ನವದೆಹಲಿ: ಬಲವಾದ ರೋಗನಿರೋಧಕ ವ್ಯವಸ್ಥೆ - ಇದು ಕೇವಲ ಮೂರು ಪದಗಳಲ್ಲ, ಆದರೆ ಕರೋನಾ ಸಾಂಕ್ರಾಮಿಕ ರೋಗದಿಂದ ಬದುಕುಳಿಯುವ ಏಕೈಕ ಮಾರ್ಗ ಅಂದರೆ ಗುರುಮಂತ್ರವಾಗಿದೆ. ಜನರು ತಮ್ಮ ಇಮ್ಯೂನ್ ಸಿಸ್ಟಂ ಅನ್ನು ಸರಿಯಾಗಿಡಲು ಏನೆಲ್ಲಾ ಕಸರತ್ತು ನಡೆಸುತ್ತಾರೆ. ಸರಿಯಾದ ಡಯಟ್, ಮನೆ ಮದ್ದು, ವ್ಯಾಯಾಮ ಹಾಗೂ ಇನ್ನೆಲ್ಲ ಕಸರತ್ತು ಗಳನ್ನು ಮಾಡುತ್ತಾರೆ. ಯಾವುದೇ ಕಸರತ್ತು ಇಲ್ಲದೆ ಕೇವಲ ಆರಾಮ ಮಾಡುವ ಮೂಲಕ ನೀವು ನಿಮ್ಮ ಇಮ್ಯೂನಿಟಿ ಸಿಸ್ಟಂ ಅನ್ನು ಹೆಚ್ಚಿಸಬಹುದು ಅಂತ ನಾವು ನಿಮಗೆ ಹೇಳಿದರೆ...ನಮ್ಬಿಕೆಯಾಗುವುದಿಲ್ಲವೆ? ಬನ್ನಿ ಅವು ಯಾವುವು ಒಮ್ಮೆ ನೋಡೋಣ.
1. ಆಟೋಟ ಹಾಗೂ ಹಾಡು-ನೃತ್ಯಗಳ ಮೂಲಕ ಕೂಡ ನೀವು ನಿಮ್ಮ ಇಮ್ಯೂನಿಟಿ ಸಿಸ್ಟಂ ಅನ್ನು ವೃದ್ಧಿಗೊಳಿಸಬಹುದು. ಜರ್ನಲ್ ಆಫ್ ಸ್ಪೋರ್ಟ್ಸ್ ಅಂಡ್ ಹೆಲ್ತ್ ಸೈನ್ಸ್ ನಲ್ಲಿ 2019 ರಲ್ಲಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ, ಜೀವನದಲ್ಲಿ ಸಕ್ರೀಯರಾಗಿರುವುದು ನಮ್ಮ ದೇಹದ ಇಮ್ಯೂನಿಟಿ ಸಿಸ್ಟಂ ಅನ್ನು ಸುಧಾರಿಸುತ್ತದೆ ಎನ್ನಲಾಗಿದೆ.
2. ಉತ್ತಮ ಹಾಗೂ ಗುಣಮಟ್ಟದ ನಿದ್ರೆಯಿಂದಲೂ ಕೂಡ ಇಮ್ಯೂನಿಟಿ ಸಿಸ್ಟಂ ಅನ್ನು ಸರಿಯಾಗಿಡಬಹುದು. ಜರ್ನಲ್ ಆಫ್ ಎಸ್ಪೆರಿಮೆಂಟಲ್ ಮೆಡಿಸಿನ್ ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ರಾತ್ರಿಯಿಡಿ ಪಡೆದ ಒಂದು ಸಂಪೂರ್ಣ ಗುಣಮಟ್ಟದ ನಿದ್ರೆ, ನಿಮ್ಮ ಟಿ-ಸೇಲ್ಸ್ ಗಳನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಸಹಾಯಕಾರಿಯಾಗಿವೆ. ಜೊತೆಗೆ ಇವು ಅಡ್ರಿನಾಲಿನ ಹಾಗೂ ಪ್ರೋಸ್ಟಾಗ್ಲೈನ್ಡಿಂಗ್ ಗಳಂತಹ ಕೋಶಗಳನ್ನು ಉತ್ತಮಗೊಳಿಸುತ್ತವೆ ಎನ್ನಲಾಗಿದೆ.
3. ಸಾರಾಯಿ, ಧೂಮಪಾನ ಹಾಗೂ ಇತರೆ ಯಾವುದಾದರೊಂದು ಹೊಸ ಚಟ ನಮ್ಮ ದೇಹದ ಇಮ್ಯೂನ್ ಸಿಸ್ಟಂ ಅನ್ನು ಹಾಳುಗೆಡವುತ್ತವೆ. 2015ರಲ್ಲಿ ನಡೆಸಲಾಗಿರುವ ಅಲ್ಕೋಹಾಲ್ ರಿಸರ್ಹ್ ನ ಒಂದು ಅಧ್ಯಯನದ ಪ್ರಕಾರ, ಅತ್ಯಧಿಕ ಅಲ್ಕೋಹಾಲ್ ಸೇವನೆ ದೇಹದ ಪ್ರತಿರೋಧಕ ಶಕ್ತಿಯನ್ನು ಹಾಳುಗೆಡುವುತ್ತದೆ. ದೇಹದ ಮೆಟಾಬಾಲಿಸಂ ಸಿಸ್ಟಂ ಕೂಡ ಹಾನಿಗೊಳಿಸುತ್ತದೆ.
ಈ ರೀತಿಯ ಚಟಗಳಿಂದ ದೂರವಿರಲು ಪಾನ್ ಸೇವನೆ ಒಂದು ಉತ್ತಮ ಮಾರ್ಗ. ಇದರಲ್ಲಿ ಹಲವು ಆಂಟಿಬಯೋಟಿಕ್ ಗುಣಗಳಿವೆ.
4. ಒತ್ತಡ ಕಾಣಿಸದೆಯೇ ನಮ್ಮ ಶರೀರವನ್ನು ಒಳಗಡೆಯಿಂದ ಪೊಳ್ಳು ಮಾಡುತ್ತದೆ. ಒತ್ತಡದಲ್ಲಿರುವಾಗ ನಮ್ಮ ದೇಹ ಕಾರ್ಟಿಸೋಲ್ ಹೆಸರಿನ ಹಾರೋಮೊನ್ ಸೃವಿಸುತ್ತದೆ. ಇವು ದೇಹದ ಕೋಶಗಳನ್ನು ಸೂಕ್ಷ್ಮಗೊಳಿಸುತ್ತದೆ ಹಾಗೂ ಇದ್ರಿಂದ ರೋಗ ಪ್ರತಿರೋಧಕ ಶಕ್ತಿ ಕೂಡ ದೂರವಾಗುತ್ತದೆ. ಹೀಗಾಗಿ ಒತ್ತಡದಿಂದ ಆದಷ್ಟು ದೂರವಾಗಿರಲು ಪೇಂಟಿಂಗ್ ಸಹಕಾರಿಯಾಗಿದೆ. ಬಣ್ಣಗಳ ಬಳಕೆ ಒತ್ತಡ ಕಡಿಮೆ ಮಾಡುತ್ತದೆ ಹಾಗೂ ಹ್ಯಾಪಿ ಹಾರ್ಮೋನ್ ಸೃವಿಕೆಗೆ ಕಾರಣವಾಗುತ್ತದೆ.
5. ಹೊರಗಡೆ ಆಹಾರ ಸೇವಿಸುವುದನ್ನು ನಿಲ್ಲಿಸಿ
ಕಾಯಿಲೆಗಳ ಈ ಕಾಲದಲ್ಲಿ ದೇಹದ ಇಮ್ಯೂನ್ ಸಿಸ್ಟಮ್ ಅನ್ನು ಗಟ್ಟಿಗೊಳಿಸಲು ಕೇವಲ ಮನೆಯಲ್ಲಿ ತಯಾರಿಸಿದ ಆಹಾರ ಮಾತ್ರ ಸೇವಿಸಿ. ಜಂಕ್ ಫುಡ್ ಸೇವನೆ ದೇಹದ ಆಂಟಿ ಇನ್ಫ್ಲೇಮೆಟರೀ ಪ್ರಕ್ರಿಯೆಯನ್ನು ಹಾಳುಗೆಡವುತ್ತದೆ. ಇದರಿಂದ ದೇಹದ ಇಮ್ಯೂನ್ ಸಿಸ್ಟಂ ಕೂಡ ಹಾಳಾಗುತ್ತದೆ.