ನೀವು ಕೂಡಾ ಸಿಹಿ ತಿಂಡಿ ಪ್ರಿಯರಾಗಿದ್ದರೆ, ಈ ಏಳು ಅಪಾಯಗಳ ಬಗ್ಗೆಯೂ ತಿಳಿದಿರಲಿ

ನೀವು ಕೂಡಾ ಸಿಹಿ ತಿನಿಸು ಪ್ರಿಯರಾಗಿದ್ದರೆ, ಅದರಿಂದಾಗುವ ಏಳು ಅಪಾಯಗಳ ಬಗ್ಗೆಯೂ ತಿಳಿದಿರಲಿ.

Written by - Ranjitha R K | Last Updated : Feb 2, 2022, 02:23 PM IST
  • ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ
  • ಈ ಅಭ್ಯಾಸವನ್ನು ಇಂದಿನಿಂದಲೇ ಬಿಟ್ಟು ಬಿಡಿ
  • ಸಿಹಿ ಖಾದ್ಯ ಆರೋಗ್ಯಕ್ಕೆ ಅಪಾಯ
ನೀವು ಕೂಡಾ ಸಿಹಿ ತಿಂಡಿ ಪ್ರಿಯರಾಗಿದ್ದರೆ, ಈ ಏಳು ಅಪಾಯಗಳ ಬಗ್ಗೆಯೂ ತಿಳಿದಿರಲಿ title=
ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ (file photo)

ನವದೆಹಲಿ : ನೀವು ಸಿಹಿ ತಿನಿಸುಗಳನ್ನು ಇಷ್ಟಪಡುವವರಾಗಿದ್ದರೆ, ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಅತಿಯಾಗಿ ಸಿಹಿ ತಿನ್ನುವುದು ಆರೋಗ್ಯಕ್ಕೆ ದೊಡ್ಡ ಪ್ರಮಾಣದ ಹಾನಿಯನ್ನುಂಟು ಮಾಡುತ್ತದೆ. ನೀವು ಕೂಡಾ ಸಿಹಿ ತಿನಿಸು ಪ್ರಿಯರಾಗಿದ್ದರೆ, ಅದರಿಂದಾಗುವ ಏಳು ಅಪಾಯಗಳ ಬಗ್ಗೆಯೂ ತಿಳಿದಿರಲಿ (Side effects of sweets). 

1. ಬೊಜ್ಜು :
ಇಂದು ಸಾಮಾನ್ಯವಾಗಿ ಬಹುತೇಕ ಮಂದಿ, ಸ್ಥೂಲಕಾಯ ಸಮಸ್ಯೆಯಿಂದ (Obesity) ಬಳಲುತ್ತಿದ್ದಾರೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಸ್ಥೂಲಕಾಯತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹೆಚ್ಚು ಸಕ್ಕರೆಯನ್ನು ಸೇವಿಸಿದರೆ  ಜೀವಕೋಶಗಳಲ್ಲಿ ಕೊಬ್ಬನ್ನು ಸಂಗ್ರಹಿಸುವ ಲಿಪೊಪ್ರೋಟೀನ್ ಲಿಪೇಸ್  ಉತ್ಪಾದನೆಗೆ ಕಾರಣವಾಗುತ್ತದೆ.  

ಇದನ್ನೂ ಓದಿ : Immunity Strong: ಕರೋನದ ಕಾಲದಲ್ಲಿ ನಿತ್ಯ ಕಷಾಯ ಕುಡಿಯುತ್ತಿದ್ದೀರಾ? ಹಾಗಿದ್ದರೆ ಹುಷಾರ್!

2. ಹೃದಯಾಘಾತದ ಅಪಾಯ :
ಹೆಚ್ಚು ಸಕ್ಕರೆಯನ್ನು ತಿನ್ನುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದರೆ, ಅದು ಹೃದಯಾಘಾತ ಅಥವಾ heart stroke ಗೆ ಕಾರಣವಾಗಬಹುದು. ಸಿಹಿ ತಿನಿಸುಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.ಇದು ಹೃದ್ರೋಗದ (Heart disease) ಅಪಾಯಕ್ಕೆ ಕಾರಣವಾಗುತ್ತದೆ. 

3. ಮಧುಮೇಹದ ಅಪಾಯ :
ಹೆಚ್ಚು ಸಕ್ಕರೆ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು (Blood sugar) ಹೆಚ್ಚಿಸುತ್ತದೆ. ಇದು ಮೆದುಳಿಗೆ ಹಾನಿಕಾರಕವಾಗಿದೆ. ಅತಿ ಹೆಚ್ಚು ಸಕ್ಕರೆ ಪದಾರ್ಥಗಳನ್ನು ತಿಂದರೆ, ಸರಿಯಾದ ಪ್ರಮಾಣದ ಗ್ಲೂಕೋಸ್ ಮೆದುಳಿಗೆ ತಲುಪುವುದಿಲ್ಲ. ಹೀಗಾದಾಗ ಮೆದುಳು ಸರಿಯಾಗಿ ಕೆಲಸ ಮಾಡುವುದು  ಸಾಧ್ಯವಾಗುವುದಿಲ್ಲ. ಇದು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು.

ಇದನ್ನೂ ಓದಿ : ನಿತ್ಯ ದಾಳಿಂಬೆ ಸೇವಿಸಿದರೆ ಕೊಲೆಸ್ಟ್ರಾಲ್ , ಡಯಾಬಿಟೀಸ್ ನಂಥಹ ರೋಗಗಳಿಂದ ಪಡೆಯಬಹುದು ಮುಕ್ತಿ

4. ಆಲಸ್ಯ ಹೆಚ್ಚುತ್ತದೆ : 
ಸಿಹಿತಿಂಡಿಗಳನ್ನು ತಿನ್ನುವುದರಿಂದ, ಕ್ಯಾಲೊರಿಗಳನ್ನು ಹೊರತುಪಡಿಸಿ ನಮ್ಮ ದೇಹಕ್ಕೆ ಬೇರೇನೂ ಸಿಗುವುದಿಲ್ಲ. ಸಿಹಿ ತಿಂಡಿಗಳನ್ನು ತಿಂದರೆ ಸ್ವಲ್ಪ ಹೊತ್ತಿನವರೆಗೆ ದೇಹ ಉಲ್ಲಾಸದಾಯಕವಾಗಿ ಇರಬಹುದು. ಆದರೆ, ನಂತರ ದೇಹಾಲಸ್ಯ ಶುರುವಾಗುತ್ತದೆ. ಇದು  ದೀರ್ಘಾವಧಿಯಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

5. ಅವಧಿಗೂ ಮುನ್ನವೇ ವಯಸ್ಸಾದಂತೆ ಕಾಣುವುದು : 
ಹೆಚ್ಚು ಸಕ್ಕರೆ ತಿನ್ನುವುದರಿಂದ, ಅವಧಿಗೆ ಮುನ್ನವೇ ವಯಸ್ಸಾದಂತೆ ಕಾಣಿಸುತ್ತದೆ. ಹೆಚ್ಚು ಸಕ್ಕರೆ ತಿನ್ನುವುದು ದೇಹದಲ್ಲಿ ಇನ್ಫ್ಲಮೆಟರಿ  ಪರಿಣಾಮವನ್ನು ಉಂಟುಮಾಡುತ್ತದೆ. ಇದರಿಂದಾಗಿ ಚರ್ಮದ ದದ್ದು, ಸುಕ್ಕುಗಳ ಸಮಸ್ಯೆಗಳು (Skin problem) ಕಾಣಿಸಿಕೊಳ್ಳುತ್ತವೆ. 

6. ರೋಗ ನಿರೋಧಕ ಶಕ್ತಿ ಕುಂದುತ್ತದೆ : 
ಸಿಹಿತಿನಿಸುಗಳು ರೋಗನಿರೋಧಕ ಶಕ್ತಿಗೆ (immunity) ಉತ್ತಮವಾಗಿರುವುದಿಲ್ಲ. ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ, ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಶೀಘ್ರದಲ್ಲೇ ಅನಾರೋಗ್ಯಕ್ಕೆ ಈಡಾಗಬೇಕಾಗುತ್ತದೆ. 

ಇದನ್ನೂ ಓದಿ : ನೆನಪಿರಲಿ, ಕೇವಲ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ 

7. ಫ್ಯಾಟಿ ಲಿವರ್ ಸಮಸ್ಯೆಯ ಅಪಾಯ : 
ಹೆಚ್ಚು ಸಕ್ಕರೆ ತಿನ್ನುವುದರಿಂದ, ನಮ್ಮ ಯಕೃತ್ತು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ.  ಇದರಿಂದ ದೇಹದಲ್ಲಿ ಲಿಪಿಡ್ ಗಳ  ರಚನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಬರುವ ಅಪಾಯ ಹೆಚ್ಚಾಗಿರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News