Tea ಪ್ರಿಯರಿಗೆ ಎಚ್ಚರಿಕೆ ನೀಡಿದ ತಜ್ಞರು, ವರದಿ ಓದಿ

Tea Side Effects: ಚಳಿಗಾಲದ ಋತು ಕದ ತಟ್ಟಿದೆ. ಈ ಋತುವಿನಲ್ಲಿ ನಲ್ಲಿ ಟೀ ಕುಡಿಯುವುದು ಕೂಡ ತುಂಬಾ ಖುಷಿ ಕೊಡುತ್ತದೆ. ಆದರೆ ಟೀ ಮಾಡುವಲ್ಲಿ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು, ಇಲ್ಲದಿದ್ದರೆ ಮುಂದೊಂದು ದಿನ ಈ ಟೀ ನಿಮಗೆ ದುಬಾರಿ ಪರಿಣಮಿಸಬಹುದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.  

Written by - Nitin Tabib | Last Updated : Nov 20, 2022, 07:52 PM IST
  • ಈಗಾಗಲೇ ತಯಾರಿಸಿದ ತಂಪು ಚಹಾವನ್ನು ನೀವು ಮತ್ತೆ ಮತ್ತೆ ಕುದಿಸಿ ಕುಡಿಯುತ್ತಿದ್ದರೆ,
  • ಆ ತಪ್ಪನ್ನು ನೀವು ಅಪ್ಪಿತಪ್ಪಿಯೂ ಪುನರಾವರ್ತಿಸಬೇಡಿ,
  • ಇಲ್ಲದಿದ್ದರೆ ಅದು ಸಿಹಿ ವಿಷಕ್ಕೆ ಸಮಾನ ಎನ್ನುತ್ತಾರೆ ತಜ್ಞರು.
Tea ಪ್ರಿಯರಿಗೆ ಎಚ್ಚರಿಕೆ ನೀಡಿದ ತಜ್ಞರು, ವರದಿ ಓದಿ title=
Tea Disadvantages

How Long One Should Boil The Tea: ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಚಹಾ ಬಹುತೇಕರ ನೆಚ್ಚಿನ ಪಾನೀಯವಾಗಿದೆ. ಚಹಾ ಪ್ರಿಯರು ಇದನ್ನು 12 ತಿಂಗಳ ಕಾಲ ಸೇವಿಸುತ್ತಾರೆ. ಚಹಾ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೇಹದೊಳಗೆ ಶಾಖವನ್ನು ಉತ್ಪಾದಿಸುತ್ತದೆ. ಚಹಾವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ. ಕೆಲವರು ದಿನಕ್ಕೆ ಹಲವಾರು ಬಾರಿ ಚಹಾ ಕುಡಿಯುತ್ತಾರೆ. ಆದರೆ, ದಿನದಲ್ಲಿ 3 ಕಪ್ ಗಿಂತ ಹೆಚ್ಚು ಟೀ ಕುಡಿಯುವುದು ದೇಹಕ್ಕೆ ಹಾನಿಕಾರಕ ಎನ್ನುತ್ತಾರೆ ಆರೋಗ್ಯ ತಜ್ಞರು. ಇನ್ನೊಂದೆಡೆ ಸ್ಟ್ರಾಂಗ್ ನೆಸ್ ಗಾಗಿ ಚಹಾವನ್ನು ಬಹಳ ಹೊತ್ತು ಕುದಿಸಿ ಕುಡಿಯುವವರು ಹಲವು ಮಂದಿ ಇದ್ದಾರೆ. ಆದರೆ ಇದರಿಂದ ಅವರ ಆರೋಗ್ಯಕ್ಕೂ ಸಾಕಷ್ಟು ಹಾನಿಯಾಗುತ್ತದೆ ಎಂಬುದು ತಜ್ಞರ ಅಭಿಮತ.

ಚಹಾವನ್ನು ಎಷ್ಟು ಕುದಿಸಬೇಕು
ಸಾಮಾನ್ಯವಾಗಿ ಹಲವಾರು ವಿಧದ ಚಹಾಗಳಿವೆ ಮತ್ತು ಪ್ರತಿ ಚಹಾವನ್ನು ತಯಾರಿಸಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತದೆ. ನೀವು ಹಾಲಿನ ಚಹಾವನ್ನು ಮಾಡುತ್ತಿದ್ದರೆ, ಹಾಲು ಸೇರಿಸಿದ ನಂತರ, ಅದನ್ನು ಕೇವಲ 2 ರಿಂದ 3 ನಿಮಿಷಗಳ ಕಾಲ ಕುದಿಸಬೇಕು. ಚಹಾವನ್ನು ಇದಕ್ಕಿಂತ ಹೆಚ್ಚು ಬಿಸಿ ಮಾಡಿದರೆ ಅದರಲ್ಲಿ ಕಹಿ ಹೆಚ್ಚುತ್ತದೆ. ನೀವು ಹಾಲು ಇಲ್ಲದ ಚಹಾವನ್ನು ಬಯಸಿದರೆ, ಅದನ್ನು 2 ರಿಂದ 3 ನಿಮಿಷಗಳ ಕಾಲ ಮಾತ್ರ ಬಿಸಿ ಮಾಡಿ. ಗ್ರೀನ್ ಟೀ ಕೂಡ 2 ರಿಂದ 3 ನಿಮಿಷ ಮಾತ್ರ ಕುದಿಸಬೇಕು.

ಇದನ್ನೂ ಓದಿ-Heel Pain: ಹಿಮ್ಮಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದು ಪ್ರಯತ್ನಿಸಿ

ಮತ್ತೆ ಮತ್ತೆ ಚಹಾ ಕುದಿಸುವುದರಿಂದಾಗುವ ಹಾನಿಗಳು
ಈಗಾಗಲೇ ತಯಾರಿಸಿದ ತಂಪು ಚಹಾವನ್ನು ನೀವು ಮತ್ತೆ ಮತ್ತೆ ಕುದಿಸಿ ಕುಡಿಯುತ್ತಿದ್ದರೆ, ಆ ತಪ್ಪನ್ನು ನೀವು ಅಪ್ಪಿತಪ್ಪಿಯೂ ಪುನರಾವರ್ತಿಸಬೇಡಿ, ಇಲ್ಲದಿದ್ದರೆ ಅದು ಸಿಹಿ ವಿಷಕ್ಕೆ ಸಮಾನ ಎನ್ನುತ್ತಾರೆ ತಜ್ಞರು. ನೀವು ಇದನ್ನು ಪ್ರತಿದಿನ ಮಾಡಿದರೆ, ನಿಮಗೆ ಅತಿಸಾರ, ವಾಂತಿ, ಹೊಟ್ಟೆ ನೋವು, ಎದೆಯುರಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗಬಹುದು. ಇದು ನಿಮ್ಮ ಕರುಳನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಅದಕ್ಕೇ ಅಪ್ಪಿತಪ್ಪಿಯೂ ಕೋಲ್ಡ್ ಟೀ ಮತ್ತೆ ಕುದಿಸಬಾರದು. ಚಹಾವನ್ನು 15 ನಿಮಿಷಗಳ ಹಿಂದೆ ತಯಾರಿಸಿದರೆ, ಅದನ್ನು ಬಿಸಿ ಮಾಡಬಹುದು. ಆದರೆ, ಅದಕ್ಕಿಂತ ಹೆಚ್ಚು ಸಮಯದ ಚಹಾವನ್ನು ಉಪಯೋಗಿಸದೆ ಇರುವುದು ಒಳಿತು.

ಇದನ್ನೂ ಓದಿ-Leaf For Weight Loss: ಈ ಗಿಡದ ಎಲೆಗಳನ್ನು ಅಗೆದು ವೇಗವಾಗಿ ತೂಕ ಕಳೆದುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News