ಎಚ್ಚರ ! ಗರ್ಭಾವಸ್ಥೆಯಲ್ಲಿ ಈ ಆಹಾರಗಳು ವಿಷದಂತೆ ಕೆಲಸ ಮಾಡುತ್ತದೆ

Foods that pregnant women should avoid :ಗರ್ಭದಲ್ಲಿ ಮಗುವಿನ ಬೆಳವಣಿಗೆಯಾಗುತ್ತಿದ್ದಂತೆಯೇ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಹಾಗಂತ ಗರ್ಭಿಣಿಯರು ತಮಗೆ ಏನು ಬೇಕೋ ಅದೆಲ್ಲವನ್ನು ತಿನ್ನಬಹುದು. ತಮ್ಮ ಕಣ್ಣಿಗೆ ಆರೋಗ್ಯಕರ ಎನಿಸುವಂಥಹ ಎಲ್ಲಾ ಆಹಾರಗಳನ್ನು ಸೇವಿಸಬಹುದು ಎಂದಲ್ಲ.  

Written by - Ranjitha R K | Last Updated : Nov 10, 2023, 11:10 AM IST
  • ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
  • ಗರ್ಭಾವಸ್ಥೆಯಲ್ಲಿ ಹಸಿ ಹಾಲು ಒಳ್ಳೆಯದಲ್ಲ
  • ಪಾಶ್ಚರೀಕರಿಸದ ಡೈರಿ ಉತ್ಪನ್ನಗಳು
ಎಚ್ಚರ ! ಗರ್ಭಾವಸ್ಥೆಯಲ್ಲಿ ಈ ಆಹಾರಗಳು ವಿಷದಂತೆ ಕೆಲಸ ಮಾಡುತ್ತದೆ  title=

Foods that pregnant women should avoid : ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಗರ್ಭಾವಸ್ಥೆಯಲ್ಲಿ ಅದು ಒಂದು ಜೀವದ ಆರೈಕೆಯಲ್ಲ ಎರಡು ಜೀವಗಳ ಆರೈಕೆ. ಗರ್ಭದಲ್ಲಿ ಮಗು ಬೆಳೆಯುತ್ತಿರುವ ಕಾರಣ, ಆರೋಗ್ಯ ಆರೈಕೆಯ ಬಗ್ಗೆ ಮಹಿಳೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಗರ್ಭದಲ್ಲಿ ಮಗುವಿನ ಬೆಳವಣಿಗೆಯಾಗುತ್ತಿದ್ದಂತೆಯೇ ಹೆಚ್ಚಿನ ಪೋಷಣೆಯ ಅಗತ್ಯವಿರುತ್ತದೆ. ಹಾಗಂತ ಗರ್ಭಿಣಿಯರು ತಮಗೆ ಏನು ಬೇಕೋ ಅದೆಲ್ಲವನ್ನು ತಿನ್ನಬಹುದು. ತಮ್ಮ ಕಣ್ಣಿಗೆ ಆರೋಗ್ಯಕರ ಎನಿಸುವಂಥಹ ಎಲ್ಲಾ ಆಹಾರಗಳನ್ನು ಸೇವಿಸಬಹುದು ಎಂದಲ್ಲ. ಯಾಕೆಂದರೆ ಕೆಲವು ಆಹಾರ ಪದಾರ್ಥಗಳು ಗರ್ಭಿಣಿಯರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಕೆಲಸ ಮಾಡುತ್ತದೆ. 

1. ಗರ್ಭಾವಸ್ಥೆಯಲ್ಲಿ ಹಸಿ ಹಾಲು : 
ಗರ್ಭಿಣಿಯರು ಹಾಲು ಸೇವಿಸುವುದು ಬಹಳ ಮುಖ್ಯ. ಇದರಿಂದ ತಾಯಿ ಮತ್ತು ಅವಳ ಹೊಟ್ಟೆಯಲ್ಲಿರುವ ಮಗುವಿಗೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆ. ಆದರೆ  ಸೇವಿಸುವ ಮುನ್ನ ಆ ಹಾಲನ್ನು ಚೆನ್ನಾಗಿ ಕಾಯಿಸಲಾಗಿದೆಯೇ ಎನ್ನುವುದನ್ನು ನೋಡಿಕೊಳ್ಳಬೇಕು. ಹಸಿ ಹಾಲು ಅಥವಾ ಅರ್ಧ ಕಾಯಿಸಿದ ಹಾಲನ್ನು ಗರ್ಭಿಣಿ ಎಂದಿಗೂ ಸೇವಿಸಬಾರದು.

ಇದನ್ನೂ ಓದಿ : ಈ ಆಹಾರಗಳು ಹೃದಯಾಘಾತಕ್ಕೆ ಕಾರಣವಾಗಬಹುದು ಗೊತ್ತೇ?

2. ಪಾಶ್ಚರೀಕರಿಸದ ಡೈರಿ ಉತ್ಪನ್ನಗಳು : 
ಹಾಲಿನಂತೆ, ಇತರ ಡೈರಿ ಉತ್ಪನ್ನಗಳನ್ನು ಸೇವಿಸುವಾಗ, ನೀವು ಸೇವಿಸುವ ಯಾವುದೇ ಆಹಾರವು ಪಾಶ್ಚರೀಕರಿಸಿದೆಯೇ ಎನ್ನುವುದನ್ನು ಗಮನಿಸಿಕೊಳ್ಳಬೇಕು. ಚೀಸ್, ಮಜ್ಜಿಗೆ ಮತ್ತು ಮೊಸರು ಇತ್ಯಾದಿಗಳನ್ನು ಸೇವಿಸುವ ಮೊದಲು, ಗರ್ಭಿಣಿಯರು ಈ ಉತ್ಪನ್ನವನ್ನು ಪಾಶ್ಚರೀಕರಿಸದ ಹಾಲಿನಿಂದ ತಯಾರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

3. ಗರ್ಭಾವಸ್ಥೆಯಲ್ಲಿ ಹಸಿ ಅಥವಾ ಬೇಯಿಸದ ಮಾಂಸ : 
ಗರ್ಭಿಣಿಯರ ಜೀರ್ಣಾಂಗ ಮತ್ತು ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಆದ್ದರಿಂದ, ಬೇಯಿಸದ ಮಾಂಸ ಅಥವಾ ಅರ್ಧ ಬೆಂದ ಮಾಂಸ ಅವರ ಜೀರ್ಣಕ್ರಿಯೆಗೆ ಹಾನಿಯನ್ನುಂಟುಮಾಡುತ್ತದೆ. ಆದರೆ ಸರಿಯಾಗಿ ಬೇಯಿಸದ ಕಾರಣ, ಕೆಲವು ಸೂಕ್ಷ್ಮಜೀವಿಗಳು ಸಹ ಅದರಲ್ಲಿ ಕಂಡುಬರಬಹುದು. ಇದು ಗರ್ಭಿಣಿಯರಲ್ಲಿ ಅನೇಕ ರೀತಿಯ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಸಿಪ್ಪೆ ಸುಲಿದ ನಂತರ ಈ ಹಣ್ಣುಗಳನ್ನು ತಿನ್ನುವ ತಪ್ಪನ್ನು ಮಾಡಬೇಡಿ...!

4. ಗರ್ಭಾವಸ್ಥೆಯಲ್ಲಿ ಬೇರು ತರಕಾರಿಗಳು(Root Vegetables): 
ಕ್ಯಾರೆಟ್, ಮೂಲಂಗಿ, ಗೆದ್ದೇ ಕೋಸು, ಮತ್ತು ಬೀಟ್‌ರೂಟ್‌ಗಳಂತಹ ಬೇರು ತರಕಾರಿಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಆದರೆ ಈ ತರಕಾರಿಗಳು  ಹಾನಿಯುಂಟು ಮಾಡುವ ಅಪಾಯ ಹೆಚ್ಚು. ಏಕೆಂದರೆ ಕೆಲವು ಭಾಗಗಳಲ್ಲಿ ಈ ತರಕಾರಿಗಳನ್ನು ಕೊಳಕು ನೀರಿನಿಂದ ಕೂಡಾ ಬೆಳೆಯುತ್ತಾರೆ.  ಆದರೆ ಈ ತರಕಾರಿಗಳನ್ನು ಉತ್ತಮ ಸ್ಥಳದಿಂದ ಖರೀದಿಸಿ ಮತ್ತು ಅವುಗಳನ್ನು ಸರಿಯಾಗಿ ತೊಳೆದು ಸೇವಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News