ನಿಮ್ಮ ಟಾಯ್ಲೆಟ್ ಸೀಟ್'ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ?

ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಸೂಕ್ಷ್ಮಾಣುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್'ಗಳ ಮೇಲಿರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.   

Last Updated : Aug 19, 2018, 01:20 PM IST
ನಿಮ್ಮ ಟಾಯ್ಲೆಟ್ ಸೀಟ್'ಗಳಿಗಿಂತಲೂ ಹೆಚ್ಚು ಕೊಳಕಾದ ವಸ್ತು ಯಾವುದು ಗೊತ್ತೇ? title=

ನವದೆಹಲಿ: ಟಾಯ್ಲೆಟ್ ಸೀಟುಗಳು ಅತ್ಯಂತ ಹೆಚ್ಚು ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ, ಕೊಳಕಾಗಿರುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದೀಗ ಸಂಶೋಧನೆಯೊಂದು ಈ ನಂಬಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸಿದೆ. 

ಹಾಗಾದರೆ ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಕೊಳಕಾದ ವಸ್ತು ಯಾವುದು ಎಂದು ಆಲೋಚಿಸುತ್ತಿದ್ದಿರಾ? ಅದು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್'ಗಳು! ಹೌದು, ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಸೂಕ್ಷ್ಮಾಣುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್'ಗಳ ಮೇಲಿರುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. 

ಇಂಗ್ಲೆಂಡಿನ ಗ್ಯಾಜೆಟ್ ಇನ್ಶುರೆನ್ಸ್ ಕಂಪನಿ Insurance2Go ಸಂಶೋಧನೆಯ ಪ್ರಕಾರ, ಸ್ಮಾರ್ಟ್ ಫೋನ್ ಬಳಸುವ ಶೇ.35ರಷ್ಟು ಮಂದಿ ತಮ್ಮ ಫೋನ್ ಸ್ಕ್ರಿನ್ಗಳನ್ನು ಸ್ವಚ್ಛ ಮಾಡುವುದಿಲ್ಲ. ಇವು ಟಾಯ್ಲೆಟ್ ಸೀಟುಗಳಿಗಿಂತ ಹೆಚ್ಚು ಕೊಳಕಾಗಿರುತ್ತವೆ. ಸ್ಮಾರ್ಟ್ ಫೋನ್ ಬಳಸುವ 20 ಜನರಲ್ಲಿ ಕೇವಲ ಒಬ್ಬರು ಮಾತ್ರ 6 ತಿಂಗಳಿಗೊಮ್ಮೆ ಸ್ಕ್ರೀನ್ ಕ್ಲೀನ್ ಮಾಡುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ. 

ಮೊಬೈಲ್ ಸ್ಕ್ರೀನ್ ಗಳ ಮೇಲಿನ ಏರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್ ಪರೀಕ್ಷಿಸಲು ಸಂಶೋಧಕರು ಐಫೋನ್ 6, ಸ್ಯಾಮ್ಸಂಗ್ ಗ್ಯಾಲಕ್ಸಿ 8 ಮತ್ತು ಗೂಗಲ್ ಪಿಕ್ಸೆಲ್ ಈ ಮೂರು ಸ್ಮಾರ್ಟ್ಫೋನ್'ಗಳನ್ನು ಬಳಸಿದರು. ಪ್ರತಿಯೊಂದು ಫೋನುಗಳ ಮೇಲೂ ಬೇರೆ ಬೇರೆ ಸೂಕ್ಷ್ಮಾಣುಗಳು ಕಂಡು ಬಂದವು. ಈ ಸೂಕ್ಷ್ಮಾಣುಗಳು ಹಲವು ಚರ್ಮ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ, ಅಶುಚಿತ್ವದಿಂದಾಗಿ ದೇಹದ ಆರೋಗ್ಯವೂ ಹದಗೆಡುತ್ತದೆ. 

ಸಾಮಾನ್ಯವಾಗಿ ನಾವು ಇತರ ವಸ್ತುಗಳಂತೆ ಸ್ಮಾರ್ಟ್ ಫೋನ್'ಗಳನ್ನು ಒಂದು ಕಡೆ ಇಟ್ಟು ಹೋಗುವುದಿಲ್ಲ. ನಾವು ಹೋದಕಡೆಯೆಲ್ಲಾ ಅದನ್ನು ತೆಗೆದುಕೊಂಡೇ ಹೋಗುತ್ತೇವೆ. ಅದು ಅಡುಗೆ ಕೋಣೆ ಆಗಿರಲಿ, ಶೌಚಾಲಯ ಆಗಿರಲಿ ಎಲ್ಲೆಡೆ ಮೊಬೈಲ್ ಕೈಯಲ್ಲಿ ಇರಲೇಬೇಕು. ಹೀಗಾಗಿ ಮೊಬೈಲ್ ಸ್ಕ್ರೀನ್ ಮೇಲೆ ಹೆಚ್ಚು ಸೂಕ್ಷ್ಮಾಣುಗಳು ಒಗ್ಗೂಡುತ್ತವೆ. ಹಾಗಾಗಿ ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್'ಗಳನ್ನು ಆಗಾಗ ಸ್ವಚ್ಚಗೊಳಿಸಿ. ಇಲ್ಲವಾದರೆ ಚರ್ಮ ಸಮಸ್ಯೆಗಳು ನಿಮಗೆ ಕಟ್ಟಿಟ್ಟ ಬುತ್ತಿ. 

Trending News