, ಬೆಳಗಿನ ಉಪಾಹಾರದಲ್ಲಿ ಹಣ್ಣುಗಳ ಜೊತೆಗೆ ಕೆಲವು   ಆರೋಗ್ಯಕರ ಪಾನೀಯಗಳನ್ನೂ ಸೇರಿಸಿ. ಇದರಲ್ಲಿ ನುಗ್ಗೆ ಸೊಪ್ಪು ಬೇಯಿಸಿದ ನೀರು, ಮೆಂತ್ಯ ನೀರು ಸೇರಿಸಿಕೊಳ್ಳಬಹುದು.

 ಇದನ್ನೂ ಓದಿ :  Home Remedies : ಜ್ವರ, ಮೈಕೈ ನೋವು ತೊಲಗಿಸುತ್ತೆ ಗರಿಕೆ ಕಷಾಯ! ಇಲ್ಲಿದೆ ಮಾಡುವ ವಿಧಾನ

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News