Skin Care Tips : ಮಳೆಗಾಲದಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಪ್ರಮುಖ ಸಲಹೆಗಳು! 

ಸಾಕಷ್ಟು ವಿಟಮಿನ್ ಮತ್ತು ಖನಿಜಗಳನ್ನು ಸೇವಿಸುವುದರಿಂದ ನಿಮಗೆ ಹೊಳೆಯುವ ಮತ್ತು ಉತ್ತಮ ಚರ್ಮ ನಿಮ್ಮದಾಗಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರ ನಂತರವೂ, ನಿಮ್ಮ ಚರ್ಮವು ಅದರ ಹೊಳಪನ್ನು ಕಳೆದುಕೊಳ್ಳುತ್ತಿದ್ದರೆ, ಕೆಲವು ಮನೆಮದ್ದುಗಳು ನೀವು ಮುಖದ ಹೊಳಪನ್ನು ತರುತ್ತವೆ.

Written by - Channabasava A Kashinakunti | Last Updated : Jul 14, 2021, 03:02 PM IST
  • ಮಳೆಗಾಲದಲ್ಲಿ ಕೆಲವು ಆಹಾರ ಮತ್ತು ಫೇಸ್ ಪ್ಯಾಕ್‌ ಚರ್ಮದ ಆರೈಕೆ ಮತ್ತು ಪೋಷಣೆ
  • ಮುಖದ ಹೊಳಪು ತರಲು ನೀವು ಟೊಮೆಟೊ ಫೇಸ್ ಪ್ಯಾಕ್
  • ಮುಲ್ತಾನಿ ಮಿಟ್ಟಿ ಮುಖಕ್ಕೆ ತುಂಬಾ ಪ್ರಯೋಜನಕಾರಿ
Skin Care Tips : ಮಳೆಗಾಲದಲ್ಲಿ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಪ್ರಮುಖ ಸಲಹೆಗಳು!  title=

ಮಳೆಗಾಲದಲ್ಲಿ ಕೆಲವು ಆಹಾರ ಮತ್ತು ಫೇಸ್ ಪ್ಯಾಕ್‌ಗಳು ಚರ್ಮದ ಆರೈಕೆ ಮತ್ತು ಚರ್ಮದ ಪೋಷಣೆಗೆ ಬಹಳ ಉಪಯುಕ್ತವಾಗಿವೆ. ಈ ಋತುವಿನಲ್ಲಿ ಮೊದಲನೆಯದು ಹೊಳೆಯುವ ಚರ್ಮ ಪಡೆಯಲು, ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ದೇಹವು ಆರೋಗ್ಯಕರವಾಗಿದ್ದಾಗ, ಅದರ ಹೊಳಪು ಮುಖದ ಮೇಲೆ ಗೋಚರಿಸುತ್ತದೆ. ಇದಲ್ಲದೆ, ಇಂತಹ ಅನೇಕ ಪರಿಹಾರಗಳಿವೆ, ಇದು ನಿಮಗೆ ಉತ್ತಮ ಆರೋಗ್ಯದ ಜೊತೆಗೆ ಆರೋಗ್ಯಕರ ಚರ್ಮವನ್ನು ನೀಡುತ್ತದೆ.

ಸಾಕಷ್ಟು ವಿಟಮಿನ್ ಮತ್ತು ಖನಿಜಗಳನ್ನು ಸೇವಿಸುವುದರಿಂದ ನಿಮಗೆ ಹೊಳೆಯುವ ಮತ್ತು ಉತ್ತಮ ಚರ್ಮ(Skin) ನಿಮ್ಮದಾಗಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರ ನಂತರವೂ, ನಿಮ್ಮ ಚರ್ಮವು ಅದರ ಹೊಳಪನ್ನು ಕಳೆದುಕೊಳ್ಳುತ್ತಿದ್ದರೆ, ಕೆಲವು ಮನೆಮದ್ದುಗಳು ನೀವು ಮುಖದ ಹೊಳಪನ್ನು ತರುತ್ತವೆ.

ಇದನ್ನೂ ಓದಿ : Lipstick Side Effects : ಲಿಪ್‌ಸ್ಟಿಕ್‌ ಖರೀದಿಸುವ ಮುನ್ನ ಈ ವಿಚಾರ ತಿಳಿದಿರಲಿ, ಇಲ್ಲವಾದಲ್ಲಿ ಎದುರಿಸಬೇಕಾದೀತು ಸಮಸ್ಯೆ

ಮುಖದ ಆರೈಕೆಗಾಗಿ ಮನೆಮದ್ದು :

ಟೊಮೆಟೊ ಫೇಸ್ ಪ್ಯಾಕ್ :

ಮುಖದ ಹೊಳಪು ತರಲು ನೀವು ಟೊಮೆಟೊ ಫೇಸ್ ಪ್ಯಾಕ್(Tomato Face Pack) ಅನ್ನು ಬಳಸಬಹುದು. ಇದಕ್ಕಾಗಿ 1 ಟೀಸ್ಪೂನ್ ಟೊಮೆಟೊ ಜ್ಯೂಸ್ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚಿ, ಮುಖ ಒಣಗಿದ ನಂತ್ರ ಅದನ್ನು ತೊಳೆಯಿರಿ. ಚರ್ಮದ ಮೇಲೆ ಹೊಳಪು ತರಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Benefits of Fenugreek Water : ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ 1 ಲೋಟ ಮೆಂತ್ಯ ನೀರು : ಇಲ್ಲಿದೆ ಅದರ  ಪ್ರಯೋಜನಗಳು!

ಹಾಲು ಸಹ ಪ್ರಯೋಜನಕಾರಿ :

ಮಳೆಗಾಲದಲ್ಲಿ ಚರ್ಮವನ್ನು ಹೊಳೆಯಲು ಹಾಲನ್ನು ಬಳಸಬಹುದು. ಇದಕ್ಕಾಗಿ, ರಾತ್ರಿಯಲ್ಲಿ ಹತ್ತಿಯೊಂದಿಗೆ ಮುಖಕ್ಕೆ ಹಾಲು(Milk) ಹಚ್ಚಿ ಮತ್ತು ಅದು ಒಣಗಿದಾಗ ನಿದ್ರೆಗೆ ಹೋಗಿ. ಮರುದಿನ ಬೆಳಿಗ್ಗೆ ಮುಖವನ್ನು ತೊಳೆಯಿರಿ. ಇದು ನಿಮಗೆ ಹೊಳೆಯುವ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ : Monsoon Health Tips: ಮಳೆಗಾಲದಲ್ಲಿ ಈ ಮೂರೂ ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ರೋಗಗಳು ಹತ್ತಿರವೂ ಸುಳಿಯುವುದಿಲ್ಲ

ಅಕ್ಕಿ ಮತ್ತು ಎಳ್ಳು :

ಮುಖದ ಕಪ್ಪಾಗುವುದನ್ನು ತೆಗೆದುಹಾಕಲು, ಅಕ್ಕಿ ಮತ್ತು ಎಳ್ಳು ಬೆರೆಸಿ ಮನೆಯಲ್ಲಿ ಸ್ಕ್ರಬ್ (Face Scrub)ತಯಾರಿಸಿ. ಇದನ್ನು ಮಾಡಲು, ಅಕ್ಕಿ ಮತ್ತು ಎಳ್ಳು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅವುಗಳನ್ನು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ಎದ್ದ ನಂತರ ಅದನ್ನು ಪುಡಿಮಾಡಿ, ಸ್ನಾನ ಮಾಡುವ ಮೊದಲು ಚರ್ಮದ ಮೇಲೆ ಹಚ್ಚಿ. ಅದು ಒಣಗಿದ 2-3 ನಿಮಿಷಗಳ ನಂತರ ಅದನ್ನು ತೊಳೆಯಿರಿ.

ಇದನ್ನೂ ಓದಿ : ಸಿಡಿಲು ಬರುವುದಕ್ಕೂ ಮುನ್ನ ಸಿಗುತ್ತವೆ ಈ ಸೂಚನೆಗಳು , ತಪ್ಪಿಯೂ ಆಗದಿರಲಿ ಈ ತಪ್ಪುಗಳು

ಮುಲ್ತಾನಿ ಮಿಟ್ಟಿ ಪ್ಯಾಕ್  :

ಮುಲ್ತಾನಿ ಮಿಟ್ಟಿMultani Mitti ಮುಖಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಅನೇಕ ಗುಣಲಕ್ಷಣಗಳಿಂದ ಕೂಡಿದೆ. ಜೇನುತುಪ್ಪದಲ್ಲಿ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ಇದರಿಂದ ಮುಖ ಸುಂದರವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News