ಹೈ ಕೊಲೆಸ್ಟ್ರಾಲ್ ನ ಲಕ್ಷಣಗಳಿವು! ಹೃದಯಾಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಅಧಿಕ ಕೊಲೆಸ್ಟ್ರಾಲ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಇದು ಕೆಲವೊಂದು  ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

Written by - Ranjitha R K | Last Updated : Mar 10, 2023, 09:45 AM IST
  • ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಕೊಲೆಸ್ಟ್ರಾಲ್ ಬಹಳ ಮುಖ್ಯ.
  • ರಕ್ತದಲ್ಲಿನ ಹೆಚ್ಚಿನ ಮಟ್ಟದ ಎಲ್‌ಡಿಎಲ್ ಹಾನಿಕಾರಕ
  • ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್
 ಹೈ ಕೊಲೆಸ್ಟ್ರಾಲ್ ನ ಲಕ್ಷಣಗಳಿವು! ಹೃದಯಾಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ   title=

ಬೆಂಗಳೂರು : ನಮ್ಮ ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ಕೊಲೆಸ್ಟ್ರಾಲ್ ಬಹಳ ಮುಖ್ಯ. ಆದರೆ, ರಕ್ತದಲ್ಲಿನ ಹೆಚ್ಚಿನ ಮಟ್ಟದ ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಹಾನಿಕಾರಕವಾಗಿದೆ. ಅಧಿಕ ಕೊಲೆಸ್ಟ್ರಾಲ್ ದೇಹದ ಇತರ ಭಾಗಗಳಲ್ಲಿ ಬಹಳಷ್ಟು ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ರಕ್ತದ ಹರಿವನ್ನು ಮಿತಿಗೊಳಿಸುತ್ತದೆ. ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಇದು ಕೆಲವೊಂದು  ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ ಕಂಡು ಬರುವ  ಕೆಲವು ಬದಲಾವಣೆಗಳು ನಿಮ್ಮ ಅಪಧಮನಿಗಳ ಗೋಡೆಗಳಲ್ಲಿ ಕೊಬ್ಬಿನ ಪದಾರ್ಥಗಳು ಸಂಗ್ರಹವಾಗುತ್ತಿವೆ ಎಂದು ಸೂಚಿಸುತ್ತದೆ. ಅದನ್ನು ಸಮಯಕ್ಕೆ ಸರಿಪಡಿಸಿದರೆ, ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.

ಪೆರಿಫೆರಲ್ ಆರ್ಟರಿ ಡಿಸೀಸ್ ಬಗ್ಗೆ ಎಚ್ಚರದಿಂದಿರಿ :
ಪೆರಿಫೆರಲ್ ಆರ್ಟರಿ ಡಿಸೀಸ್ ಎಂಬುದು ಪ್ಲೇಕ್ ನಿರ್ಮಾಣದಿಂದಾಗಿ ರಕ್ತನಾಳಗಳ ಕಿರಿದಾಗುವಿಕೆ ಅಥವಾ ತಡೆಗಟ್ಟುವಿಕೆಗೆ ಸಂಬಂಧಿಸಿದ ಒಂದು ಸ್ಥಿತಿಯಾಗಿದೆ. ಇದು ಕಾಲುಗಳು ಮತ್ತು ಪಾದಗಳು ಸೇರಿದಂತೆ ದೇಹದ ಕೆಳಗಿನ ಭಾಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಈ ರೋಗವು ಕಾಲುಗಳು ಮತ್ತು ಪಾದಗಳ ಮೇಲೆ ಪರಿಣಾಮ ಬೀರಬಹುದು. ಇದು  ಕ್ಲಾಡಿಕೇಶನ್ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ದೇಹದ ಕೆಳಭಾಗದಲ್ಲಿರುವ ರಕ್ತನಾಳಗಳು ಕಿರಿದಾದಾಗ ಅಥವಾ ರಕ್ತ ಹರಿವು ಸರಿಯಾಗಿ ಆಗದೇ ಹೋದಾಗ ಈ ಸ್ಥಿತಿ ನಿರ್ಮಾಣವಾಗುತ್ತದೆ. 

ಇದನ್ನೂ ಓದಿ : ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು!

ಪಾದಗಳು ತಣ್ಣಗಾಗುವುದು ಮತ್ತು ಚರ್ಮದ ಬದಲಾವಣೆಗಳು :
ಅಧಿಕ ಕೊಲೆಸ್ಟ್ರಾಲ್ ನ ಮತ್ತೊಂದು  ಲಕ್ಷಣವೆಂದರೆ ಪಾದಗಳು ತಣ್ಣಗಾಗುವುದು. ಬೇಸಿಗೆಯ ದಿನಗಳಲ್ಲಿಯೂ ಪಾದಗಳು ತಣ್ಣಗಾಗುತ್ತಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಇದು ಪೆರಿಫೆರಲ್ ಆರ್ಟರಿ ಡಿಸೀಸ್ ನ  ಲಕ್ಷಣವಾಗಿರಬಹುದು. ಇದಲ್ಲದೆ, ಪಾದಗಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಚರ್ಮದ ಬಣ್ಣದಲ್ಲಿ ಸಹ ಬದಲಾವಣೆ ಕಂಡು ಬರಬಹುದು. ಇದು ಪಾದಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ.  

ಕಾಲಿನಲ್ಲಿ ಸೆಳೆತ : 
ರಾತ್ರಿ ವೇಳೆ ಕಾಲಿನಲ್ಲಿ ಸೆಳೆತ ಕಂಡು ಬರುತ್ತಿದ್ದರೆ  ಕೆಲವರು ವೀಕ್ ನೆಸ್ ಎಂದು ಸುಮ್ಮನಾಗುತ್ತಾರೆ. ವೀಕ್ ನೆಸ್ ನಿಂದ ಮಾತ್ರ ಹೀಗೆ ಕಾಲಿನ ಸೆಳೆತ ಬರುವುದಿಲ್ಲ. ಕಾಲಿಗೆ ರಕ್ತ ಸಂಚಾರ ಸರಿಯಾಗಿ ಆಗದೇ   ಹೋದಾಗ ಹೀಗಾಗುತ್ತದೆ. ಆದ ಕಾರಣ ಕಾಲಿನಲ್ಲಿ ಕಾಣಿಸಿಕೊಳ್ಳುವ ಸೆಳೆತದ ಬಗ್ಗೆ ಅಸಡ್ಡೆ ಬೇಡ. ಇನ್ನು ಕಾಲಿನ ಮೇಲೆ ಹುಣ್ಣು ಆಗಿ ಅದು ವಾಸಿಯಾಗದೇ ಹೋದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. 

ಇದನ್ನೂ ಓದಿ : Cholesterol ನ ಈ ಲಕ್ಷಣಗಳನ್ನು ಮರೆತೂ ನಿರ್ಲಕ್ಷಿಸಬೇಡಿ, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News