ನವದೆಹಲಿ : ನೀವು ಕಾಫಿ ಪ್ರಿಯರಾಗಿದ್ದರೆ ಈ ಸುದ್ದಿ ತಪ್ಪದೆ ಓದಿ. ನೀವು ದಿನಕ್ಕೆ ಎಷ್ಟು ಕಪ್ ಕಾಫಿ ಸೇವಿಸುತ್ತೀರಿ? ಕಾಫಿಯ ಅತಿಯಾದ ಸೇವನೆಯಿಂದ ಯಾವ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ? ಎಂಬುವುದು ಏನಾದ್ರು ಐಡಿಯಾ ಇದೆಯಾ ನಿಮಗೆ? ಇಲ್ಲಾಅಂದ್ರೆ ಇಲ್ಲಿ ಓದಿ..
ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ(University of South Australia)ದ ಸಂಶೋಧಕರು ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ದಿನಕ್ಕೆ ಆರು ಅಥವಾ ಅದಕ್ಕಿಂತ ಹೆಚ್ಚು ಕಪ್ ಕಾಫಿ ಕುಡಿಯುವ ಜನರಿಗೆ ಬುದ್ಧಿಮಾಂದ್ಯತೆ ಬರುವ ಶೇ.53 ರಷ್ಟು ಸಾಧ್ಯತೆ ಇದೆ, ಮತ್ತೆ ಪಾರ್ಶ್ವವಾಯುವ ಬರುವ ಅಪಾಯವು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Weight Loss With Chocolate: ಪ್ರತಿದಿನ ಈ ಸಮಯದಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಿ!
ಸಂಶೋಧನೆಯಲ್ಲಿ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಕಾಫಿ(Coffee)ಯ ಅತಿಯಾದ ಸೇವನೆಯಿಂದ ಮೆದುಳಿನ ಆರೋಗ್ಯ ಬೇಗ ಹದಗೆಡುತ್ತದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. 37 ರಿಂದ 73 ವಯಸ್ಸಿನ 17,702 ಜನರ ಮೇಲೆ ನಡೆಸಿದ ಅಧ್ಯಯನವು, ಅವರ ಮಿದುಳಿನ ಮೇಲೆ ಕಾಫಿಯ ಪರಿಣಾಮಗಳನ್ನು ಗಮನಿಸಿದೆ, ಇದು ಈ ರೀತಿಯ ಅತಿದೊಡ್ಡ ಸಂಶೋಧನಾ ಉಪಕ್ರಮವಾಗಿದೆ.
ಬುದ್ಧಿಮಾಂದ್ಯತೆಯ ಬಗ್ಗೆ ಅಧ್ಯಯನ ಏನು ಹೇಳುತ್ತದೆ :
ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಹೇಳುವಂತೆ ಬುದ್ಧಿಮಾಂದ್ಯತೆಯು ನಿರ್ದಿಷ್ಟ ರೋಗವಲ್ಲ. ಆದ್ರಲ್ಲಿ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ಮೆದುಳು ಯೋಚಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ದುರ್ಬಲ ಸಾಮರ್ಥ್ಯವನ್ನು ವಿವರಿಸುವ ಒಂದು ಮಷಿನ್ ಮೆಡುಲಾಗಿದೆ. ಇದು ಹೆಚ್ಚಾಗಿ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾವಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : Weight Loss Diet: ಒಂದು ತಿಂಗಳು ಈ ಆಹಾರ ಕ್ರಮ ಅನುಸರಿಸಿದರೆ 2KG ತೂಕ ಕಡಿಮೆಯಾಗುತ್ತೆ!
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ರಪಂಚದಾದ್ಯಂತ ಸುಮಾರು 50 ಮಿಲಿಯನ್ ಜನರು ಬುದ್ಧಿಮಾಂದ್ಯತೆಯನ್ನು ಹೊಂದಿದ್ದಾರೆ. 2030 ರ ವೇಳೆಗೆ, ಆ ಸಂಖ್ಯೆ 82 ಮಿಲಿಯನ್ ಮತ್ತು 2050 ರ ವೇಳೆಗೆ 152 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಬುದ್ಧಿಮಾಂದ್ಯತೆಗೆ ಯಾವುದೇ ಚಿಕಿತ್ಸೆ ಅಥವಾ ಔಷಧಿ ಇಲ್ಲ.
ಪಾರ್ಶ್ವವಾಯು ಮತ್ತು ಇತರ ಮೆದುಳಿನ ರೋಗಗಳ ಅಪಾಯ
ದಿನಕ್ಕೆ ಆರು ಅಥವಾ ಹೆಚ್ಚಿನ ಕಪ್ ಕಾಫಿಯನ್ನು ಕುಡಿಯುವುದರಿಂದ ಮೆದುಳಿನ ಶಕ್ತಿ ಕಡಿಮೆಯಾಗಬಹುದು, ಇದು ವ್ಯಕ್ತಿಗೆ ಪಾರ್ಶ್ವವಾಯು(Stroke) ಮತ್ತು ಇತರ ಮೆದುಳಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಮಾಹಿತಿ ಭಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ : Side Effects Of Bed Tea: ನಿಮಗೂ Bed Tea ತೆಗೆದುಕೊಳ್ಳುವ ಅಭ್ಯಾಸವಿದೆಯಾ? ಹಾಗಾದ್ರೆ ಮೊದಲು ಈ ಲೇಖನ ಓದಿ
ಪಾರ್ಶ್ವವಾಯು ಆಮ್ಲಜನಕದ ಹಸಿವು, ಮಿದುಳಿನ ಹಾನಿ ಮತ್ತು ಮೆದುಳಿಗೆ ರಕ್ತ(Blood) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕಾರ್ಯನಿರ್ವಹಣೆಯ ನಷ್ಟದ ಸುತ್ತ ಸುತ್ತುತ್ತದೆ. ಜಾಗತಿಕ ಮಟ್ಟದಲ್ಲಿ, 25 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ನಾಲ್ಕರಲ್ಲಿ ಒಬ್ಬರಿಗೆ ತಮ್ಮ ಪಾರ್ಶ್ವವಾಯು ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ