ನಿಮಗೆ ಗೊತ್ತಿರಲಿ, ಅಂಜೂರ ತಿನ್ನುವುದರಿಂದ ಆಗುವ ಈ 7 ಲಾಭ

ಅಂಜೂರದ ಬಗ್ಗೆ ನಿಮಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವೇ ಇಲ್ಲ.  ಅಂಜೂರ ಸೇವನೆ ಆರೋಗ್ಯಕ್ಕೆ ಸಾಕಷ್ಟು (fig benefits in summer) ಹಿತಕರ.  ಅಂಜೂರದಲ್ಲಿ ಪೊಟ್ಯಾಶಿಯಂ, ಮಿನರಲ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಭರ್ಜರಿಯಾಗಿ ಸಿಗುತ್ತವೆ.  

Written by - Ranjitha R K | Last Updated : Jun 8, 2021, 12:23 PM IST
  • ಅಂಜೂರದ ಬಗ್ಗೆ ನಿಮಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವೇ ಇಲ್ಲ.
  • ಬೇಸಿಗೆ ಹೊತ್ತಿನಲ್ಲಿ ಅಂಜೂರ ಸೇವನೆ ಆರೋಗ್ಯಕ್ಕೆ ಸಾಕಷ್ಟು ಹಿತಕರ.
  • ಅಂಜೂರ ಸೇವನೆಯಿಂದ ಎನರ್ಜಿ ಮತ್ತು ಇಮ್ಯೂನಿಟಿ ಎರಡೂ ಬೂಸ್ಟ್ ಆಗುತ್ತದೆ
ನಿಮಗೆ ಗೊತ್ತಿರಲಿ, ಅಂಜೂರ ತಿನ್ನುವುದರಿಂದ ಆಗುವ ಈ 7 ಲಾಭ title=
ಅಂಜೂರ ಸೇವನೆಯಿಂದ ಎನರ್ಜಿ ಮತ್ತು ಇಮ್ಯೂನಿಟಿ ಎರಡೂ ಬೂಸ್ಟ್ ಆಗುತ್ತದೆ (photo zee news)

ನವದೆಹಲಿ : ಅಂಜೂರದ ಬಗ್ಗೆ ನಿಮಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವೇ ಇಲ್ಲ.  ಅಂಜೂರ ಸೇವನೆ ಆರೋಗ್ಯಕ್ಕೆ ಸಾಕಷ್ಟು (fig benefits in summer) ಹಿತಕರ.  ಅಂಜೂರದಲ್ಲಿ ಪೊಟ್ಯಾಶಿಯಂ, ಮಿನರಲ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಭರ್ಜರಿಯಾಗಿ ಸಿಗುತ್ತವೆ.  ಅಂಜೂರ ಸೇವನೆಯಿಂದ ಮಲಬದ್ಧತೆ, ಗ್ಯಾಸ್ ನಿವಾರಣೆಯಾಗುತ್ತದೆ.  ಬಿಪಿ ಕಂಟ್ರೋಲ್ ಆಗುತ್ತದೆ.  ಅಂಜೂರ ಸೇವನೆಯಿಂದ ಎನರ್ಜಿ ಮತ್ತು ಇಮ್ಯೂನಿಟಿ ಎರಡೂ ಬೂಸ್ಟ್ (Immunity booster) ಆಗುತ್ತದೆ.  ಅಂಜೂರ ಸೇವನೆಯಿಂದ   ಆರೋಗ್ಯಕ್ಕೆ ಇನ್ನೂ ಏನು ಪ್ರಯೋಜನ  ಇದೆ ಎಂಬುದನ್ನು ನೋಡೋಣ.

1. ಎನರ್ಜಿ
ಅಂಜೂರ ತಿಂದರೆ ದೇಹದಲ್ಲಿ ಶಕ್ತಿಗೆ ಕೊರತೆ ಉಂಟಾಗುವುದಿಲ್ಲ.  ಅಂಜೂರದಲ್ಲಿ ವಿಟಮಿನ್, ಸಲ್ಫರ್, ಕ್ಲೋರಿನ್ ಬೇಕಾದಷ್ಟು ಸಿಗುತ್ತವೆ.  ಇದರಿಂದ ಎನರ್ಜಿಯ (energy) ಕೊರತೆ ಉಂಟಾಗುವುದಿಲ್ಲ.

ಇದನ್ನೂ ಓದಿ : Skin Care : ಕುತ್ತಿಗೆ ಸುತ್ತಲಿನ ಕಪ್ಪು ಕಲೆಯನ್ನು ತೊಡೆದುಹಾಕಲು ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ

2. ಬಲಿಷ್ಠ ಮೂಳೆ
ನಿಮ್ಮ ಮೂಳೆ ಬಲಿಷ್ಠವಾಗಬೇಕಾದರೆ ನೀವು ಅಂಜೂರ ತಿನ್ನಲೇ ಬೇಕು. ಅಂಜೂರದಲ್ಲಿ ಕ್ಯಾಲ್ಸಿಯಂ ಭರ್ಜರಿಯಾಗಿ ಸಿಗುವ ಕಾರಣ ಇದು ಮೂಳೆಗಳ ಆರೋಗ್ಯಕ್ಕೆ (good for bones) ಹಿತಕಾರಿ. 

3. ಬೊಜ್ಜು ಕರಗಿಸುತ್ತದೆ.
ಅಂಜೂರದಲ್ಲಿಸಾಕಷ್ಟು ಕಡಿಮೆ ಕ್ಯಾಲರಿ ಇರುತ್ತದೆ. ಹಾಗಾಗಿ ಅಂಜೂರ ತಿಂದರೆ ಬೊಜ್ಜು (fat) ಬರುವುದಿಲ್ಲ.   ಇಷ್ಟೇ ಅಲ್ಲ, ಒಣ ಅಂಜೂರದಲ್ಲಿ ಫ್ಯಾಟ್ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಇದರ ಸೇವನೆಯಿಂದ ಬೊಜ್ಜು ಉಂಟಾಗುವುದಿಲ್ಲ

ಇದನ್ನೂ ಓದಿ : ದಿನಕ್ಕೊಂದು ಚಮಚ ತುಪ್ಪ ತಿನ್ನಿ...! ಬದಲಾವಣೆ ನೀವೇ ನೋಡಿ.

4. ಕ್ಯಾನ್ಸರ್
ಕ್ಯಾನ್ಸರ್ ನಿಂದ (cancer) ರಕ್ಷಣೆ ಪಡೆಯಲು ಅಂಜೂರ ಸಹಕಾರಿ.  ಅಂಜೂರದಲ್ಲಿ ಸಿಗುವ ಪೋಷಕಾಂಶಗಳು ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತವೆ.

5. ಡಯಾಬಿಟಿಸ್
ಅಂಜೂರದ ಎಲೆ ಮಧುಮೇಹಿಗಳಿಗೆ ಸಾಕಷ್ಟು ಹಿತಕಾರಿ. ಅಂಜೂರದ  ಎಲೆಗಳಲ್ಲಿ ಡಯಾಬಿಟಿಸ್ ಕಂಟ್ರೋಲ್ (diabetes control) ಮಾಡುವ ಗುಣವಿದೆ. ಮಧುಮೇಹಿಗಳು ಅಂಜೂರ ಹಾಕಿದ ಎಲೆಯ ಚಹ ಕುಡಿಯಬಹುದು.

ಇದನ್ನೂ ಓದಿ : World Brain Tumour Day 2021: ಬ್ರೈನ್ ಟ್ಯೂಮರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರಿಂದ ಅಸ್ವಸ್ಥತೆಯನ್ನು ತಡೆಯಬಹುದು

6. ಜೀರ್ಣಕ್ರಿಯೆ
ಅಂಜೂರ ತಿಂದರೆ ಜೀರ್ಣ ಕ್ರಿಯೆ (digestion) ಸರಾಗವಾಗಿ ನಡೆಯುತ್ತದೆ. ಹಾಗಾಗಿ ಮಲಬದ್ದತೆ ಉಂಟಾಗುವುದಿಲ್ಲ.  ಹೊಟ್ಟೆ ನೋವು, ಗ್ಯಾಸ್ ಕೂಡಾ ಕಡಿಮೆಯಾಗುತ್ತದೆ.

7.  ಅಧಿಕ ರಕ್ತದೊತ್ತಡ.
ಹೈ ಬಿಪಿ ಇರುವವರಿಗೆ ಅಂಜೂರ ತುಂಬಾ ಒಳ್ಳೆಯದು. ಅಂಜೂರದಲ್ಲಿ ಪ್ಲೆವನಾಯ್ಡ್ ಮತ್ತು ಪೊಟ್ಯಾಶಿಯಂ ಭರ್ಜರಿಯಾಗಿರುತ್ತದೆ.  ಇದು ಬಿಪಿ ನಿಯಂತ್ರಣದಲ್ಲಿಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News