Health Tips : ಈ ಕಾರಣಗಳಿಗಾಗಿ ಪುರುಷರು ಹಾಲು ಮತ್ತು ಖರ್ಜೂರ ಸೇವಿಸಬೇಕು

ಹಾಲು ಮತ್ತು ಖರ್ಜೂರ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ,  ಅನೇಕ ಗಂಭೀರ ಕಾಯಿಲೆಗಳಿಂದ ದೂರವಿರಬಹುದು.

Written by - Ranjitha R K | Last Updated : Mar 16, 2021, 04:05 PM IST
  • ಆಹಾರದ ಬಗ್ಗೆ ಗಮನ ಹರಿಸದಿದ್ದಲ್ಲಿ ಗಂಭೀರ ಕಾಯಿಲೆಗಳಿಗೂ ತುತ್ತಾಗಬೇಕಾಗುತ್ತದೆ
  • ಹಾಲು ಮತ್ತು ಖರ್ಜೂರ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
  • ಉಸಿರಾಟದ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಡೇಟ್ಸ್ ಮತ್ತು ಹಾಲು ತೆಗೆದುಕೊಳ್ಳಬೇಕು.
Health Tips : ಈ ಕಾರಣಗಳಿಗಾಗಿ ಪುರುಷರು ಹಾಲು ಮತ್ತು  ಖರ್ಜೂರ ಸೇವಿಸಬೇಕು  title=
ಹಾಲು ಮತ್ತು ಖರ್ಜೂರ ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ (file photo)

ನವದೆಹಲಿ: ಆರೋಗ್ಯ ಇದ್ದರೆ ಭಾಗ್ಯ . ಉತ್ತಮ ಆರೋಗ್ಯಕ್ಕಾಗಿ (Health) ಏನೆಲ್ಲಾ ಸರ್ಕಸ್ ಮಾಡಬೇಕಾಗುತ್ತದೆ. ಇನ್ನು ಕೆಲವರಿಗೆ ಕಂಡ ಕಂಡದ್ದನ್ನೆಲ್ಲಾ ತ್ತಿನ್ನುವ ಅಭ್ಯಾಸ ಇರುತ್ತದೆ. ಆದ್ರೆ ಉತ್ತಮ ಆರೋಗ್ಯಕ್ಕೆ ಏನು ತಿನ್ನುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯ.  ಸಮಯಕ್ಕೆ ಸರಿಯಾಗಿ ನಾವು ಸೇವಿಸುವ ಆಹಾರದ (Food) ಬಗ್ಗೆ ಗಮನ ಹರಿಸದಿದ್ದಲ್ಲಿ ಗಂಭೀರ ಕಾಯಿಲೆಗಳಿಗೂ ತುತ್ತಾಗಬೇಕಾಗುತ್ತದೆ.   ನೀವು ದೈಹಿಕವಾಗಿ  ದೌರ್ಬಲ್ಯರಾಗಿದ್ದರೆ, ಈ ಸುದ್ದಿ ನಿಮಗೆ ಅನುಕೂಲಕರವಾಗಲಿದೆ. ಇವತ್ತು ನಾವು  ಹಾಲು (Milk) ಮತ್ತು ಖರ್ಜೂರವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ಬಗ್ಗೆ ತಿಳಿಸುತ್ತೇವೆ. ಈ ಎರಡು ವಸ್ತುಗಳ ಸೇವನೆಯು ಪುರುಷರಿಗೆ ತುಂಬಾ  (Dates) ಪ್ರಯೋಜನಕಾರಿಯಾಗಿದೆ.  ಅವುಗಳನ್ನು ನಿಯಮಿತವಾಗಿ ಸೇವಿಸಿದರೆ, ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸುವುದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳಿವೆ.

ಹಾಲು ಮತ್ತು ಖರ್ಜೂರ ತಿನ್ನುವುದ್ರಿಂದ ಏನು ಪ್ರಯೋಜನ ? 
ಹಾಲು (Milk) ಮತ್ತು ಖರ್ಜೂರ (Dates) ಸೇವನೆಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರವನ್ನು ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ,  ಅನೇಕ ಗಂಭೀರ ಕಾಯಿಲೆಗಳಿಂದ ದೂರವಿರಬಹುದು. ಖರ್ಜೂರದಲ್ಲಿ ಸಾಕಷ್ಟು ಕ್ಯಾಲ್ಸಿಯಂ(Calcium) , ಫೈಬರ್, Zinc, ಮೆಗ್ನೀಸಿಯಮ್ ಮತ್ತು ಕಬ್ಬಿಣಗಳ (iron) ಅಂಶಗಳು ಹೇರಳವಾಗಿದೆ.  ಇದಲ್ಲದೆ, ಇದು ವಿಟಮಿನ್ ಎ, ಸಿ, ಇ, ಕೆ, ಬಿ 2, ಬಿ 6, ನಿಯಾಸಿನ್ ಮತ್ತು ಥಯಾಮಿನ್ ಸೇರಿದಂತೆ ಅನೇಕ ವಿಟಮಿನ್ ಗಳನ್ನೂ  ಹೊಂದಿದೆ. ಇದು ಪುರುಷರಲ್ಲಿ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.  

ಇದನ್ನೂ ಓದಿ Guvava Leaves Tea: ಪೇರಳೆ ಹಣ್ಣಿನ ಎಳೆಗಳ ಈ ಪೇಯ ಬೊಜ್ಜು ನಿವಾರಕ

ಹಾಲು ಮತ್ತು ಖರ್ಜೂರವು ಪುರುಷರಿಗೆ ಹೇಗೆ ಪ್ರಯೋಜನಕಾರಿ  ?
 ಎರಡೂ ವಸ್ತುಗಳ ನಿಯಮಿತ ಸೇವನೆಯು ವ್ಯಕ್ತಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಖರ್ಜೂರ ದಲ್ಲಿ  ಟೆಸ್ಟೋಸ್ಟೆರಾನ್ ಹಾರ್ಮೋನ್ ಅದನ್ನು ಹೆಚ್ಚಿಸುವ ಗುಣವಿರುತ್ತದೆ. ಇದು ಪುರುಷರ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಹಾಲು ಮತ್ತು ಖರ್ಜುರವನ್ನು  ಒಟ್ಟಿಗೆ ತೆಗೆದುಕೊಳ್ಳುವುದರಿಂದ ಪುರುಷರಿಗೆ ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಬಹುದು.

ಹಾಲು ಮತ್ತು ಖರ್ಜೂರವನ್ನು ಸೇವಿಸುವುದರಿಂದ ಇತರ ಪ್ರಯೋಜನಗಳು:

1. ಲೈಂಗಿಕ ಆರೋಗ್ಯಕ್ಕೆ ಪ್ರಯೋಜನಕಾರಿ
ಹಾಲು ಮತ್ತು ಡೇಟ್ಸ್  ಸೇವಿಸುವುದರಿಂದ ಪುರುಷರ ತ್ರಾಣ ಹೆಚ್ಚಾಗುವುದಲ್ಲದೆ, ಲೈಂಗಿಕ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ.  ಖರ್ಜೂರವು ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ, ಇದು ಪುರುಷರ ತ್ರಾಣವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪುರುಷರು ಹಾಲಿನಲ್ಲಿ  ಡೇಟ್ಸ್   ಅನ್ನು ಸೇರಿಸಿ ಕುದಿಸಿ ಸೇವಿಸಿದರೆ, ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. 

ಇದನ್ನೂ ಓದಿ : Spring Onion : ಈ ಆರು ಕಾರಣಕ್ಕೆ ಈರುಳ್ಳಿ ಸೊಪ್ಪು ಚೆನ್ನಾಗಿ ತಿನ್ನಿ.

2. ಆಸ್ತಮಾ ರೋಗಿಗಳಿಗೆ ಪ್ರಯೋಜನಕಾರಿ :
ಉಸಿರಾಟ  ಸಂಬಂಧಿಸಿದ ಕಾಯಿಲೆಗಳಿದ್ದರೆ  ಡೇಟ್ಸ್ ಮತ್ತು ಹಾಲು ತೆಗೆದುಕೊಳ್ಳಬೇಕು. ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಅಸ್ತಮಾ (asthama) ರೋಗಿಗಳಿಗೆ ಹಾಲು ಮತ್ತು ಖರ್ಜೂರ ತುಂಬಾ ಪ್ರಯೋಜನಕಾರಿ. 

3. ತೂಕ ಹೆಚ್ಚಿಸಲು ಸಹಕಾರಿಯಾಗಿದೆ :
ನೀವು ಬಾಡಿಬಿಲ್ಡಿಂಗ್ ಮಾಡುತ್ತಿದ್ದರೆ ಹಾಲಿನೊಂದಿಗೆ ಖರ್ಜೂರವನ್ನು ತಪ್ಪದೆ ಸೇವಿಸಿ.  ಏಕೆಂದರೆ ಅದರಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರುತ್ತದೆ.  ಇದು ದೇಹ ತೂಕ ಹೆಚ್ಚಾಗಲು (weight gain) ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಜಿಮ್ ತರಬೇತುದಾರರು ತೂಕವನ್ನು ಹೆಚ್ಚಿಸಲು ಡೇಟ್ಸ್ ತಿನ್ನಲು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ : ನಿತ್ಯ Mouthwash ಬಳಸುವವರು ತಪ್ಪದೇ ಈ ಸುದ್ದಿ ಓದಿ

4. ಸಕ್ಕರೆ ಮಟ್ಟವನ್ನು  ನಿಯಂತ್ರಿಸುತ್ತದೆ : 
ಹಾಲು ಮತ್ತು ಖರ್ಜೂರವು ಸಕ್ಕರೆ (sugar) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೂರರಿಂದ ನಾಲ್ಕು ಡೇಟ್ಸ್ ಅನ್ನು ಒಂದು ಲೋಟ ಹಾಲಿನಲ್ಲಿ ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ನೀಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News