Drinking Water Before Sleep: ರಾತ್ರಿ ಮಲಗುವ ಮೊದಲು ನೀರು ಕುಡಿಯುವ ಅಭ್ಯಾಸ ನಿಮಗೂ ಇದೆಯೇ? ಇದು ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ? ವಾಸ್ತವವಾಗಿ, ಆರೋಗ್ಯವಾಗಿರಲು ನಿತ್ಯ ಪ್ರತಿಯೊಬ್ಬರೂ ಕೂಡ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಲಗುವ ಮೊದಲು ನೀರು ಕುಡಿಯಬಾರದು. ಒಂದೊಮ್ಮೆ ನಿಮಗೆ ನೀರು ಕುಡಿಯಲೇ ಬೇಕು ಎಂದೆನಿಸಿದರೆ ಮಿತವಾಗಿ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ.
ರಾತ್ರಿ ಹೊತ್ತು ಮಲಗುವ ಮೊದಲು ನೀರು ಕುಡಿಯುವುದು ಸರಿಯೋ? ತಪ್ಪೋ?
* ದೇಹ ನಿರ್ವಿಷಗೊಳ್ಳುತ್ತದೆ:
ರಾತ್ರಿ ವೇಳೆ ನೀರು ಕುಡಿಯುವುದರಿಂದ ದೇಹ ನಿರ್ವಿಷಗೊಳ್ಳುತ್ತದೆ. ಆದರೆ, ಇದಕ್ಕಾಗಿ ನೀವು ಯಾವಾಗ ನೀರು ಕುಡಿಯುತ್ತೀರಿ ಎಂಬುದು ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಊಟವಾದ ಅರ್ಧಗಂಟೆ ನಂತರ ಅಥವಾ ಮಲಗುವ ಒಂದೆರಡು ಗಂಟೆ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
* ಜೀರ್ಣಕ್ರಿಯೆ:
ವಾಸ್ತವವಾಗಿ, ಹಗಲಿನಲ್ಲಿ ನೀವು ಸೇವಿಸುವ ಆಹಾರಗಳು ರಾತ್ರಿ ವೇಳೆ ಸರಿಯಾಗಿ ಜೀರ್ಣವಾಗುತ್ತವೆ. ರಾತ್ರಿ ಮಲಗುವ ಒಂದೆರಡು ಗಂಟೆ ಮೊದಲು ನೀರು ಕುಡಿಯುವುದರಿಂದ ದೇಹದಲ್ಲಿರುವ ಆಹಾರದ ಎಲ್ಲಾ ಪೋಷಕಾಂಶಗಳು ಸರಿಯಾಗಿ ಹೀರಿಕೊಂಡು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇದು ದೇಹದ ಚಯಾಪಚಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ನೀರು ಕುಡಿಯುವಾಗಿನ ಈ ತಪ್ಪು ನಿಮ್ಮ ಆಯಸ್ಸನ್ನು 15 ವರ್ಷ ಕಡಿಮೆ ಮಾಡುತ್ತೆ
* ರಾತ್ರಿ ಮಲಗುವಾಗ ಏಕೆ ನೀರು ಕುಡಿಯಬಾರದು?
ಕೆಲವರಿಗೆ ಮಲಗುವ ಮೊದಲು ನೀರು ಕುಡಿಯುವ ಅಭ್ಯಾಸ ಇರುತ್ತದೆ. ಆದರೆ, ಈ ರೀ ಮಾಡುವುದರಿಂದ ಇದು ಆರೋಗ್ಯಕ್ಕೆ ಪ್ರಯೋಜನವಾಗುವ ಬದಲಿಗೆ ನಿಮ್ಮ ನಿದ್ರೆಗೆ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ರಾತ್ರಿಯಲ್ಲಿ ಪದೇ ಪದೇ ಮೂತ್ರಕ್ಕೆ ಹೋಗುವುದು, ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ.
* ಯಾವ ರೀತಿಯ ನೀರು ಕುಡಿಯಬೇಕು?
ಇನ್ನೂ ರಾತ್ರಿ ವೇಳೆ ಸಾಮಾನ್ಯ ನೀರು, ಇಲ್ಲವೇ, ಕೊಲ್ಡ್ ವಾಟರ್ ಕುಡಿಯುವುದಕ್ಕಿಂತ ಬೆಚ್ಚಗಿನ ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದು ದೇಹವನ್ನು ಸ್ವಾಭಾವಿಕವಾಗಿ ಸ್ವಚ್ಛಗೊಳಿಸಲು ಸಹಾಯಕವಾಗಿದೆ. ಮಾತ್ರವಲ್ಲ, ಇದು ಅಸಿಡಿಟಿಯಂತಹ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ.
ಇದನ್ನೂ ಓದಿ- ಆರೋಗ್ಯದ ಹಲವಾರು ಸಮಸ್ಯೆಗಳಿಗೆ ಹಸುವಿನ ಹಾಲು ಪರಿಹಾರವಾಗಿದೆ, ಅದರ ಪ್ರಯೋಜನಗಳನ್ನು ತಿಳಿಯಿರಿ!
* ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿಯದಿದ್ದರೆ ಏನು ಪ್ರಯೋಜನ:
ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಮಲಗುವ ಮೊದಲು ಹೆಚ್ಚು ನೀರು ಕುಡಿಯದಿದ್ದರೆ ಮೈಗ್ರೇನ್‌ನಿಂದ ಬಳಲುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಮಾತ್ರವಲ್ಲ, ಹೃದ್ರೋಗಿಗಳು, ಮಧುಮೇಹಿಗಳು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಸುತ್ತಿರುವವರಿಗೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.