High Blood Pressure: ಹೈ ಬಿಪಿ ನಿಯಂತ್ರಿಸಲು ಈ ಪರಿಣಾಮಕಾರಿ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ

High Blood Pressure: ಔಷಧಿಗಳನ್ನು ಬಳಸುವುದರಿಂದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಲ್ಲದೆ, ಕೆಲವು ಪರಿಣಾಮಕಾರಿ ಮನೆಮದ್ದುಗಳು ಸಹ ನಿಮಗೆ ಪ್ರಯೋಜನವನ್ನು ನೀಡುತ್ತವೆ.

Written by - Yashaswini V | Last Updated : Dec 31, 2021, 01:06 PM IST
  • ಹೈ ಬಿಪಿ ಇರುವವರಿಗೆ ಮೂಲಂಗಿಯ ಸೇವನೆಯಿಂದ ಲಾಭವಾಗಲಿದೆ
  • ಇದು ಬಿಪಿ ಕಂಟ್ರೋಲ್ ಮಾಡಲು ಸಹಕಾರಿ ಆಗಿದೆ
  • ಪ್ರತಿದಿನ ಮಧ್ಯಾಹ್ನ ಮೂಲಂಗಿ ರಸವನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ
High Blood Pressure: ಹೈ ಬಿಪಿ ನಿಯಂತ್ರಿಸಲು ಈ ಪರಿಣಾಮಕಾರಿ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ title=
Radish juice benefits

High Blood Pressure: ಇತ್ತೀಚಿನ ಜೀವನಶೈಲಿಯಿಂದಾಗಿ ಅತಿ ಕಡಿಮೆ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಔಷಧಿಗಳನ್ನು ಬಳಸುವುದರಿಂದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಲ್ಲದೆ, ಕೆಲವು ಪರಿಣಾಮಕಾರಿ ಮನೆಮದ್ದುಗಳು ಸಹ ನಿಮಗೆ ಪ್ರಯೋಜನವನ್ನು ನೀಡುತ್ತವೆ. ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ ಮೂಲಂಗಿ ರಸದ ಸೇವನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ರಕ್ತದೊತ್ತಡ ಹೆಚ್ಚಾಗುವುದನ್ನು ತಡೆಯಲು ನೀವು ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.

ರಕ್ತದೊತ್ತಡ ನಿಯಂತ್ರಣದಲ್ಲಿಡಲು ಮೂಲಂಗಿ ಸಹಕಾರಿ:
ಮೂಲಂಗಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಬಿಪಿ ರೋಗಿಗಳಿಗೆ (BP Patients) ಪ್ರಯೋಜನವಾಗುತ್ತದೆ. ಇದು ರಕ್ತದ ಹರಿವನ್ನು ಸಮತೋಲನದಲ್ಲಿಡುತ್ತದೆ. ಇದು ರಕ್ತ ಶುದ್ಧೀಕರಣವಾಗಿಯೂ ಕಾರ್ಯನಿರ್ವಹಿಸುತ್ತದೆ. ಅಧಿಕ ಬಿಪಿ ಸಮಸ್ಯೆಯಲ್ಲಿ ಪ್ರತಿದಿನ ಮಧ್ಯಾಹ್ನ ಮೂಲಂಗಿಯ ರಸವನ್ನು ಸೇವಿಸುವುದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಕೆಮ್ಮು ನಿವಾರಣೆಗೆ ಸಹಕಾರಿ:
ಇದಲ್ಲದೆ, ಕೆಮ್ಮಿನ ಸಮಸ್ಯೆ ಇರುವವರಿಗೂ ಮೂಲಂಗಿ ರಸದ ಸೇವನೆಯು (Radish juice benefits) ಪ್ರಯೋಜನಕಾರಿಯಾಗಿದೆ. ಮೂಲಂಗಿಯನ್ನು ಒಣಗಿಸಿ ಮತ್ತು ಅದರಿಂದ ಪುಡಿ ಮಾಡಿ. ಇದನ್ನು ಪ್ರತಿದಿನ 1 ಗ್ರಾಂ ಪ್ರಮಾಣದಲ್ಲಿ ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗಲಿದೆ.

ಇದನ್ನೂ ಓದಿ-  Toothpicks: ಊಟ ಮಾಡಿದ ನಂತರ ಟೂತ್‌ಪಿಕ್‌ನಿಂದ ಹಲ್ಲು ಚುಚ್ಚುವ ಅಭ್ಯಾಸ ನಿಮಗೂ ಇದೆಯೇ?

ಅಸಿಡಿಟಿ ಸಮಸ್ಯೆಯಲ್ಲಿ ಪರಿಹಾರ:
ಅಸಿಡಿಟಿ (Acidity) ಸಮಸ್ಯೆಯಲ್ಲೂ ಮೂಲಂಗಿಯ ಸೇವನೆ ಪ್ರಯೋಜನಕಾರಿ. ಇದಕ್ಕಾಗಿ ಹಸಿ ಮೂಲಂಗಿಯನ್ನು ಸೇವಿಸಿ. ಅದನ್ನು ಬೇಯಿಸಬೇಡಿ.

ಕಲ್ಲಿನ ಸಮಸ್ಯೆ:
ಕಲ್ಲುಗಳ ಸಮಸ್ಯೆಯಲ್ಲಿ ಸಹ ಮೂಲಂಗಿಯ ಸೇವನೆಯು ಪ್ರಯೋಜನಕಾರಿಯಾಗಿದೆ. 100 ಗ್ರಾಂ ಮೂಲಂಗಿ ಎಲೆಗಳ ರಸವನ್ನು ತೆಗೆದು ದಿನಕ್ಕೆ ಮೂರು ಬಾರಿ ಕುಡಿಯಿರಿ. ಇದರಿಂದ ಪ್ರಯೋಜನವಾಗಲಿದೆ.

ಕಾಮಾಲೆ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ:
ಜಾಂಡೀಸ್ ಸಮಸ್ಯೆಯಲ್ಲೂ ಮೂಲಂಗಿಯ ಸೇವನೆಯು ಪ್ರಯೋಜನಕಾರಿ. ತಾಜಾ ಮೂಲಂಗಿ ಎಲೆಗಳನ್ನು ಪೇಸ್ಟ್ ಮಾಡಿ ಮತ್ತು ಅದನ್ನು ಹಾಲಿನಲ್ಲಿ ಕುದಿಸಿದ ನಂತರ ಕುಡಿಯುವುದರಿಂದ  ಜಾಂಡೀಸ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Cardamom Benefits: ಏಲಕ್ಕಿಯನ್ನು ಈ ರೀತಿ ಸೇವಿಸುವುದರಿಂದ ಸಿಗುತ್ತೆ ಹೆಚ್ಚು ಪ್ರಯೋಜನ

ರಕ್ತಹೀನತೆಯಿಂದ ಪರಿಹಾರ:
ದೇಹದಲ್ಲಿ ರಕ್ತದ ಕೊರತೆಯಿಂದ ರಕ್ತಹೀನತೆ ಉಂಟಾಗಬಹುದು. ರಕ್ತಹೀನತೆಯನ್ನು ಹೋಗಲಾಡಿಸಲು, ಮೂಲಂಗಿ ಎಲೆಗಳ ರಸವನ್ನು ದಿನಕ್ಕೆ 3 ಬಾರಿ ಕುಡಿಯಿರಿ. ಇದರಿಂದ ಪ್ರಯೋಜನವಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News