ಈ ದ್ರಾವಣವನ್ನು ಕೇವಲ ಒಂದು ಚಮಚ ಬಳಸಿದರೆ ಸಾಕು ಕೂದಲು ಮತ್ತು ತ್ವಚೆಗೆ ಸಬಂಧಿಸಿದ ಸಮಸ್ಯೆಗಳು ಮಾಯ..!

ಬದಲಾದ ಹವಾಮಾನವು ನಿಮ್ಮ ಆರೋಗ್ಯ ಮಾತ್ರವಲ್ಲದೆ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರಬಹುದು. ಬದಲಾಗುತ್ತಿರುವ ಋತುವಿನಲ್ಲಿ, ಒಣ ಚರ್ಮ ಮತ್ತು ಕೂದಲು ಉದುರುವಿಕೆಯ ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತದೆ.   

Written by - Ranjitha R K | Last Updated : Mar 7, 2022, 04:49 PM IST
  • ಬದಲಾಗುತ್ತಿರುವ ಋತುವಿನಲ್ಲಿ, ಒಣ ಚರ್ಮ, ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸುತ್ತದೆ.
  • ಜಾಮೂನ್ ವಿನೆಗರ್ ಅನ್ನು ಸೇವಿಸುವ ಅಥವಾ ಲೇಪಿಸುವ ಮೂಲಕ ಪ್ರಯೋಜನ ಪಡೆಯಬಹುದು
  • ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ
 ಈ ದ್ರಾವಣವನ್ನು ಕೇವಲ ಒಂದು ಚಮಚ ಬಳಸಿದರೆ ಸಾಕು ಕೂದಲು ಮತ್ತು ತ್ವಚೆಗೆ ಸಬಂಧಿಸಿದ ಸಮಸ್ಯೆಗಳು ಮಾಯ..! title=
ಬದಲಾಗುತ್ತಿರುವ ಋತುವಿನಲ್ಲಿ, ಒಣ ಚರ್ಮ, ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸುತ್ತದೆ. (file photo)

ಬೆಂಗಳೂರು : ಪ್ರತಿ ಬಾರಿ ಬದಲಾಗುತ್ತಿರುವ ಹವಾಮಾನವು ಹಲವಾರು ರೀತಿಯ ಕಾಯಿಲೆಗಳನ್ನು ತರುತ್ತದೆ. ಕೆಲವರಿಗೆ ಶೀತ, ಕೆಮ್ಮು ಮತ್ತು ನೆಗಡಿ ಸಮಸ್ಯೆಗಳಿದ್ದರೆ, ಕೆಲವರಿಗೆ ಅಸ್ತಮಾ ಮತ್ತು ಅಲರ್ಜಿಯ ಸಮಸ್ಯೆ ಎದುರಾಗುತ್ತದೆ. ಆದರೆ ಬದಲಾದ ಹವಾಮಾನವು ನಿಮ್ಮ ಆರೋಗ್ಯ ಮಾತ್ರವಲ್ಲದೆ ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರಬಹುದು. ಬದಲಾಗುತ್ತಿರುವ ಋತುವಿನಲ್ಲಿ, ಒಣ ಚರ್ಮ ಮತ್ತು ಕೂದಲು ಉದುರುವಿಕೆಯ ಸಮಸ್ಯೆ ಸಾಮಾನ್ಯವಾಗಿ ಕಾಣಿಸುತ್ತದೆ.  ಬದಲಾಗುತ್ತಿರುವ ಹವಾಮಾನದ ಜೊತೆಗೆ, ಅವುಗಳನ್ನು ನೋಡಿಕೊಳ್ಳುವ ವಿಧಾನಗಳಲ್ಲಿಯೂ ಬದಲಾವಣೆಗಳನ್ನು ತರುವುದು ಬಹಳ ಮುಖ್ಯ. ಬದಲಾದ ಋತುವಿನಲ್ಲಿ ನಿಮಗೆ ಕೂದಲು ಮತ್ತು ಚರ್ಮದ ಸಮಸ್ಯೆಗಳಿದ್ದರೆ, ನೀವು ಚರ್ಮ ಮತ್ತು ಕೂದಲಿಗೆ ಜಾಮೂನ್ ವಿನೆಗರ್ ಬಳಸಬಹುದು (Jamun Vinegar benefits). ಇದು ಕೂದಲು ಮತ್ತು ಚರ್ಮ ಎರಡಕ್ಕೂ ಪೋಷಣೆಯನ್ನು ನೀಡುತ್ತದೆ. 

ಬಳಸುವುದು ಹೇಗೆ ?
ಜಾಮೂನ್ ವಿನೆಗರ್ ಅನ್ನು ಸೇವಿಸುವ ಮೂಲಕ ಅಥವಾ ಲೇಪಿಸುವ ಮೂಲಕ ಕೂದಲು ಮತ್ತು ಚರ್ಮ ಪ್ರಯೋಜನವನ್ನು ಪಡೆಯುತ್ತದೆ (Jamun Vinegar benefits) . ನೀವು ಇದನ್ನು ಸೇವಿಸಲು ಬಯಸಿದರೆ, ದಿನಕ್ಕೆ ಒಂದು ಚಮಚವನ್ನು ಮಾತ್ರ ತೆಗೆದುಕೊಳ್ಳಬೇಕು. ಅದನ್ನು ನಿಮ್ಮ ಆಹಾರ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ (warm water) ಸೇರಿಸುವ ಮೂಲಕ ಸೇವಿಸಬಹುದು.  ಅಲ್ಲದೆ, ಇದನ್ನು ಚರ್ಮದ ಮೊಡವೆಗಳ ಮೇಲೆ ಅನ್ವಯಿಸಬಹುದು (Skin Care) . ಕೂದಲಿಗೆ ಅನ್ವಯಿಸಬೇಕಾದರೆ, ಅರ್ಧ ಲೀಟರ್ ನೀರಿನಲ್ಲಿ ಐದರಿಂದ ಆರು ಚಮಚ ಜಾಮೂನ್ ವಿನೆಗರ್ ಅನ್ನು ಬೆರೆಸಿ. ನಂತರ ಕೂದಲನ್ನು ತೇವಗೊಳಿಸಿ ಜಾಮೂನ್ ವಿನೆಗರ್ ಹಚ್ಚಬೇಕು.  ಇನ್ನು ಇದರ ಸಹಾಯದಿಂದ ತಲೆ ಕೂದಲಿಗೆ ಮಸಾಜ್ ಕೂಡಾ ಮಾಡಬಹುದು.  

ಇದನ್ನೂ ಓದಿ : Weight Loss Tips : Belly Fat ಕರಗಿಸಬೇಕೆ? ಹಾಗಿದ್ರೆ, ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿ!

ಜಾಮೂನ್ ವಿನೆಗರ್ ಪ್ರಯೋಜನಗಳು :
ಜಾಮೂನ್ ಸೈಡರ್ ವಿನೆಗರ್ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ (Hair Fall treatment). ಕೂದಲು ಉದುರುವಿಕೆ ಅಥವಾ ಕೂದಲು ಒಡೆಯುವ ಸಮಸ್ಯೆ ಇದ್ದರೆ,  ಆಹಾರದಲ್ಲಿ ಜಾಮೂನ್ ವಿನೆಗರ್ ಅನ್ನು ಸೇರಿಸಿಕೊಳ್ಳಬೇಕು (Jamun Vinegar benefits for hair). ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ನಿಮ್ಮ ತಲೆಯನ್ನು ತೊಳೆಯಬಹುದು ಅಥವಾ ಮಸಾಜ್ ಮಾಡಬಹುದು. ಉತ್ತಮ ಫಲಿತಾಂಶಕ್ಕಾಗಿ, ನಿಮ್ಮ ಕೂದಲಿಗೆ ಅನ್ವಯಿಸಿದ ಸುಮಾರು 20 ನಿಮಿಷಗಳ ನಂತರ ಕೂದಲನ್ನು ತೊಳೆಯುವುದು ಒಳ್ಳೆಯದು. 

ಜಾಮೂನ್ ಸೈಡರ್ ವಿನೆಗರ್ ತಲೆ ಹೊಟ್ಟನ್ನು ಅನ್ನು ತೆಗೆದುಹಾಕುತ್ತದೆ :
ಜಾಮೂನ್ ವಿನೆಗರ್ ಆಂಟಿ ಡ್ಯಾಂಡ್ರಫ್ ಗುಣಲಕ್ಷಣಗಳನ್ನು ಹೊಂದಿದೆ (Dandruff Treatment). ತಲೆಹೊಟ್ಟು ಸಮಸ್ಯೆ ಇದ್ದರೆ ಇದನ್ನು ಬಳಸಬಹುದು. ತಲೆಹೊಟ್ಟು ಹೋಗಲಾಡಿಸಲು ಇದರಿಂದ ಮಸಾಜ್ ಮಾಡಿ ಅಥವಾ ಪ್ರತಿದಿನ ಒಂದು ಚಮಚ ಜಾಮೂನ್ ವಿನೆಗರ್  ಸೇವಿಸಿ.

ಇದನ್ನೂ ಓದಿ : ಗೊತ್ತಿರಲಿ, ಮೂತ್ರದ ಬಣ್ಣ ಬದಲಾಗುವುದು ಗಂಭೀರ ಸಮಸ್ಯೆಯ ಸಂಕೇತ..!

ಜಾಮೂನ್ ಸೈಡರ್ ವಿನೆಗರ್ ಚರ್ಮದ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ:
ಜಾಮೂನ್ ಸೈಡರ್ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಚರ್ಮದಲ್ಲಿ ಯಾವುದೇ ರೀತಿಯ ಸೋಂಕು ಇದ್ದರೆ, ಹತ್ತಿಯ ಸಹಾಯದಿಂದ, ಜಾಮೂನ್ ವಿನೆಗರ್ ಅನ್ನು ಅನ್ವಯಿಸಿ. ಆದರೆ ನೆನಪಿರಲಿ ಸಮಸ್ಯೆ ಗಂಭೀರವಾಗಿದ್ದರೆ  ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಜಾಮೂನ್ ವಿನೆಗರ್ :
ಕೆಲವರಿಗೆ ಬದಲಾಗುತ್ತಿರುವ ಋತುವಿನಲ್ಲಿ ಮೊಡವೆ ಸಮಸ್ಯೆ  (Pimple problem) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಜಾಮೂನ್ ವಿನೆಗರ್ ಅನ್ನು ಸೇವಿಸುವುದು ಮತ್ತು ಚರ್ಮಕ್ಕೆ ಹಚ್ಚುವುದು ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ಬೆರಳಿನಿಂದ ಮೊಡವೆ ಮೇಲೆ ಜಾಮೂನ್ ವಿನೆಗರ್ ಅನ್ನು ಅನ್ವಯಿಸಬಹುದು.

ಆದರೂ ಕೆಲವರ ಆರೋಗ್ಯಕ್ಕೆ ಜಾಮೂನ್ ವಿನೆಗರ್‌ ಆಗಿ ಬರುವುದಿಲ್ಲ. ಅದನ್ನು ಸೇವಿಸುವುದರಿಂದ ವಾಕರಿಕೆ, ವಾಂತಿ ಅಥವಾ ಹೊಟ್ಟೆ ನೋವಿನಂತಹ ತೊಂದರೆಗಳು ಉಂಟಾಗಬಹುದು. ಅಲ್ಲದೆ, ಕೆಲವರೂ ಇದರಿಂದ ಅಲರ್ಜಿಯನ್ನು ಹೊಂದಿರಬಹುದು. ಅದನ್ನು ಅನ್ವಯಿಸಿದ ಚರ್ಮದ ಪ್ರದೇಶದಲ್ಲಿ ತುರಿಕೆ ಮತ್ತು ಉರಿ ಕಂಡು ಬರಬಹುದು. ಆದ್ದರಿಂದ ಜಾಮುನ್ ವಿನೆಗರ್ ಅನ್ನು ಬಳಸಲು ಬಯಸಿದರೆ, ಅದಕ್ಕೂ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News