ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಬೇಕಾದರೆ ಈ ಹಣ್ಣುಗಳಿಂದ ದೂರವಿರಿ

ಬೇಸಿಗೆ ಆರಂಭವಾಗಿದೆ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬೇಸಿಗೆ ಕಾಲ ಬೆಸ್ಟ್ ಎಂದು ಹೇಳಲಾಗುತ್ತದೆ.   ಬೇಸಿಗೆಯಲ್ಲಿ ರಸಭರಿತ ಹಣ್ಣುಗಳು ಲಭ್ಯವಾಗುತ್ತವೆ, ಹೀಗಾಗಿ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಸೇವಿಸುವ ಮೂಲಕ ಸಣ್ಣಗಾಗಬಹುದು ಎನ್ನುವ ಲೆಕ್ಕಾಚಾರ ಅವರದಾಗಿರುತ್ತದೆ.

Written by - Ranjitha R K | Last Updated : Mar 9, 2023, 10:59 AM IST
  • ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬೇಸಿಗೆ ಕಾಲ ಬೆಸ್ಟ್
  • ಇದಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸಲಾಗುತ್ತದೆ
  • ತೂಕ ಇಳಿಸಿಕೊಳ್ಳಲು ಈ ಹಣ್ಣುಗಳನ್ನು ದೂರವಿಡಿ
ಬೇಸಿಗೆಯಲ್ಲಿ ತೂಕ  ಇಳಿಸಿಕೊಳ್ಳಬೇಕಾದರೆ ಈ ಹಣ್ಣುಗಳಿಂದ ದೂರವಿರಿ title=

ಬೆಂಗಳೂರು : ಬೇಸಿಗೆ ಆರಂಭವಾಗಿದೆ. ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬೇಸಿಗೆ ಕಾಲ ಬೆಸ್ಟ್ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಅದೆಷ್ಟೋ ಜನ ಬೇಸಿಗೆಯಲ್ಲಿ ದೇಹ ತೂಕ  ಕಳೆದುಕೊಳ್ಳುವ ಕಸರತ್ತು ಆರಂಭಿಸಿ ಬಿಡುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಇದರಲ್ಲಿ ಬಹುತೇಕರು ಕೇವಲ ಹಣ್ಣು ಸೇವಿಸುವ ಮೂಲಕ ತೂಕ ಕಳೆದು ಕೊಳ್ಳುವ ಕೆಲಸಕ್ಕೆ ಕೈ ಹಾಕುತ್ತಾರೆ. ಯಾಕೆಂದರೆ ಬೇಸಿಗೆಯಲ್ಲಿ ರಸಭರಿತ ಹಣ್ಣುಗಳು ಲಭ್ಯವಾಗುತ್ತವೆ, ಹೀಗಾಗಿ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಸೇವಿಸುವ ಮೂಲಕ ಸಣ್ಣಗಾಗಬಹುದು ಎನ್ನುವ ಲೆಕ್ಕಾಚಾರ ಅವರದ್ದಾಗಿರುತ್ತದೆ. ಆದರೆ  ಆರೋಗ್ಯ ತಜ್ಞರ ಪ್ರಕಾರ, ಹಣ್ಣುಗಳ ಸೇವನೆ ಮಾಡುವಾಗಲೂ ಕೆಲವೊಂದು ಹಣ್ಣುಗಳನ್ನು ಈ ಲಿಸ್ಟ್ ನಿಂದ ದೂರವಿಡಬೇಕು. ಇಲ್ಲವಾದಲ್ಲಿ ನಿಮಗೆ ಬೇಕಾಗಿರುವ ಫಲಿತಾಂಶ ಸಿಗದೇ ಹೋಗಬಹುದು.   

ತೂಕ ಇಳಿಸಿಕೊಳ್ಳಲು ಈ ಹಣ್ಣುಗಳನ್ನು ದೂರವಿಡಿ : 
1. ಬೇಸಿಗೆ ಪ್ರಾರಂಭವಾಗಿದೆ. ಇನ್ನೇನು ಮಾರುಕಟ್ಟೆಗೆ ಮಾವು ಕಾಲಿಡುವ ಕಾಲ.  ರುಚಿಕರ ರಸಭರಿತ ಮಾವಿಗೆ ಮನಸೋಲದವರುಂಟೆ. ಆದರೆ, ಮಾವಿನ  ಹಣ್ಣಿನಲ್ಲಿ ಕ್ಯಾಲೋರಿ ಅಧಿಕ ಪ್ರಮಾಣದಲ್ಲಿರುತ್ತದೆ. ಮಾತ್ರವಲ್ಲ ಇದು  ಕಾರ್ಬೋಹೈಡ್ರೇಟ್ ನಲ್ಲಿ ಸಮೃದ್ಧವಾಗಿರುವ ಹಣ್ಣು. ಇದನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಪ್ರಯೋಜನಕಾರಿಯಾಗಿರಲಿದೆ. ಆದರೆ  ಅಧಿಕ ಪ್ರಮಾಣದಲ್ಲಿ ಈ ಹಣ್ಣನ್ನು ಸೇವಿಸುವುದರಿಂದ ದೇಹದ ಕೊಬ್ಬನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಹೃದಯವನ್ನು ಆರೋಗ್ಯವಾಗಿಡಲು ಈ 10 ಆಹಾರಗಳು ಸೇವಿಸಿ..!

2. ಬೇಸಿಗೆ ಬರುತ್ತಿದೆ. ಬಾಳೆಹಣ್ಣು ಬಹಳಷ್ಟು ಜನ ಡಯಟ್ ಚಾರ್ಟ್ ನಲ್ಲಿ ಸೇರಿಕೊಳ್ಳುತ್ತದೆ.  ಆದರೆ, ಬಾಳೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇಡೀ ದಿನದಲ್ಲಿ ಕೇವಲ 3 ರಿಂದ 4 ಬಾಳೆಹಣ್ಣುಗಳನ್ನು ಮಾತ್ರ ತಿನ್ನಬಹುದು. ಇಲ್ಲವಾದಲ್ಲಿ ಬಾಳೆಹಣ್ಣಿನಲ್ಲಿರುವ ಅಧಿಕ ಪೋಷಕಾಂಶಗಳ ಕಾರಣ ದೇಹ ತೂಕ ವೇಗವಾಗಿ ಹೆಚ್ಚಾಗುತ್ತದೆ. 

3. ಮಾರುಕಟ್ಟೆಯಲ್ಲಿ ಈಗ ದ್ರಾಕ್ಷಿ ಹಣ್ಣು ಅಧಿಕ ಸಂಖ್ಯೆಯಲ್ಲಿ ಸಿಗುತ್ತಿದೆ.  ದ್ರಾಕ್ಷಿಗಳು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ.  ಆದ ಕಾರಣ  ಒಣದ್ರಾಕ್ಷಿಯ ಹೆಚ್ಚಿನ ಸೇವನೆಯು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Summer Health tips : ಬೇಸಿಗೆಯಲ್ಲಿ ಈ 5 ತಪ್ಪುಗಳನ್ನು ಮಾತ್ರ ಮಾಡ್ಬೇಡಿ..! ಇಲ್ಲವೇ ಚರ್ಮ ರೋಗ ಗ್ಯಾರಂಟಿ

4. ಸಪೋಟ  ಹಣ್ಣನ್ನು ಪ್ರೋಟೀನ್, ರಂಜಕ ಮತ್ತು ಕಬ್ಬಿಣದ ನಿಧಿ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಸಿಗುತ್ತವೆ. ಕಡಿಮೆ ತೂಕ ಇರುವವರು ಸಪೋಟ ಸೇವಿಸಬೇಕು.  ಆದರೆ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವವರು ಸಪೋಟಾ ಹಣ್ಣಿನಿಂದ ದೂರವಿರಬೇಕು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News