ಬೆಂಗಳೂರು: "ಮಳೆಗಾಲ ಬಂದ್ರೆ ಸಾಕು, ಈ ಕೆಮ್ಮು, ನೆಗಡಿ ಸಮಸ್ಯೆಗಳು ನಮ್ಮ ಜೀವ ಹಿಂಡಿ ಬಿಡುತ್ತವೆ... ಎಷ್ಟು ಅಂತ ಮಾತ್ರೆಗಳಳನ್ನು ನುಂಗೋದಪ್ಪಾ.. ನಂಗಂತೂ ಸಾಕಾಗಿಹೋಗಿದೆ" ಅಂತ ಹೇಳುವವರನ್ನು ನಾವು ನೋಡಿದ್ದೇವೆ. ಆದರೆ, ಕೆಮ್ಮು, ನೆಗಡಿಗೆ ಔಷಧಿ, ಮಾತ್ರೆಗಳ ಮೊರೆ ಹೋಗದೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಮನೆಯಲ್ಲಿ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳೊಂದಿಗೆ ಬೆಲ್ಲವನ್ನು ಸೇರಿಸಿ ದಿನಕ್ಕೆರಡು ಬಾರಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿ, ಕೆಮ್ಮಿನ ಸಮಸ್ಯೆ ಎರಡೇ ದಿನದಲ್ಲಿ ನಿವಾರಣೆಯಾಗುತ್ತದೆ.
ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು
ಕರಿಮೆಣಸು 4 ಕಾಳು, ಒಣ ಶುಂಠಿ ಅಥವಾ ಹಸಿ ಶುಂಠಿ, ಧನಿಯಾ, ಬೆಲ್ಲ ಸ್ವಲ್ಪ
ತಯಾರಿಸುವ ವಿಧಾನ: ಕರಿಮೆಣಸು, ಶುಂಠಿ, ಧನಿಯಾ ಕಾಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಹಾಕಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಕುಡಿದರೆ ಎರಡೇ ದಿನದಲ್ಲಿ ಕೆಮ್ಮು ಕಡಿಮೆಯಾಗುತ್ತದೆ.
ನೆಗಡಿ, ಕೆಮ್ಮು ಇಲ್ಲದ ಸಂದರ್ಭದಲ್ಲಿಯೂ ಕನಿಷ್ಠ ವಾರಕ್ಕೆರಡು ಬಾರಿ ಈ ಕಷಾಯ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಸಹ ಹೆಚ್ಚುತ್ತದೆ.