Dance Cause Heart Attack : ಡ್ಯಾನ್ಸ್ ಮಾಡುವುದು ಒಂದು ಬಗೆಯ ವ್ಯಾಯಾಮ ಕೂಡಾ ಹೌದು. ಇದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ನೃತ್ಯದಿಂದ ತೂಕವನ್ನು ಕಳೆದುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಭಾರೀ ವೈರಲ್ ಆಗಿತ್ತು. ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಿದ್ದಂತೆಯೇ ನೆಲದ ಮೇಲೆ ಕುಸಿದು ಬಿದ್ದು ಸಾವನ್ನಪ್ಪುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನೃತ್ಯ ಮಾಡುತ್ತಿದ್ದ ವೇಳೆ ಸಂಭವಿಸಿದ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎನ್ನುವುದು ನಂತರ ತಿಳಿದು ಬಂದ ಮಾಹಿತಿ. ಜನರು ಉತ್ತಮ ವ್ಯಾಯಾಮ, ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸುವ ನೃತ್ಯ ಕೂಡಾ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು ಎಂದರೆ ನಂಬುವುದು ಸ್ವಲ್ಪ ಕಷ್ಟ. ಆದರೆ ಇದು ಅಕ್ಷರಶಃ ಸತ್ಯ.
ಏನು ಹೇಳುತ್ತಾರೆ ತಜ್ಞರು ? :
ಡ್ಯಾನ್ಸ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಪ್ರತಿದಿನ ಡ್ಯಾನ್ಸ್ ಮಾಡುತ್ತಿದ್ದರೆ, ಇದು ನಿಜಕ್ಕೂ ಒಳ್ಳೆಯ ವ್ಯಾಯಾಮ. ಇಲ್ಲವಾದಲ್ಲಿ ಒಂದೇ ಸಮನೆ ಡಾನ್ಸ್ ಮಾಡಲು ಹೋಗಬಾರದು. ಒಂದು ವೇಳೆ ಹೀಗೆ ಮಾಡಿದರೆ ಸಮಸ್ಯೆಗಳು ಉದ್ಭವಿಸಬಹುದು. ಏಕೆಂದರೆ ಫಾಸ್ಟ್ ಡಾನ್ಸ್ ಮಾಡುವಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದಾಗಿ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಸ್ಥೂಲಕಾಯತೆ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿ ನೃತ್ಯದಿಂದ ದೂರವಿರಬೇಕು. ಇಲ್ಲವಾದಲ್ಲಿ ಹೃದಯ ಸ್ತಂಭನದ ಅಪಾಯ ಎದುರಾಗಿ ಪ್ರಾಣವೂ ಹೋಗಬಹುದು.
ಇದನ್ನೂ ಓದಿ : ಅಧಿಕ ಕೊಲೆಸ್ಟ್ರಾಲ್‌ನ ಈ ಎರಡು ಗಂಭೀರ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ!
ಇವರಿಗೂ ನೃತ್ಯ ಅಪಾಯಕಾರಿ :
ಹೃದ್ರೋಗದಿಂದ ಬಳಲುತ್ತಿರುವವರು ನೃತ್ಯದಿಂದ ದೂರವಿರಬೇಕು. ಅಪಧಮನಿಯ ಬ್ಲಾಕ್ ಸಮಸ್ಯೆ ಇರುವ ರೋಗಿಗಳು ಭಾರೀ ವ್ಯಾಯಾಮವನ್ನು ಮಾಡಬಾರದು ಎಂದು ವೈದ್ಯರು ಸಲಾಹೆ ನೀಡುತ್ತಾರೆ. ಹೆಚ್ಚು ಧೂಮಪಾನ ಮಾಡುವವರಿಗೂ ಸಹ ಭಾರೀ ವ್ಯಾಯಾಮ, ನೃತ್ಯ ಅಪಾಯಕಾರಿಯಾಗಿ ಪರಿಣಮಿಸಬಹುದು. ಈ ಹಿಂದೆ ಹೃದಯಾಘಾತವಾದವರು ಕೂಡಾ ಕುಣಿದು ಕುಪ್ಪಳಿಸುವ ವೇಳೆ ವಿಶೇಷ ಕಾಳಜಿ ವಹಿಸಬೇಕು.
ಇದನ್ನೂ ಓದಿ : ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ ಪತ್ತೆ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.