Covid-19 Recovery : ಕೊರೋನಾದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಇವುಗಳನ್ನು ಅಪ್ಪಿತಪ್ಪಿಯುವೂ ತಿನ್ನಬೇಡಿ!

ನೀವು ಸಾಕಷ್ಟು ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಸತುವುಗಳನ್ನು ಸೇವಿಸಬೇಕು

Last Updated : May 6, 2021, 12:52 PM IST
  • ಕೊರೋನಾವೈರಸ್ ನಿಮ್ಮ ದೇಹದ ನಿರೋಧಕ ಶಕ್ತಿಯನ್ನು ತುಂಬಾ ದುರ್ಬಲಗೊಳಿಸುತ್ತದೆ
  • ನೀವು ಸಾಕಷ್ಟು ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಸತುವುಗಳನ್ನು ಸೇವಿಸಬೇಕು
  • ಚೇತರಿಸಿಕೊಳ್ಳುವಾಗ ನಿಂಬೆ ಪಾನಕ, ತೆಂಗಿನ ನೀರು, ಹಣ್ಣಿನ ರಸ ಕುಡಿಯಬಹುದು
Covid-19 Recovery : ಕೊರೋನಾದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಇವುಗಳನ್ನು ಅಪ್ಪಿತಪ್ಪಿಯುವೂ ತಿನ್ನಬೇಡಿ! title=

ಕೊರೋನಾವೈರಸ್  ನಿಮ್ಮ ದೇಹದ ನಿರೋಧಕ ಶಕ್ತಿಯನ್ನು ತುಂಬಾ ದುರ್ಬಲಗೊಳಿಸುತ್ತದೆ, ಸೋಂಕಿನ ಸಮಯದಲ್ಲಿ ಮಾತ್ರವಲ್ಲದೆ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತವೆ. ಈ ಸಮಯದಲ್ಲಿ ಔಷಧಿಗಳು ಜೊತೆಗೆ ನೀವು ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ನಿಂದ ಚೇತರಿಸಿಕೊಳ್ಳುವಾಗ, ಯಾವ ಪೌಷ್ಠಿಕಾಂಶಇರುವ ಆಹಾರ ಸೇವಿಸಬೇಕು ಎಂದು ನೀವು ತಿಳಿದಿರಬೇಕು, ಅಲ್ಲದೆ, ಏನು ತಿನ್ನಬಾರದು ಎಂಬುದು ಕೂಡ  ತಿಳಿದಿರುವುದು ಅಷ್ಟೇ ಮುಖ್ಯ.

ಕೊರೋನಾದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಏನು ತಿನ್ನಬೇಕು?

ಪೌಷ್ಟಿಕ ಆಹಾರ ತಜ್ಞ ರುಜುಟಾ ದಿವೇಕರ್ ಅವರ ಪ್ರಕಾರ, ಕೊರೋನಾ(Corona)ದಿಂದ ಚೇತರಿಸಿಕೊಳ್ಳುವಾಗ, ನೀವು ಸಾಕಷ್ಟು ವಿಟಮಿನ್ ಡಿ, ವಿಟಮಿನ್ ಸಿ ಮತ್ತು ಸತುವುಗಳನ್ನು ಸೇವಿಸಬೇಕು ಏಕೆಂದರೆ ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.  ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಹ ಸೇವಿಸಿ. ನೆನೆಸಿದ ಬಾದಾಮಿ ಮತ್ತು ಒಣದ್ರಾಕ್ಷಿಗಳನ್ನ ದಿನ ಬೆಳಗ್ಗೆ ಸೇವಿಸಬೇಕು, ಬೆಲ್ಲ ಮತ್ತು ತುಪ್ಪದೊಂದಿಗೆ ಬ್ರೆಡ್ ತಿನ್ನಿರಿ, ಊಟದ ಸಮಯದಲ್ಲಿ ಖಿಚ್ಡಿ ತಿನ್ನಿರಿ ಮತ್ತು ಸಾಕಷ್ಟು ನೀರು, ಮನೆಯಲ್ಲಿ ತಯಾರಿಸಿದ ಸಿರಪ್ ಮತ್ತು ಮಜ್ಜಿಗೆಯನ್ನು ಕುಡಿಯಿರಿ.

ಇದನ್ನೂ ಓದಿ : ಅತ್ಯುತ್ತಮ ನ್ಯಾಚುರಲ್ ಇಮ್ಯೂನಿಟಿ ಬೂಸ್ಟರ್ ಈ ಸೋಯಾಬೀನ್..!

ಚೇತರಿಕೆಯ ಸಮಯದಲ್ಲಿ ಪ್ಯಾಕ್ ಮಾಡಿದ ಆಹಾರ ತಿನ್ನಬೇಡಿ : 

ಕೊರೋನಾನಿಂದ ಚೇತರಿಕೆಯ ಸಮಯದಲ್ಲಿ ನೀವು ಪ್ರತ್ಯೇಕವಾಗಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಮಯದಲ್ಲಿ ಪ್ಯಾಕ್ ಮಾಡಿದ ಆಹಾರ(Food)ವನ್ನು ಸೇವಿಸಬಾರದು. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಮತ್ತು ಸಂರಕ್ಷಕಗಳು ಇರುತ್ತವೆ, ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಚೇತರಿಕೆ ಹೆಚ್ಚು ಕಷ್ಟಕರವಾಗಿಸುತ್ತದೆ.

ಇದನ್ನೂ ಓದಿ : Coronavirus Infection ನಿಂದ ರಕ್ಷಣೆ ಒದಗಿಸುತ್ತದೆಯೇ Alcohol? ತಜ್ಞರು ಹೇಳಿದ್ದೇನು?

ಮಸಾಲೆ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರಿ : 

ಆರೋಗ್ಯ ತಜ್ಞರ ಪ್ರಕಾರ, ನೀವು ಕೋವಿಡ್(Covid-19) ನಿಂದ ಚೇತರಿಸಿಕೊಳ್ಳುವು ಸಮಯದಲ್ಲಿ ಬಿಸಿ ಮತ್ತು ಮಸಾಲೆಯುಕ್ತ ಆಹಾರಗಳನ್ನು ಸೇವಿಸಬಾರದು. ಸೇವಿಸಿದರೆ ಗಂಟಲಿನಲ್ಲಿ ಕಿರಿಕಿರಿ ಉಂಟಾಗಬಹುದು ಅದು ನಿಮ್ಮ ಕೆಮ್ಮು ಹೆಚ್ಚಿಸುತ್ತದೆ. ಅಲ್ಲದೆ, ಕೆಂಪು ಮೆಣಸಿನಕಾಯಿಯನ್ನು ಸೇವಿಸಬೇಡಿ ಏಕೆಂದರೆ ಅದು ಹೊಟ್ಟೆ ಮತ್ತು ಗಂಟಲಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಆಂಟಿಮೈಕ್ರೊಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ ಕೆಂಪು ಮೆಣಸಿನಕಾಯಿಗೆ ಬದಲಾಗಿ ಮೆಣಸು ಬಳಸಿ.

ಇದನ್ನೂ ಓದಿ : ಏನಿದು 6 ಮಿನಿಟ್ ವಾಕ್ ಟೆಸ್ಟ್ ? ಕರೋನಾ ಸೋಂಕಿತರಿಗೆ ಏನು ಪ್ರಯೋಜನ?

ಹೆಚ್ಚು ಎಣ್ಣೆ ಸೇವಿಸಬೇಡಿ : 

ಕೊರೋನಾದಿಂದ ಚೇತರಿಸಿಕೊಳ್ಳುವಾಗ ಬಾಯಿಗೆ ರುಚಿ ಹತ್ತುವದಲ್ಲಿ ಮತ್ತು ಈ ಸಮಯದಲ್ಲಿ ಸ್ವಲ್ಪ ಹುರಿದ ಆಹಾರವನ್ನು ತಿನ್ನಬೇಕೆನಿಸುತ್ತದೆ. ಆದರೆ ನೀವು ಸ್ವಲ್ಪ ಸಮಯದವರೆಗೆ ಇವುಗಳನ್ನು ಸೇವಿಸುವುದು ನಿಲ್ಲಿಸಬೇಕು ಏಕೆಂದರೆ ಇವುಗಳಲ್ಲಿ ಹೆಚ್ಚಿನ ಕೊಬ್ಬು(Cholesterol) ಇರುತ್ತದೆ, ಅವುಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಮತ್ತು ಶಕ್ತಿ ಬೇಕಾಗುತ್ತದೆ. ಕರಿದ ವಸ್ತುಗಳನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹದಗೆಡಿಸುತ್ತದೆ.

ಇದನ್ನೂ ಓದಿ : Corona Care Tips: ಕೋವಿಡ್‌ನಿಂದ ಬಚಾವಾಗಲು ಇಡೀ ದಿನ ಬಿಸಿನೀರು ಕುಡಿಯುತ್ತಿದ್ದರೆ ಅದು ಎಷ್ಟು ಅಪಾಯಕಾರಿ ಗೊತ್ತೇ?

ತಂಪು ಪಾನೀಯಗಳನ್ನು ಕುಡಿಯಬೇಡಿ : 

ಕೋವಿಡ್ -19 ನಿಂದ ಚೇತರಿಸಿಕೊಳ್ಳುವಾಗ ನೀವು ನಿಂಬೆ ಪಾನಕ, ತೆಂಗಿನ ನೀರು(Coconut Water), ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯಬಹುದು. ಆದರೆ ತಂಪು ಪಾನೀಯಗಳಿಂದ ದೂರವಿರಿ ಏಕೆಂದರೆ ಈ ಪಾನೀಯಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡಬಹುದು, ಇದು ಚೇತರಿಕೆ ಪ್ರಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News