How To Drink Water: ಯಾವ ರೀತಿ ನೀರು ಕುಡಿಯಬೇಕು ಗೊತ್ತಾ..?

ನೀರನ್ನು ಹೇಗೆ ಕುಡಿಯಬೇಕು?: ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ಎಂಬುದು ಬಹಳ ಮುಖ್ಯ. ಏಕೆಂದರೆ ಅದು ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಕುಡಿಯುವ ನೀರಿನ 4 ಮೂಲ ನಿಯಮಗಳನ್ನು ನೀವು ತಿಳಿದಿರಬೇಕು.

Written by - Puttaraj K Alur | Last Updated : Feb 25, 2023, 11:58 AM IST
  • ಆರೋಗ್ಯವಾಗಿರಲು ಬಿಸಿ ನೀರು ಅಥವಾ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಕುಡಿಯಬೇಕು
  • ಯಾವುದೇ ಆಹಾರ ಸೇವಿಸಿದ ತಕ್ಷಣ ನೀರನ್ನು ಕುಡಿಯಬಾರದು, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ
  • ಯಾವಾಗಲೂ ಕುಳಿತುಕೊಂಡು ಗುಟುಕು ಗುಟುಕಾಗಿ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ
How To Drink Water: ಯಾವ ರೀತಿ ನೀರು ಕುಡಿಯಬೇಕು ಗೊತ್ತಾ..? title=
ನೀರನ್ನು ಹೇಗೆ ಕುಡಿಯಬೇಕು?

ನವದೆಹಲಿ: ನೀರು ಎಷ್ಟು ಮುಖ್ಯವೆಂದು ನಮಗೆಲ್ಲರಿಗೂ ತಿಳಿದಿದೆ. ಇದು ಬಾಯಾರಿಕೆ ನೀಗಿಸುವುದು ಮಾತ್ರವಲ್ಲದೆ ನಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಆರೋಗ್ಯಕರವಾಗಿರಲು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ನಮ್ಮ ನೀರು ಕುಡಿಯುವ ಅಭ್ಯಾಸ ಆರೋಗ್ಯಕರವೇ ಅಥವಾ ಇಲ್ಲವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನು ಇತ್ಯಾದಿಗಳ ಮೇಲೆ ಪರಿಣಾಮ ಬೀರುವುದರಿಂದ ನೀವು ಯಾವಾಗ ಮತ್ತು ಹೇಗೆ ನೀರನ್ನು ಕುಡಿಯುತ್ತೀರಿ ಎಂಬುದು ಬಹಳ ಮುಖ್ಯ. ಆರೋಗ್ಯಕರ ರೀತಿಯಲ್ಲಿ ಕುಡಿಯುವ ನೀರಿನ ಬಗ್ಗೆ 4 ಅಗತ್ಯ ಸಂಗತಿಗಳನ್ನು ನೀವು ತಿಳಿದುಕೊಳ್ಳಬೇಕು.

1. ಆಯುರ್ವೇದದಲ್ಲಿ ಉಷಾಪಾನ್ ಎಂದು ಕರೆಯಲ್ಪಡುವ ನೀರನ್ನು ಬೆಳಗ್ಗೆ ಎದ್ದತಕ್ಷಣ ಮೊದಲು ಕುಡಿಯಬೇಕು. ಆರೋಗ್ಯವಾಗಿರಲು ಬಿಸಿ ನೀರು ಅಥವಾ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಕುಡಿಯಬೇಕು. ಈ ಅಭ್ಯಾಸವು ನಿಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

2. ಯಾವುದೇ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯಬೇಡಿ. ನೀವು ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುತ್ತಿದ್ದರೆ, ನಿಮ್ಮ ಆಹಾರವು ನಿಧಾನವಾಗಿ ಜೀರ್ಣವಾಗುತ್ತದೆ, ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಯುಂಟಾಗುತ್ತದೆ.

3. ಯಾವಾಗಲೂ ಕುಳಿತುಕೊಂಡು ನೀರು ಕುಡಿಯಿರಿ. ದಿಢೀರ್ ಅಥವಾ ನಿಂತು ನೀರನ್ನು ಕುಡಿಯಬೇಡಿ. ಗುಟುಕು ಗುಟುಕಾಗಿ ನೀಡು ಕುಡಿಯುವ ಹವ್ಯಾಸ ರೂಢಿಸಿಕೊಳ್ಳಿರಿ.  

4. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಬೇಡಿ. ಹೀಗೆ ಮಾಡುವುದರಿಂದ ಪ್ಲಾಸ್ಟಿಕ್‌ನಲ್ಲಿರುವ ಸೂಕ್ಷ್ಮ ಕಣಗಳಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಇದು ಹಾರ್ಮೋನ್ ಅಸಮತೋಲನ ಮತ್ತು ಇತರ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

ಇದನ್ನೂ ಓದಿ: ಮಧುಮೇಹ, ಹೃದ್ರೋಗ, ಕೂದಲು ಉದುರುವುದನ್ನು ಅತಿ ವೇಗದಲ್ಲಿ ನಿಯಂತ್ರಿಸುತ್ತದೆ ಈ ಘಮ ಘಮಿಸುವ ಎಲೆ

ಮುಂಜಾನೆ ಉಗುರುಬೆಚ್ಚನೆಯ ನೀರು ಕುಡಿದರೆ ಏನಾಗುತ್ತೆ?

  • ಬೆಳಿಗ್ಗೆ ಎದ್ದ ನಂತರ ಉಗುರುಬೆಚ್ಚಗಿನ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
  • ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರ ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ಪ್ರತಿದಿನ ಬೆಳಗ್ಗೆ ಉಗುರುಬೆಚ್ಚನೆಯ ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಕಾಡುವುದಿಲ್ಲ.
  • ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ದೇಹದ ಕೊಳೆ ದೂರವಾಗುತ್ತದೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
  • ಬಿಸಿ ನೀರನ್ನು ಕುಡಿಯುವ ಮೂಲಕ ಚಯಾಪಚಯವು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Tomato Side Effects: ಟೊಮೆಟೊ ಅತಿಯಾದ ಸೇವನೆಯೇ ಈ ದೊಡ್ಡ ಕಾಯಿಲೆಗೆ ಕಾರಣ.!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿ ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News