ನೀರು ಕುಡಿಯುವ ನಿಮ್ಮ ಈ ಅಭ್ಯಾಸವನ್ನು ಇಂದೇ ಸುಧಾರಿಸಿ, ಇಲ್ಲವೇ...

ನೀರು ಕುಡಿಯಲು ಸರಿಯಾದ ಮಾರ್ಗಗಳು: ನೀರನ್ನು ಜೀವ ಜಲ ಎಂದು ಕರೆಯಲಾಗುತ್ತದೆ. ಕಾರಣ ನೀರು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೀರಿಲ್ಲದೆ ಜೀವನವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ ನೀರು ಕುಡಿಯಲು ಸರಿಯಾದ ಮಾರ್ಗ ಯಾವುದು ಎಂದು ತಿಳಿದಿರುವುದು ಬಹಳ ಮುಖ್ಯ. ಇಲ್ಲವೇ, ಆರೋಗ್ಯಕ್ಕೆ ಸಂಬಂಧಿಸಿದ ಹಲವು ತೊಂದರೆಗಳನ್ನು ಎದುರಿಸಬೇಕಾಗಬಹುದು.

Written by - Yashaswini V | Last Updated : Apr 19, 2022, 02:19 PM IST
  • ನೀರನ್ನು ಜೀವ ಜಲ ಎಂದು ಕರೆಯಲಾಗುತ್ತದೆ.
  • ಉತ್ತಮ ಆರೋಗ್ಯಕ್ಕಾಗಿ ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯಬೇಕು
  • ನೀರು ಕುಡಿಯುವುದು ಮಾತ್ರವಲ್ಲ ಅದನ್ನು ಸರಿಯಾದ ರೀತಿಯಲ್ಲಿ ಕುಡಿಯುವುದು ಕೂಡ ಅಷ್ಟೇ ಮುಖ್ಯ.
ನೀರು ಕುಡಿಯುವ ನಿಮ್ಮ ಈ ಅಭ್ಯಾಸವನ್ನು ಇಂದೇ ಸುಧಾರಿಸಿ, ಇಲ್ಲವೇ... title=
Drinking water tips

ನೀರು ಕುಡಿಯಲು ಸರಿಯಾದ ಮಾರ್ಗಗಳು:   ಯಾವುದೇ ಜೀವಿಗೆ ಬದುಕಲು ಗಾಳಿ ಜೊತೆಗೆ ನೀರು ಸಹ ಬಹಳ ಮುಖ್ಯ. ಹಾಗಾಗಿಯೇ ನೀರನ್ನು ಜೀವ ಜಲ ಎಂದು ಕರೆಯಲಾಗುತ್ತದೆ.  ಇದಲ್ಲದೆ ಉತ್ತಮ ಆರೋಗ್ಯಕ್ಕಾಗಿ ನಿತ್ಯ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ, ನೀರು ಕುಡಿಯುವುದು ಮಾತ್ರವಲ್ಲ ಅದನ್ನು ಸರಿಯಾದ ರೀತಿಯಲ್ಲಿ ಕುಡಿಯುವುದು ಕೂಡ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವರು ಆತುರಾತುರವಾಗಿ ನಿಂತುಕೊಂಡೇ ನೀರು ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಆದರೆ, ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ?

ಹೌದು, ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ನಿಂತು ನೀರು ಕುಡಿಯಬೇಡ ಎಂದು ಬೈಯುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ, ಇದು ಬೈಗುಳವಲ್ಲ. ಹಿರಿಯರು ನಮ್ಮ ಒಳ್ಳೆಯದಕ್ಕಾಗಿಯೇ ಈ ರೀತಿ ಹೇಳುತ್ತಾರೆ. ಕಾರಣ, ನಿಂತು ನೀರು ಕುಡಿಯುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಹಾಗಿದ್ದರೆ, ನೀರು ಕುಡಿಯಲು ಸರಿಯಾದ ಮಾರ್ಗ ಯಾವುದು ಎಂದು ತಿಳಿಯೋಣ...

ಸರಳ ನೀರು ಸೇವನೆ:
ವಾಸ್ತವವಾಗಿ, ನಮ್ಮಲ್ಲಿ ಹಲವರು ಚಳಿಗಾಲದಲ್ಲಿ ಬಿಸಿ ನೀರು, ಬೇಸಿಗೆ ಕಾಲದಲ್ಲಿ ಕೋಲ್ಡ್ ವಾಟರ್ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಯಾವುದೇ ಋತುವಿನಲ್ಲಿ ತುಂಬಾ ಬಿಸಿ ಬಿಸಿ ಅಥವಾ ಸಖತ್ ಚಿಲ್ಡ್ ವಾಟರ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯವನ್ನು ಹಾನಿಗೊಳಿಸುತ್ತದೆ. ಹಾಗಾಗಿ, ಬೆಚ್ಚಗಿನ ನೀರು, ಇಲ್ಲವೇ ಸರಳವಾದ ಶುದ್ಧವಾದ ನಾರ್ಮಲ್ ವಾಟರ್ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಗಳಿಂದ ದೂರ ಉಳಿಯಬಹುದು!

ನೀರು ಕುಡಿಯಲು ಉತ್ತಮ ಭಂಗಿ:
ಉತ್ತಮ ಆರೋಗ್ಯಕ್ಕೆ ನೀರು ಕುಡಿಯುವುದಷ್ಟೇ ಮುಖ್ಯವಲ್ಲ, ನಾವು ಯಾವ ರೀತಿ ನೀರು ಕುಡಿಯುತ್ತೇವೆ ಎಂಬುದು ಬಹಳ ಮುಖ್ಯ. ನಿಂತು ನೀರು ಕುಡಿಯುವುದರಿಂದ ಇದು ಕೀಲುಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಕುಳಿತು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

ಒಂದೇ ಉಸಿರಿನಲ್ಲಿ ನೀರು ಕುಡಿಯಬೇಡಿ:
ನಮ್ಮಲ್ಲಿ ಹಲವರು ಒಂದೇ ಉಸಿರಿನಲ್ಲಿ ಅಂದರೆ ವಿರಾಮ ನೀಡದೆ ನೀರು ಕುಡಿಯುತ್ತಾರೆ. ಆದರೆ, ಈ ಅಭ್ಯಾಸವು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ನೀರು ಕುಡಿಯುವಾಗ ನಿಧಾನವಾಗಿ ಸ್ವಲ್ಪ ಸ್ವಲ್ಪ ಗುಟುಕಿಸಿಕೊಂಡು ನೀರು ಕುಡಿಯುವುದು ಒಳ್ಳೆಯದು. ಇದರ ಜೊತೆಗೆ ಏನನ್ನಾದರು ತಿಂದ ತಕ್ಷಣ ನೀರು ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾದುವುದರಿಡ್ನ ಉದರ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

ಇದನ್ನೂ ಓದಿ- Kidney Failure: ಮೂತ್ರಪಿಂಡದ ವೈಫಲ್ಯದ ಸಂಕೇತ ನೀಡುತ್ತೆ ಮೂತ್ರದ ಬಣ್ಣ

ಈ ಸಮಯದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ:
ಪ್ರತಿ ನಿತ್ಯ ಮಲಗುವ ಮುನ್ನ ಒಂದು ಲೋಟ ನೀರು ಕುಡಿದು ಮಲಗುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯಲ್ಲಿಯೂ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News