ಸ್ಪಾ, ಪಾರ್ಲರ್ ಯಾವುದೂ ಬೇಡ ! ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಡ್ಯಾಮೇಜ್ಡ್ ಹೇರ್ ಸರಿಪಡಿಸಿಕೊಳ್ಳಿ

Home remedies for damaged hair: ಬೇಸಿಗೆಯಲ್ಲಿ  ನಿರ್ಜೀವ ಮತ್ತು ಶುಷ್ಕ ಕೂದಲಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಕೂದಲಿನ ಈ ಸಮಸ್ಯೆಯ ಪರಿಹಾರಕ್ಕಾಗಿ  ಕೆಲವು ಮನೆಮದ್ದುಗಳನ್ನು ಬಳಸಬಹುದು. 

Written by - Ranjitha R K | Last Updated : May 25, 2023, 03:13 PM IST
  • ಮನೆಮದ್ದುಗಳ ಮೂಲಕ ಕೂದಲಿನ ಆರೈಕೆಯನ್ನು ಮಾಡಿಕೊಳ್ಳಬಹುದು.
  • ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಬಹುದು.
  • ಶಾಂಪೂ ಜೊತೆ ಕಂಡೀಷನರ್ ಹಚ್ಚಿದರೆ ಒಳ್ಳೆಯದು
ಸ್ಪಾ, ಪಾರ್ಲರ್ ಯಾವುದೂ ಬೇಡ ! ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಡ್ಯಾಮೇಜ್ಡ್ ಹೇರ್ ಸರಿಪಡಿಸಿಕೊಳ್ಳಿ   title=

ಬೆಂಗಳೂರು : Home remedies for damaged hair : ಈಗ ಬೇಸಿಗೆ ನಡೆಯುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನಿರ್ಜೀವ ಮತ್ತು ಶುಷ್ಕ ಕೂದಲಿನ ಸಮಸ್ಯೆ ಎದುರಿಸಬೇಕಾಗುತ್ತದೆ.  ಇದರಿಂದಾಗಿ ಅನೇಕ ಮಹಿಳೆಯರು ಕಾಲಕಾಲಕ್ಕೆ ಸ್ಪಾ ಅಥವಾ ಕೂದಲಿನ ಚಿಕಿತ್ಸೆಯನ್ನು ತೆಗೆದುಕೊಳ್ಳುವ ಸಲುವಾಗಿ ಸಲೂನ್, ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಹೆಚ್ಚು ಹಣ ಖರ್ಚು ಮಾಡದೆ ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸುವ ಮೂಲಕ ನಿಮ್ಮ ಕೂದಲಿನ ಆರೈಕೆಯನ್ನು ಮಾಡಬಹುದು. ಈ ವಿಧಾನಗಳು ತುಂಬಾ ಸರಳ ಮತ್ತು ಸುಲಭ. ಮಾತ್ರವಲ್ಲ ಹಾನಿಗೊಳಗಾದ ಕೂದಲನ್ನು ಕೆಲವೇ ದಿನಗಳಲ್ಲಿ ಸರಿಪಡಿಸಲು ಸಹಾಯ ಮಾಡುತ್ತದೆ.

ಕೂದಲಿಗೆ ಎಣ್ಣೆಯನ್ನು ಹಚ್ಚುವುದು : 
ಹಲವು ಬಾರಿ ನಾವು ಚರ್ಮದ ಆರೈಕೆಗಾಗಿ ವಿವಿಧ ರೀತಿಯ ಉತ್ಪನ್ನಗಳು ಮತ್ತು ವಿಧಾನಗಳನ್ನು ಅನುಸರಿಸುತ್ತೇವೆ. ಆದರೆ ನಾವು ನಮ್ಮ ಕೂದಲಿನ  ಆರೈಕೆಯನ್ನು ಮರೆತುಬಿಡುತ್ತೇವೆ . ಈ ಕಾರಣದಿಂದಾಗಿ, ಕೂದಲು ಒರಟು ಮತ್ತು ನಿರ್ಜೀವವಾಗುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚು. ಈ ಕಾರಣದಿಂದಾಗಿ, ಕೂದಲಿನ ಸ್ಪಿಲ್ಟ್ ಎಂಡ್ಸ್ ಸಮಸ್ಯೆಯನ್ನು ಕೂಡಾ ಎದುರಿಸಬೇಕಾಗುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆ ಕೂಡಾ ನಿಂತು ಬಿಡುತ್ತದೆ. 

ಇದನ್ನೂ ಓದಿ : Health Tips: ಈ 5 ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ!

ಯಾವ ಎಣ್ಣೆ ಬೆಸ್ಟ್ : 
ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಕೂದಲಿನ ಸಮಸ್ಯೆಗೆ ಇರುವ ಸರಳ ಪರಿಹಾರವಾಗಿದೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಎಣ್ಣೆಯನ್ನು ಹಚ್ಚಬೇಕು. ಇದರಿಂದ ಕೂದಲು ನೈಸರ್ಗಿಕ ತೇವಾಂಶ ಪಡೆಯುತ್ತದೆ. ಇನ್ನು ಸಿಲ್ಕಿ ಹೇರ್ ಗಾಗಿ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ ಆಯ್ಕೆ 

ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ  :
ಸೂರ್ಯನ ಗಾಢವಾದ ಕಿರಣ ಬೆವರು ಬರಲು  ಕಾರಣವಾಗುತ್ತದೆ. ಹೀಗೆ ಕೂದಲು ಬೆವರಿದರೆ ಕೂದಲು ಹೆಚ್ಚು ಉದುರಲು ಪ್ರಾರಂಭವಾಗುತ್ತದೆ. ಈ ಕಾರಣದಿಂದ ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ಈ ಹಿನ್ನೆಲೆಯಲ್ಲಿ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಹೇರ್ ಮಾಸ್ಕ್ ಅನ್ನು ಬಳಸಬೇಕು. 

ಇದನ್ನೂ ಓದಿ : Weight Loss Tips: ಈ 4 ವಸ್ತುಗಳನ್ನು ಸೇವಿಸಿ.. ಜಿಮ್‌ಗೆ ಹೋಗದೇ ಜೀರೋ ಫಿಗರ್ ನಿಮ್ಮದಾಗುತ್ತೆ!

ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು :
ಮೊಟ್ಟೆ - 1
ತೆಂಗಿನೆಣ್ಣೆ - 2 ಚಮಚ
ಮೊಸರು - 2 ಚಮಚ

ಹೇರ್ ಮಾಸ್ಕ್ ತಯಾರಿಸುವ ವಿಧಾನ : 
* ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
* ಅದರಲ್ಲಿ ಮೊಟ್ಟೆಯ ಹಳದಿ ಲೋಳೆ, ತೆಂಗಿನೆಣ್ಣೆ ಮತ್ತು ಮೊಸರು ಹಾಕಿ ಮಿಶ್ರಣ ಮಾಡಿ.
*ಈಗ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ.
*  30 ನಿಮಿಷಗಳ ನಂತರ ಕೂದಲನ್ನು  ಶಾಂಪೂ ಸಹಾಯದಿಂದ ತೊಳೆಯಿರಿ.

ಇದನ್ನೂ ಓದಿ : Neem Leaf Health Benefits: ಬೇವಿನ ಎಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು

ಅತಿಯಾದ ಬಿಸಿಲಿನಿಂದ ಕೂದಲು ಹಾಳಾಗಲು ಆರಂಭಿಸಿರುವುದರಿಂದ ಕೂದಲಿಗೆ ಶಾಂಪೂ ಹಾಕಿದ ನಂತರ ಕಂಡೀಷನರ್ ಹಚ್ಚುವುದು ಕೂಡಾ ಬಹಳ ಮುಖ್ಯ. ಕೂದಲಿಗೆ ಕಂಡೀಷನರ್ ಹಚ್ಚುವುದರಿಂದ ಕೂದಲು ಮೃದುವಾಗುವುದಲ್ಲದೆ ಕೂದಲಿನ ಹೊಳಪು ಕೂಡಾ ಹೆಚ್ಚುತ್ತದೆ. ಜೊತೆಗೆ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯಿಂದ ಕೂದಲನ್ನು  ರಕ್ಷಿಸುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು, ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee news ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News