Milk-Mishri Benefits:ಜೀವನಪೂರ್ತಿ Young ಆಗಿರಲು ಬಯಸುತ್ತೀರಾ? ಈ ಉಪಾಯ ಅನುಸರಿಸಿ

Health Benefits Of Milk And Mishri - ಆಯುರ್ವೇದದಲ್ಲಿ ಹಾಲು ಮತ್ತು ಕಲ್ಲುಸಕ್ಕರೆಗೆ ಅತ್ಯಂತ ಉತ್ತಮ ನೈಸರ್ಗಿಕ ಔಷಧಿ ಎಂದು ಕರೆಯಲಾಗುತ್ತದೆ. ಈ ಎರಡೂ ಸಂಗತಿಗಳು ಬೆರೆತರೆ ಒಂದು ಅತ್ಯದ್ಭುತ ಆರೋಗ್ಯಕರ  ಅಲಭ ನೀಡುವ ಆಯುರ್ವೇದ ಔಷಧಿಯಾಗಿ ಮಾರ್ಪಡುತ್ತವೆ.

Written by - Nitin Tabib | Last Updated : Jan 16, 2021, 08:33 PM IST
  • ಹಾಲು ಹಾಗೂ ಕಲ್ಲು ಸಕ್ಕರೆಯ ಮಿಶ್ರಣ ಹಲವು ಗಂಭೀರ ಸಮಸ್ಯೆಗಳಿಗೆ ಲಾಭಕಾರಿಯಾಗಿದೆ.
  • ಈ ಎರಡು ಸಂಗತಿಗಳನ್ನು ಏಕಕಾಲಕ್ಕೆ ಬೆರೆಸಿ ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭ ನೀಡುತ್ತವೆ.
  • ಹಾಲಿನಲ್ಲಿ ಬೆರೆತ ಕಲ್ಲು ಸಕ್ಕರೆ ಒಂದು ಅಂಟಾಸಿಡ್ ರೂಪದಲ್ಲಿ ಕಾರ್ಯನಿರ್ವಹಿಸುತದೆ.
Milk-Mishri Benefits:ಜೀವನಪೂರ್ತಿ Young ಆಗಿರಲು ಬಯಸುತ್ತೀರಾ? ಈ ಉಪಾಯ ಅನುಸರಿಸಿ  title=
Health Benefits Of Milk And Mishri (File Photo)

Health Benefits Of Milk And Mishri - ನವದೆಹಲಿ: ಆಯುರ್ವೇದದ ಪ್ರಕಾರ ಹಾಲು ಒಂದು ಉತ್ತಮ ಪೌಷ್ಟಿಕ ಆಹಾರವಾಗಿದೆ. ಹಾಲಿನಲ್ಲಿ ಸಾಕಷ್ಟು ಪ್ರೋಟೀನ್, ಕ್ಯಾಲ್ಸಿಯಂ, ನಿಯಾಸಿನ್, ರಂಜಕ, ಮೆಗ್ನೀಸಿಯಮ್, ಅಯೋಡಿನ್, ಖನಿಜಗಳು, ಕೊಬ್ಬು, ಶಕ್ತಿ, ರಿಬೋಫ್ಲಾವಿನ್ (ವಿಟಮಿನ್ ಬಿ -2) ಸೇರಿದಂತೆ ವಿಟಮಿನ್ ಎ, ಡಿ, ಕೆ ಮತ್ತು ಇ ಗಳಿವೆ. ಇನ್ನೊಂದೆಡೆ ಪೂಜೆಯ ವೇಳೆಗೆ ಪ್ರಸಾದದ ರೂಪದಲ್ಲಿ ಅರ್ಪಿಸಲಾಗುವ ಕಲ್ಲು ಸಕ್ಕರೆ ಕೂಡ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಹಾಗಾಗದರೆ ಬನ್ನಿ ಬೆಳಗ್ಗೆ ರುಚಿಯ ಜೊತೆಗೆ ಮನಸ್ಸು ಹಾಗೂ ಮೆದುಳನ್ನು ಖುಷಿಯಾಗಿಡುವ ಕಲ್ಲು ಸಕ್ಕರೆ ಹಾಗೂ ಹಾಲಿನ ಆರೋಗ್ಯಕರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ. 

ಹಲವು ಗಂಭೀರ ಕಾಯಿಲೆಗಳಿಗೆ ರಾಮಬಾಣ
ಹಲವು ರೀತಿಯ ಗಂಭೀರ ಕಾಯಿಲೆಗಳ ಉಪಚಾರಕ್ಕೆ ಹಾಲು ಮತ್ತು ಕಲ್ಲು ಸಕ್ಕರೆಯನ್ನು ಬಳಸಲಾಗುತ್ತದೆ. ಈ ಎರಡು ವಸ್ತುಗಳನ್ನು ಬೆರೆಸಿ ಸೇವಿಸಿದರೆ, ಇವು ಹಲವು ಆರೋಗ್ಯಕರ ಲಾಭಗಳನ್ನು ನೀಡುತ್ತವೆ. ಹಾಲಿನಲ್ಲಿ ಬೆರೆಸಿದ ಕಲ್ಲುಸಕ್ಕರೆ ಆಂಟಿ-ಆಕ್ಸಿಡೆಂಟ್ ಕೆಲಸ ಮಾಡುತ್ತದೆ. ಇದು ಇನ್ನೂ ಹಲವು ಲಾಭಗಳನ್ನು ನೀಡುತ್ತದೆ.

ಉತ್ತಮ ನಿದ್ರೆಗೆ ಸಹಕಾರಿ 
ಒಂದು ಗ್ಲಾಸ್ ಬೆಚ್ಚನೆಯ ಹಾಲಿನಲ್ಲಿ ಕಲ್ಲು ಸಕ್ಕರೆ ಬೆರೆಸಿ ನಿತ್ಯ ರಾತ್ರಿ ಸೇವಿಸಿ ಮಲಗುವುದರಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆ ದೂರಾಗುತ್ತದೆ. ನಿಮ್ಮ ಮೂಡ್ ಫ್ರೆಶ್ ಗೊಳಿಸುವುದರ ಜೊತೆಗೆ ಮೆದುಳನ್ನು ಶಾಂತಗೊಳಿಸಲು ಕೂಡ ಸಹಕಾರಿಯಾಗಿದೆ. ಒಂದು ವೇಳೆ ನಿಮಗೂ ಕೂಡ ಮೂಡ್ ಸ್ವಿಂಗ್ ಸಮಸ್ಯೆ ಇದ್ದರೆ, ನೀವು ಈ ಪೇಯವನ್ನು ನಿಯಮಿತ ರೂಪದಲ್ಲಿ ಸೇವಿಸಿ ಸಮಸ್ಯೆಯಿಂದ ಮುಕ್ತಿಪಡೆಯಬಹುದು.  ಅದರಲ್ಲೂ ವಿಶೇಷವಾಗಿ ಮೊನೊಪಾಜ್ ಬಳಿಕ ಆಗುವ ಮೂಡ್ ಸ್ವಿಂಗ್ ಸಮಸ್ಯೆಯನ್ನು ಪರಿಹರಿಸಲು ಈ ಡ್ರಿಂಕ್ ತುಂಬಾ ಲಾಭಕಾರಿಯಾಗಿದೆ. 

ಕಣ್ಣಿಗೆ ಇದು ಅಮೃತ
ಪ್ರಸ್ತುತ ದೇಶಾದ್ಯಂತ ವರ್ಕ್ ಫ್ರಮ್ ಹೋಂ ಕಲ್ಚರ್ ಅಸ್ತಿತ್ವದಲ್ಲಿದೆ. ಇಂತಹುದರಲ್ಲಿ ಗಂಟೆಗಟ್ಟಲೇ  ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ ಗಳ ಮೂಲಕ ಕಾರ್ಯನಿರ್ವಹಿಸುವ ಕಾರಣ ಕಣ್ಣುಗಳ ಕಾಳಜಿ ವಹಿಸುವುದು ತುಂಬಾ ಆವಶ್ಯಕವಾಗಿದೆ. ಹೀಗಾಗಿ ನಿತ್ಯ ರಾತ್ರಿ ಮಲಗುವ ಮುನ್ನ ಬೆಚ್ಚನೆಯ ಹಾಲಿನಲ್ಲಿ ಕಲ್ಲು ಸಕ್ಕರೆ ಬೆರೆಸಿ ಸೇವಿಸಿ. ಏಕೆಂದರೆ ಹಾಲು ಮತ್ತು ಕಲ್ಲುಸಕ್ಕರೆ ಕಣ್ಣಿನ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಇದರಿಂದ ನಿಮ್ಮ ಕಣ್ಣುಗಳ ಆರೋಗ್ಯ ಉತ್ತಮವಾಗಿರುತ್ತದೆ.

ಪಚನ ಕ್ರಿಯೆ ಉತ್ತಮವಾಗಿರುತ್ತದೆ
ಇಂದಿನ ಓಡಾತಭರಿತ ಜೀವನದಲ್ಲಿ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳು ಜನರನ್ನು ಕಾಡುತ್ತವೆ. ಪಚನಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಮಿಶ್ರಿ ಅಥವಾ ಕಲ್ಲು ಸಕ್ಕರೆ ಬೆರೆಸಿದ ಹಾಲಿಸ್ನ ಸೇವನೆ ಲಾಭಕಾರಿಯಾಗಿದೆ. ಅಸಿಡಿಟಿ ಸಮಸ್ಯೆ ಇರುವವರಿಗೆ ಇದು ತುಂಬಾ ಲಾಭ ನೀಡುತ್ತದೆ. ಕಲ್ಲುಸಕ್ಕರೆಯಲ್ಲಿ ಡೈಜೆಸ್ಟಿವ ಗುಣಗಳಿವೆ.

ಪುರುಷರಿಗೆ ಲಾಭಕಾರಿ
ಆಯುರ್ವೇದದ ಪ್ರಕಾರ ಹಾಲಿನಲ್ಲಿ(Milk) ಕೇಸರಿ ಹಾಗೂ ಕಲ್ಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಶರೀರದಲ್ಲಿ ಶಕ್ತಿ ತುಂಬುತ್ತದೆ ಹಾಗೂ ಲವಲವಿಕೆ ತುಂಬಿಕೊಳ್ಳುತ್ತದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ರಕ್ತ ಸಂಚಾರ ಕೂಡ ಸುಲಲಿತಗೊಳಿಸುತ್ತದೆ. ಇದು ಪುರುಷರಲ್ಲಿ ಲೈಂಗಿಕ ದೌರ್ಬಲ್ಯ ಕೂಡ ನಿವಾರಿಸುತ್ತದೆ.

ಇದನ್ನು ಓದಿ- ತಪ್ಪಿಯೂ ಬೋರಲು ಮಲಗಬೇಡಿ..! ಕಾಡಬಹುದು ಇನ್ನಿಲ್ಲದ ಸಮಸ್ಯೆ..!

ಒತ್ತಡ ನಿವಾರಕ
ಸಕ್ಕರೆ ಮತ್ತು ಹಾಲಿನ ಮಿಶ್ರಣ ಮೆದುಳಿನ ಸಾಮರ್ಥ್ಯವನ್ನು ಸುಧಾರಿಸುವ ಕ್ಷಮತೆ ಹೊಂದಿದೆ. ಆಯುರ್ವೇದದ ಪ್ರಕಾರ, ರಾತ್ರಿ ಮಲಗುವ ಮುನ್ನ ಕಲ್ಲು ಸಕ್ಕರೆಯನ್ನು  ಬೆಚ್ಚಗಿನ ಹಾಲಿನೊಂದಿಗೆ ಬೆರೆಸುವುದು ಸ್ಮರಣ  ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ. ಮಾನಸಿಕ ಆಯಾಸ ಮತ್ತು ಒತ್ತಡ ಎರಡನ್ನೂ ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ವ್ಯಾಸಂಗ ಮಾಡುವ ಮಕ್ಕಳು ಪ್ರತಿದಿನ ರಾತ್ರಿ ಈ ಪಾನೀಯವನ್ನು ಸೇವಿಸಬೇಕು. ಮೆದುಳಿನ ಆರೋಗ್ಯವನ್ನು ಸುಧಾರಿಸಲು ಈ ಪಾನೀಯ ಒಂದು ನೈಸರ್ಗಿಕ ಔಷಧಿ.

ಇದನ್ನು ಓದಿ- Fruit lables : ಹಣ್ಣಿನಲ್ಲಿ ಸ್ಟಿಕರ್ ಯಾಕೆ ಹಾಕಿರುತ್ತಾರೆ ಗೊತ್ತಾ ? ಲೇಬಲ್ ಕೋಡ್ ಏನು ಹೇಳುತ್ತೆ..?

ಶೀತ ನಿವಾರಣೆಗೆ ಪರಿಣಾಮಕಾರಿ
ಚಳಿಗಾಲ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ, ಯಾರಾದರು ಶೀತ ಮತ್ತು ಕೆಮ್ಮಿನ ಬಗ್ಗೆ ದೂರು ನೀಡಿದರೆ, ಅವರಿಗೆ ಕಲ್ಲು ಸಕ್ಕರೆಯನ್ನು ಒಂದು ಲೋಟ ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯಲು ನೀಡಿ . ಇದರಿಂದ ಅವರಿಗೆ ಪರಿಹಾರ ಸಿಗಲಿದೆ. ನಿದ್ರೆಗೆ ಮುನ್ನ ದಿನಕ್ಕೆ ಎರಡು ಬಾರಿ ಅಥವಾ ರಾತ್ರಿಯಲ್ಲಿ ಇದನ್ನು ಕುಡಿಯಿರಿ, ಇದರಿಂದ ನಿಮಗೆ ಅದ್ಭುತ ಪ್ರಯೋಜನ ಸಿಗಲಿದೆ.

ಇದನ್ನು ಓದಿ- Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ

ಎನಿಮಿಯಾ ಕಾಯಿಲೆಗೆ ಪ್ರಭಾವಶಾಲಿ ಔಷಧಿ
ರಕ್ತಹೀನತೆ ಸಮಸ್ಯೆ ಭಾರತದಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ರಕ್ತಹೀನತೆಯನ್ನು ನಿವಾರಿಸಲು ಈ ಪಾನೀಯವು ತುಂಬಾ ಪರಿಣಾಮಕಾರಿಯಾಗಿದೆ. ರಕ್ತಹೀನತೆ ಸಮಸ್ಯೆ ಇರುವವರ ಜನರಲ್ಲಿ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವು ತೀವ್ರವಾಗಿ ಕುಸಿಯುತ್ತದೆ. ಆದ್ದರಿಂದ ಈ ಪಾನೀಯದ ಸೇವನೆಯು ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ರಕ್ತ ಪರಿಚಲನೆ ಪ್ರಕ್ರಿಯೆಯನ್ನು ಸಹ ಸುಧಾರಿಸುತ್ತದೆ. ರಕ್ತಹೀನತೆಯಲ್ಲಿ, ಮಲಗುವ ಮುನ್ನ ನಿತ್ಯ ಈ ಪಾನೀಯ ಸೇವನೆ ಮಾಡಿ.

ಇದನ್ನು ಓದಿ- Hot Water : ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News