ಬೆಂಗಳೂರು: ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸಭರಿತವಾದ ಮಾವಿನ ಹಣ್ಣುಗಳು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ರುಚಿಕರವೂ ಹೌದು... ಆದರೆ, ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಮಾವಿನ ಎಲೆಗಳು ಕೂಡ ತುಂಬಾ ಪ್ರಯೋಜನಕಾರಿ ಆಗಿವೆ.
ಮಾವಿನ ಎಲೆಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಹಲವಾರು ಜೀವಸತ್ವಗಳು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಫ್ಲೇವನಾಯ್ಡ್ಗಳು ಮತ್ತು ಫೀನಾಲ್ಗಳಂತಹ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತವೆ. ಆರೋಗ್ಯ ತಜ್ಞರ ಪ್ರಕಾರ, ಮಾವಿನ ಎಲೆಗಳಲ್ಲಿ ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಿಸಬಲ್ಲ ಗುಣಗಳು ಅಡಕವಾಗಿವೆ. ಹಾಗಿದ್ದರೆ, ಆರೋಗ್ಯಕ್ಕೆ ಮಾವಿನ ಎಲೆಗಳ ಪ್ರಯೋಜನಗಳೇನು? ಉತ್ತಮ ಆರೋಗ್ಯಕ್ಕಾಗಿ ಮಾವಿನ ಎಲೆಗಳನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಆರೋಗ್ಯದ ಗಣಿ ಮಾವಿನ ಎಲೆಯಲ್ಲಡಗಿದೆ ಹಲವು ಆರೋಗ್ಯ ಪ್ರಯೋಜನಗಳು :
* ಮಧುಮೇಹ:
ಮಧುಮೇಹಿ ರೋಗಿಗಳಿಗೆ ಮಾವಿನ ಎಲೆಗಳು ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಮಾವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸಬಹುದು.
ಇದನ್ನೂ ಓದಿ- ಮಿತಿಗಿಂತ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಅಪಾಯಕಾರಿ
* ಬಿಪಿ:
ಮಾವಿನ ಎಲೆಗಳು ಶುಗರ್ ಮಾತ್ರವಲ್ಲ ಬಿಪಿಯನ್ನು ಕೂಡ ನಿಯಂತ್ರಿಸಬಲ್ಲ ಶಕ್ತಿಯನ್ನು ಹೊಂದಿದೆ. ಮಾವಿನ ಎಲೆ ನೀರನ್ನು ಕುದಿಸಿ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ ಆಗಿದೆ.
* ಹೊಟ್ಟೆ ಹುಣ್ಣು:
ಹೊಟ್ಟೆ ಹುಣ್ಣಿ ಚಿಕಿತ್ಸೆಯಲ್ಲಿಯೂ ಮಾವಿನ ಎಲೆಗಳು ಬಹಳ ಪರಿಣಾಮಕಾರಿ ಆಗಿವೆ.
* ಕಾನ್ಸರ್:
ಮಾವಿನ ಎಲೆಗಳಲ್ಲಿ ಕಾನ್ಸರ್ ವಿರೋಧಿ ಗುಣಗಳು ಸಮೃದ್ಧವಾಗಿದ್ದು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಮೂಲ ಕಾರಣವಾದ ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ.
ಇದನ್ನೂ ಓದಿ- ಈ 2 ಹಣ್ಣುಗಳಿಂದ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು
* ಅಸ್ತಮಾ:
ಅಸ್ತಮಾ ಚಿಕಿತ್ಸೆಯಲ್ಲಿ ಸಹ ಮಾವಿನ ಎಲೆಗಳು ರಾಮಬಾಣವೆಂದು ಸಾಬೀತುಪಡಿಸಬಹುದು. ಇದಲ್ಲದೆ, ಕೆಮ್ಮು, ಶೀತ, ನೆಗಡಿಯಂತಹ ಸಮಸ್ಯೆಗೂ ಕೂಡ ಇದು ತುಂಬಾ ಪ್ರಯೋಜನಕಾರಿ ಆಗಿದೆ.
ಉತ್ತಮ ಆರೋಗ್ಯಕ್ಕಾಗಿ ಮಾವಿನ ಎಲೆಗಳನ್ನು ಹೇಗೆ ಬಳಸಬೇಕು?
ಮಾವಿನ ಎಲೆಗಳ ಪಾನೀಯ ತಯಾರಿಸಿ ಕುಡಿಯುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಇದಕ್ಕಾಗಿ ಒಂದೆರಡು ಲೋಟ ನೀರನ್ನು ತೆಗೆದುಕೊಂಡು, ಅದರಲ್ಲಿ ಎರಡರಿಂದ ನಾಲ್ಕು ಮಾವಿನ ಎಲೆಗಳನ್ನು ಹಾಗಿ ನೀರು ಅರ್ಧ ಆಗುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಶೋಧಿಸಿ, ಅದು ತಣ್ಣಗಾದ ಬಳಿಕ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.