ಕೇವಲ 5 ನಿಮಿಷಗಳಲ್ಲಿ ಕೆಮ್ಮು ಮತ್ತು ಕಫ ಕಡಿಮೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ..!

Cough home remedies : ಚಳಿಗಾಲದಲ್ಲಿ ಅಷ್ಟೆ ಅಲ್ಲ, ಬೇಸಿಗೆಯಲ್ಲಿಯೂ ಹಲವರು ಕೆಮ್ಮು ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಸ್ಯೆಯಿಂದಾಗಿ ಆರೋಗ್ಯ ಕ್ಷೀಣಿಸಿ ಯಾವುದೇ ಕೆಲಸ ಮಾಡದಂತೆ ಕಟ್ಟಿಹಾಕುತ್ತದೆ. ಈ ಸಮಸ್ಯೆಯಿಂದ ಹೊರಬರಲು ಸರಳ ಮನೆ ಮದ್ದುಗಳು ಇಲ್ಲಿವೆ..  

Written by - Krishna N K | Last Updated : Mar 28, 2024, 04:30 PM IST
    • ಕೆಮ್ಮು ಮತ್ತು ಕಫದಿಂದಾಗಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
    • ವಿಶೇಷವಾಗಿ ಕಫ ತಲೆನೋವಾಗಿ ಪರಿಣಮಿಸುತ್ತದೆ.
    • ಬನ್ನಿ ಈ ಮನೆ ಮದ್ದುಗಳನ್ನು ಪ್ರಯತ್ನಿಸಿ..
ಕೇವಲ 5 ನಿಮಿಷಗಳಲ್ಲಿ ಕೆಮ್ಮು ಮತ್ತು ಕಫ ಕಡಿಮೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ..! title=

Home remedies for cough and cold : ಕೆಮ್ಮು ಮತ್ತು ಕಫದಿಂದಾಗಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉಸಿರಾಟದ ತೊಂದರೆಗಳು, ವಿಶೇಷವಾಗಿ ಕಫ ತಲೆನೋವಾಗಿ ಪರಿಣಮಿಸುತ್ತದೆ. ಅಲ್ಲದೆ, ಜ್ವರ ಬರುತ್ತದೆ.. ಇದರಿಂದ ನಮಗೆ ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಬನ್ನಿ ಈ ಮನೆ ಮದ್ದುಗಳನ್ನು ಪ್ರಯತ್ನಿಸಿ.. 

ಚಳಿಗಾಲದಲ್ಲಿ ಅಷ್ಟೇ ಅಲ್ಲ, ಬೇಸಿಗೆಯಲ್ಲಿಯೂ ಸಾಕಷ್ಟು ಜನ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ದೇಹದ ನಿರ್ಜಲಿಕರಣದಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಕೆಮ್ಮು ಮತ್ತು ಕಫವನ್ನು ಚಿಟಿಕೆಯಲ್ಲಿ ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.. ಪ್ರಯತ್ನಿಸಿ.

ಇದನ್ನೂ ಓದಿ: ಗಂಟುಗಳಲ್ಲಿ ಸೇರಿಕೊಂಡು ನೋವಿಗೆ ಕಾರಣವಾಗುವ ಯುರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಜ್ಯೂಸ್ !

ತುಳಸಿ ನೀರು: ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿದರೆ ಕೆಮ್ಮು ಮತ್ತು ಕಫ ನಿವಾರಣೆಯಾಗುತ್ತದೆ.

ಶುಂಠಿ ಚಹಾ: ಶುಂಠಿಯ ತುಂಡುಗಳನ್ನು ನೀರಿನಲ್ಲಿ ಕುದಿಸಿ ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಗಂಟಲು ನೋವು ಮತ್ತು ಕೆಮ್ಮು ಕಡಿಮೆಯಾಗುತ್ತದೆ.

ಮನೆ ಮದ್ದು : ಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ತುಳಸಿ ಎಲೆಗಳ ಕಷಾಯ ಮಾಡಿ ಕುಡಿದರೆ ಕೆಮ್ಮು ಮತ್ತು ಕಫವನ್ನು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಬೆಳಗ್ಗೆ ಈ ಕಾಫಿ ಕುಡಿದರೆ ಸಾಕು ಬ್ಲಡ್ ಶುಗರ್ ಒಮ್ಮೆಲೇ ನಾರ್ಮಲ್ ಆಗಿ ಬಿಡುತ್ತದೆ! ಅದ್ಯಾವ ಕಾಫೀ ನೋಡಿ !

ಸ್ಟ್ರೀಮ್‌ : ನೀಲಗಿರಿ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಅದರ ಆವಿಯನ್ನು ಮೂಗಿನ ಮೂಲಕ ಉಸಿರಾಡಿದರೆ ಮೂಗು ಕಟ್ಟುವಿಕೆ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. 

ಜೇನು: ಒಂದು ಚಮಚ ಜೇನುತುಪ್ಪವನ್ನು ನೇರವಾಗಿ ಅಥವಾ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಬಿಸಿ ನೀರಿನಿಂದ ಸ್ನಾನ: ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವು ಬೆಚ್ಚಗಾಗುತ್ತದೆ ಮತ್ತು ಕೆಮ್ಮು ಮತ್ತು ಕಫವನ್ನು ನಿವಾರಿಸುತ್ತದೆ.

ಸೂಪ್: ಚಿಕನ್ ಸೂಪ್ ಮತ್ತು ಟೊಮೆಟೊ ಸೂಪ್ ಕುಡಿಯುವುದರಿಂದ ಅದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಕೆಮ್ಮು ಮತ್ತು ಕಫವನ್ನು ಕಡಿಮೆ ಮಾಡುತ್ತದೆ.

ಬಿಸಿ ನೀರು: ಸಾಕಷ್ಟು ಬಿಸಿ ನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ, ಕಫವನ್ನು ತೆಳುಗೊಳಿಸುತ್ತದೆ ಮತ್ತು ಕೆಮ್ಮನ್ನು ನಿವಾರಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News