High BP remedy : ಈ 3 ಹಣ್ಣುಗಳು ʼಬಿಪಿʼ ಸಮಸ್ಯೆಗೆ ರಾಮಬಾಣ..! ತಪ್ಪದೇ ತಿನ್ನಿರಿ

High BP : ಅಧಿಕ ರಕ್ತದೊತ್ತಡವು ಒಮ್ಮೆ ಸಂಭವಿಸಿದರೆ ಅದು ಜೀವನದುದ್ದಕ್ಕೂ ಇರುತ್ತದೆ. ನಿಯಂತ್ರಣದಲ್ಲಿರಿಸದಿದ್ದರೆ ಅದು ಮಾರಣಾಂತಿಕವಾಗಬಹುದು. ಇದು ಮೆದುಳಿನ ರಕ್ತಸ್ರಾವದ ಅಪಾಯವನ್ನೂ ಹೆಚ್ಚಿಸುತ್ತದೆ. ಈ  ಕೆಳಗೆ ನೀಡಿರುವ ಹಣ್ಣನ್ನು ಸೇವಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳೋಣ.

Written by - Krishna N K | Last Updated : Jul 16, 2023, 07:38 PM IST
  • ಇಂದಿನ ಜೀವನಶೈಲಿಯಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದ್ದಾರೆ.
  • ಒಮ್ಮೆ ಅಧಿಕ ರಕ್ತದೊತ್ತಡವು ಸಂಭವಿಸಿದರೆ ಅದು ಜೀವನದುದ್ದಕ್ಕೂ ಇರುತ್ತದೆ.
  • ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳೋಣ.
 High BP remedy : ಈ 3 ಹಣ್ಣುಗಳು ʼಬಿಪಿʼ ಸಮಸ್ಯೆಗೆ ರಾಮಬಾಣ..! ತಪ್ಪದೇ ತಿನ್ನಿರಿ title=

High BP remedy : ಬದಲಾದ ಇಂದಿನ ಜೀವನಶೈಲಿಯಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದ್ದಾರೆ. ಅಧುನಿಕ ಜೀವನಶೈಲಿಯಿಂದಾಗಿ ಆಹಾರ ಪದ್ಧತಿ ಬದಲಾಗಿದ್ದು, ಜನ ಒತ್ತಡದ ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ನಿಯಮಿತ ವ್ಯಾಯಾಮವೂ ಇಲ್ಲದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಪೈಕಿ ಅಧಿಕ ರಕ್ತದೊತ್ತಡ ಸಮಸ್ಯೆಯೂ ಒಂದು.

ಅಧಿಕ ರಕ್ತದೊತ್ತಡವು ಒಂದು ಗಂಭೀರ ಸಮಸ್ಯೆಯಾಗಿದ್ದು, ಅದು ಒಮ್ಮೆ ಬಂದರೆ ಜೀವನದುದ್ದಕ್ಕೂ ನಮ್ಮ ಜೊತೆಯಲ್ಲಿಯೇ ಇರುತ್ತದೆ. ಅದನ್ನು ಆಹಾರ, ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿಡಬೇಕು. ಇಲ್ಲದಿದ್ದರೇ ಮಾರಣಾಂತಿಕವಾಗಬಹುದು. ಸದ್ಯ ಈ ಕೆಳಗೆ ನೀಡಿರುವ ಹಣ್ಣುಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ..

ಇದನ್ನೂ ಓದಿ: ನಿತ್ಯ ಬೆಳಗ್ಗೆ ಬೊಜ್ಜು ಕರಗಿಸುವ ಈ ಪಾನೀಯಗಳನ್ನು ಸೇವಿಸಿ ನೋಡಿ, ಬುಲೆಟ್ ಸ್ಪೀಡಲ್ಲಿ ಹೊರಕ್ಕೆ ಜೋತುಬಿದ್ದ ಹೊಟ್ಟೆ ಒಳಹೋಗುತ್ತೆ!

ಬಾಳೆಹಣ್ಣು : ಬಾಳೆಹಣ್ಣು ಪೌಷ್ಟಿಕ ಹಣ್ಣು. ಇದು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದೊತ್ತಡಕ್ಕೆ ರಾಮಬಾಣವೆಂದು ಸಾಬೀತಾಗಿದೆ. ಬಾಳೆಹಣ್ಣಿನ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಪಾರ್ಶ್ವವಾಯು ತಡೆಯುತ್ತದೆ.
 
ಕಿವಿ : ಈ ಹಣ್ಣು ಪೌಷ್ಟಿಕ ಭರಿತವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಕಿವಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:  ಒಂದು ತಿಂಗಳು ʼಚಹ ಮತ್ತು ಕಾಫಿʼ ಕುಡಿಯದಿದ್ದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ..!

ಮಾವು : ಎಲ್ಲರೂ ಇಷ್ಟಪಡುವ ಈ ಹಣ್ಣು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನ ಹೊಂದಿದೆ. ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಾವಿನಹಣ್ಣು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ದೇಹಕ್ಕೆ ಬೀಟಾ ಕ್ಯಾರೋಟಿನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News