Garlic side effects: ಈ ಆರೋಗ್ಯ ಸಮಸ್ಯೆ ಹೊಂದಿರುವವರು ಎಂದಿಗೂ ಬೆಳ್ಳುಳ್ಳಿ ತಿನ್ನಬೇಡಿ..!

Side effects of Garlic : ಬೆಳ್ಳುಳ್ಳಿಯಲ್ಲಿರುವ ಅಧಿಕ ಪೋಷಕಾಂಶಗಳು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ಒಂದು ಆಯುರ್ವೇದ ಔಷಧವಾಗಿದೆ. ಆದ್ರೆ, ಅತಿಯಾಗಿ ಬೆಳ್ಳುಳ್ಳಿಯನ್ನು ಸೇವಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ತಿನ್ನುವುದು ಹಾನಿಕಾರಕವೆಂದು ಹೇಳಲಾಗುತ್ತದೆ.

Written by - Krishna N K | Last Updated : Mar 23, 2023, 04:00 PM IST
  • ಬೆಳ್ಳುಳ್ಳಿ ಅಡುಗೆಮನೆಯ ಪ್ರಮುಖ ಭಾಗ.
  • ಇದು ಇಲ್ಲದೆ ಅನೇಕ ಆಹಾರಗಳ ರುಚಿ ಅಪೂರ್ಣ.
  • ಅತಿಯಾಗಿ ಬೆಳ್ಳುಳ್ಳಿ ತಿನ್ನುವುದು ಸಹ ಆರೋಗ್ಯಕ್ಕೆ ಹಾನಿ.
Garlic side effects: ಈ ಆರೋಗ್ಯ ಸಮಸ್ಯೆ ಹೊಂದಿರುವವರು ಎಂದಿಗೂ ಬೆಳ್ಳುಳ್ಳಿ ತಿನ್ನಬೇಡಿ..! title=

Garlic side effects : ಬೆಳ್ಳುಳ್ಳಿ ಅಡುಗೆಮನೆಯ ಪ್ರಮುಖ ಭಾಗವಾಗಿದೆ. ಇದು ಇಲ್ಲದೆ ಅನೇಕ ಆಹಾರಗಳ ರುಚಿ ಅಪೂರ್ಣ. ಬೆಳ್ಳುಳ್ಳಿಯಲ್ಲಿರುವ ಅಧಿಕ ಪೋಷಕಾಂಶಗಳು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದು ಒಂದು ಆಯುರ್ವೇದ ಔಷಧವಾಗಿದೆ, ಇದರಲ್ಲಿ ಕಂಡುಬರುವ ಶಕ್ತಿಯುತವಾದ ರೋಗ ನಿರೋಧಕಗಳು ಅನೇಕ ಆರೋಗ್ಯ ಸಮಸ್ಯಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ವಿಶೇಷವಾಗಿ ಶೀತ-ಕೆಮ್ಮಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿ ದೈಹಿಕ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇದನ್ನು ಅತಿಯಾಗಿ ಸೇವಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ತಿನ್ನುವುದು ಹಾನಿಕಾರಕವೆಂದು ಹೇಳಲಾಗುತ್ತದೆ. ಈ ಕೆಳಗೆ ಹೇಳಲಾಗಿರುವ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಬೇಕು.

ಇದನ್ನೂ ಓದಿ: ಬೊಜ್ಜು ಕರಗಿಸಲು ಕಲ್ಲಂಗಡಿ ಹಣ್ಣನ್ನು ಹೀಗೆ ತಿನ್ನಿ! ಕೆಲವೇ ದಿನಗಳಲ್ಲಿ ಸಿಗುವುದು ರಿಸಲ್ಟ್

  • ಮಧುಮೇಹ ರೋಗಿಗಳು  : ಮಧುಮೇಹ ಹೊಂದಿರುವ ಜನರು ಬೆಳ್ಳುಳ್ಳಿಯನ್ನು ಮಿತಿಯಲ್ಲಿ ಸೇವಿಸಬೇಕು, ಏಕೆಂದರೆ ನೀವು ನಿರ್ಲಕ್ಷ್ಯವಹಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಕಡಿಮೆಯಾಗಬಹುದು, ಇದರಿಂದಾಗಿ ದೌರ್ಬಲ್ಯ ಅಥವಾ ತಲೆತಿರುಗುವಿಕೆ ಸಮಸ್ಯೆ ಉಂಟಾಗುತ್ತದೆ.
  • ಯಕೃತ್ತು, ಕರುಳು ಮತ್ತು ಹೊಟ್ಟೆಯ ಅಸ್ವಸ್ಥತೆಗಳು  : ಯಕೃತ್ತು, ಕರುಳು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಜನರು ಬೆಳ್ಳುಳ್ಳಿಯನ್ನು ತಿನ್ನುವುದನ್ನು ತ್ಯಜಿಸಬೇಕು, ಏಕೆಂದರೆ ಕರುಳಿನಲ್ಲಿ ಗಾಯಗಳು ಮತ್ತು ಗುಳ್ಳೆಗಳು ಉಂಟಾದಾಗ ಬೆಳ್ಳುಳ್ಳಿ ನೋವನ್ನು ಹೆಚ್ಚಿಸುತ್ತದೆ. ಯಕೃತ್ತಿನ ರೋಗಿಗಳು ಬೆಳ್ಳುಳ್ಳಿಯೊಂದಿಗೆ ಪ್ರತಿಕ್ರಿಯಿಸುವ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.
  • ಇತ್ತೀಚೆಗೆ ಆಪರೇಷನ್ ಮಾಡಿಸಿಕೊಂಡವರು : ಇತ್ತೀಚೆಗೆ ಆಪರೇಷನ್ ಮಾಡಿಸಿಕೊಂಡವರಿಗೆ ಬೆಳ್ಳುಳ್ಳಿ ಅಪಾಯಕಾರಿ ಎಂದು ಸಾಬೀತಾಗಿದೆ. ವಾಸ್ತವವಾಗಿ ಈ ಆಹಾರವು ನೈಸರ್ಗಿಕ ರಕ್ತವನ್ನು ತೆಳುಗೊಳಿಸಲು ಕಾರ್ಯನಿರ್ವಹಿಸುತ್ತದೆ. ರಕ್ತವು ತೆಳುವಾದ್ರೆ ಗಾಯ ಗುಣವಾಗಲು ಸಮಯ ತೆಗೆದುಕೊಳ್ಳಬಹುದು.

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News