Healthy Diet: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತೆ ಈ ಬೇಳೆಕಾಳು!

Iron Rich Foods: ಪ್ರತಿ ಮನೆಯಲ್ಲಿಯೂ ನಿತ್ಯ ಭೋಜನದಲ್ಲಿ ಒಂದಲ್ಲಾ ಒಂದು ರೀತಿಯ ದಾಲ್ ತಯಾರಿಸಲಾಗುತ್ತದೆ. ಆದರೆ, ನಾವು ಸರಿಯಾದ ಬೇಳೆಕಾಳುಗಳನ್ನು ಆರಿಸಿದರೆ, ಅದರ ಸೇವನೆಯಿಂದ ನಾವು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದರೂ ಸಹ ನೀವು ಬೇಳೆಕಾಳುಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Written by - Yashaswini V | Last Updated : Nov 22, 2022, 01:40 PM IST
  • ರಕ್ತಹೀನತೆ ಗಂಭೀರ ಕಾಯಿಲೆಯಾಗಿದೆ.
  • ರಕ್ತಹೀನತೆಗೆ ಕಾರಣ ದೇಹದಲ್ಲಿ ಕಬ್ಬಿಣದ ಕೊರತೆ.
  • ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಲು ಬೇಳೆಕಾಳು ಕೂಡ ಪ್ರಯೋಜನಕಾರಿ
Healthy Diet: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತೆ ಈ ಬೇಳೆಕಾಳು! title=
Healthy diet

Iron Rich Foods: ದೇಹಕ್ಕೆ ರಕ್ತವೇ ಆಧಾರ. ರಕ್ತವಿಲ್ಲದಿದ್ದರೆ ಬದುಕುವುದು ಕಷ್ಟ. ರಕ್ತದ ಕೊರತೆಯು ರಕ್ತಹೀನತೆಯಂತಹ ಅಪಾಯಕಾರಿ ಕಾಯಿಲೆಗೆ ಕಾರಣವಾಗುತ್ತದೆ. ರಕ್ತಹೀನತೆ ಗಂಭೀರ ಕಾಯಿಲೆಯಾಗಿದೆ. ರಕ್ತಹೀನತೆಗೆ ಕಾರಣ ದೇಹದಲ್ಲಿ ಕಬ್ಬಿಣದ ಕೊರತೆ. ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಲು, ಅನೇಕ ರೀತಿಯ ಹಣ್ಣುಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆದರೆ, ರಕ್ತಹೀನತೆಯನ್ನು ಹೋಗಲಾಡಿಸಲು, ನಾವು ನಮ್ಮ ದೈನಂದಿನ ಆಹಾರದಲ್ಲಿ ಬೇಳೆಕಾಳುಗಳನ್ನು ಸಹ ಸೇರಿಸಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?

ರಕ್ತಹೀನತೆ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತೆ ಕಡಲೆಬೇಳೆ:
ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಬೇಕಾದರೆ, ಚನಾ ದಾಲ್ ಎಂದರೆ ಕಡಲೆಬೇಳೆ ತಿನ್ನುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಕಡಲೆಬೇಳೆಯನ್ನು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳಿದ್ದು, ರಕ್ತಹೀನತೆಯಂತಹ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ- ಈ ಜ್ಯೂಸ್ ಸೇವನೆಯಿಂದ ನಿಯಂತ್ರಣದಲ್ಲಿರುವುದು ಬ್ಲಡ್ ಶುಗರ್

ಚನಾ ದಾಲ್/ಕಡಲೆಬೇಳೆಯ ಪ್ರಯೋಜನಗಳು:
ಚನಾ ದಾಲ್ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ. ಹಾಗಾಗಿ, ಕಡಲೆಬೇಳೆಯನ್ನು ಸೇವಿಸುವುದರಿಂದ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ. 

- ಕಬ್ಬಿಣದಂಶವಿರುವ ಕಡಲೆಬೇಳೆಯನ್ನು ತಿನ್ನುವುದರಿಂದ ರಕ್ತಹೀನತೆಯನ್ನು ಹೋಗಲಾಡಿಸಬಹುದು. ರಕ್ತಹೀನತೆಯಲ್ಲಿ ಕಡಲೇಬೇಳೆಯನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

- ಕಡಲೇಬೇಳೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಬಹುದು. ಇದರಿಂದ ರಕ್ತದ ಕೊರತೆ ದೂರವಾಗುತ್ತದೆ.

- ಕಡಲೇಬೇಳೆ/ಚನಾ ದಾಲ್ ಪ್ರೋಟೀನ್ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. 

ಇದನ್ನೂ ಓದಿ- Garlic Honey Benefits: ಪುರುಷರ ಆರೋಗ್ಯಕ್ಕೆ ರಾಮಬಾಣ ಬೆಳ್ಳುಳ್ಳಿ-ಜೇನುತುಪ್ಪ

- ಇದು ಕಬ್ಬಿಣದ ಕೊರತೆಯನ್ನು ನಿವಾರಿಸುತ್ತದೆ, ಇದು ಹೃದಯ ಮತ್ತು ಶ್ವಾಸಕೋಶಗಳಿಗೆ ಸಹ ಪ್ರಯೋಜನಕಾರಿಯಾಗಿದೆ. 

- ಚನಾ ದಾಲ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. 

- ಚನಾ ದಾಲ್ ನಲ್ಲಿ ಫೈಬರ್ ಹೇರಳವಾಗಿ ಇರುತ್ತದೆ. ಇದರ ಬಳಕೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ದೂರವಾಗುತ್ತವೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News