ಬೆಂಗಳೂರು : ಮಗು ಜನವಾದ ಕೂಡಲೇ ತಂದೆ ತಾಯಿಯ ಪ್ರಪಂಚವೇ ಬದಲಾಗುತ್ತದೆ. ಅದು ಕೂಡಾ ನೀವು ಮೊದಲ ಮಗುವಿಗೆ ಜನ್ಮ ನೀಡಿದ್ದೀರಾದರೆ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಉದ್ಬವಿಸುತ್ತಿರುತ್ತದೆ. ಮಗುವಿಗೆ ಹಾಲುಣಿಸುವುದರಿಂದ ಹಿಡಿದು ಮಗುವಿನ ಸಣ್ಣ ಸಣ್ಣ ಚಲನೆಯ ಬಗ್ಗೆಯೂ ಒಂದು ರೀತಿಯ ಭಯ, ಒಂದು ರೀತಿಯ ಆತಂಕ ಆವರಿಸಿರುತ್ತದೆ. ಚಿಕ್ಕ ಮಗುವಿನ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿವಹಿಸಬೇಕಾಗುತ್ತದೆ. ಮಗುವಿನ ಆರೋಗ್ಯದ ಪ್ರತಿಯೊಂದು ಅಂಶಕ್ಕೂ ಹೆತ್ತವರು ಗಮನ ನೀಡುತ್ತಿರುವಾಗ, ಪುಟ್ಟ ಕಂದಮ್ಮನ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಕೂಡಾ ಬಹಳ ಮುಖ್ಯ ಎನ್ನುವುದು ನಿಮಗೆ ತಿಳಿದಿರಲಿ. ನಿಮ್ಮ ಮಗುವಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಅವರ ದೈನಂದಿನ ನೈರ್ಮಲ್ಯದ ಒಂದು ಭಾಗವಾಗಿರಬೇಕು.
ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸುವುದು ಯಾಕೆ ಮುಖ್ಯ ? :
ನಾಲಗೆಯನ್ನು ಸ್ವಚ್ಛಗೊಳಿಸುವುದು ಮಗುವಿನ ಮೌಖಿಕ ಆರೈಕೆ ದಿನಚರಿಯ ಅತ್ಯಗತ್ಯ ಭಾಗವಾಗಿದೆ. ನಾಲಗೆಯಲ್ಲಿ ಬ್ಯಾಕ್ಟೀರಿಯಾ, ಆಹಾರ ಕಣಗಳು ಮತ್ತು ಡೆಡ್ ಸೆಲ್ ಗಳು ಸಂಗ್ರಹವಾಗಬಹುದು. ನಾಲಗೆಯನ್ನು ಶುಚಿಗೊಳಿಸದೆ ಬಿಟ್ಟರೆ ಮಗುವಿನ ಬಾಯಿ ರುಚಿ ಮತ್ತು ಬೆಳವಣಿಗೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಕೊಳಕು ನಾಲಗೆಯು ನಿಮ್ಮ ಮಗುವಿನ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಾಲಗೆಯ ಮೇಲೆ ಸಂಗ್ರಹವಾಗುವ ಬ್ಯಾಕ್ಟೀರಿಯಾಗಳು ದೇಹದ ಇತರ ಭಾಗಗಳಿಗೆ ಸುಲಭವಾಗಿ ಹರಡಬಹುದು. ಇದು ಸೋಂಕುಗಳು ಮತ್ತು ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗಿದೆ.
ಇದನ್ನೂ ಓದಿ : ಅಡುಗೆಗೆ ಬಳಸುವ ಈ ಒಂದು ವಸ್ತು ರಕ್ತದ ಸಕ್ಕರೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ
ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಸಲಹೆಗಳು :
ನಿಮ್ಮ ಮಗುವಿನ ನಾಲಗೆಯನ್ನು ಶುಚಿಗೊಳಿಸುವುದು ಸರಳವಾದ ಪ್ರಕ್ರಿಯೆಯಾಗಿದೆ. ಇದನ್ನು ಕೆಲವು ಸುಲಭ ವಿಧಾನಗಳ ಮೂಲಕ ಮಾಡಬಹುದು.
ಈ ಕಾರ್ಯವನ್ನು ಬೇಗನೆ ಪ್ರಾರಂಭಿಸಿ :
ಸಾಧ್ಯವಾದಷ್ಟು ಬೇಗ ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. ನಿಮ್ಮ ಮಗುವಿಗೆ ಕೆಲವು ವಾರಗಳಾಗುತ್ತಿದ್ದಂತೆಯೇ ನಾಲಗೆ ಶುಚಿಗೊಳಿಸುವ ಪ್ರಕ್ರಿಯೆ ಆರಂಭಿಸಬೇಕು. ಇದು ನಿಮ್ಮ ಮಗುವಿಗೆ ಪ್ರಕ್ರಿಯೆಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ. ನಂತರ ಮಗು ಬೆಳೆಯುತ್ತಿದ್ದಂತೆ ಅವರ ನಾಲಗೆಯನ್ನು ಸ್ವಚ್ಛಗೊಳಿಸುವುದು ಸುಲಭವಾಗುತ್ತದೆ.
ಮೃದುವಾದ ಬಟ್ಟೆಯನ್ನು ಬಳಸಿ :
ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಮೃದುವಾದ ಬಟ್ಟೆಯನ್ನು ಬಳಸಿ. ಬೆಚ್ಚಗಿನ ನೀರಿನಿಂದ ಬಟ್ಟೆಯನ್ನು ಒದ್ದೆ ಮಾಡಿ ಮತ್ತು ಅದನ್ನು ನಿಮ್ಮ ಮಗುವಿನ ನಾಲಿಗೆ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಆದರೆ ನೆನಪಿರಲಿ ಈ ರೀತಿ ಮಾಡುವಾಗ ಹೆಚ್ಚಿನ ಒತ್ತಡವನ್ನು ಹಾಕಬೇಡಿ.
ಇದನ್ನೂ ಓದಿ : ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಸೇವಿಸಬಾರದು
ಟಂಗ್ ಸ್ಕ್ರಾಪರ್ ಬಳಸಿ :
ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಟಂಗ್ ಸ್ಕ್ರಾಪರ್ ಅನ್ನು ಬಳಸಬಹುದು. ಮೃದುವಾದ ಟಂಗ್ ಸ್ಕ್ರಾಪರ್ ಅನ್ನು ಆರಿಸಿ ಮತ್ತು ನಿಮ್ಮ ಮಗುವಿನ ನಾಲಗೆಯ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಅದನ್ನು ಬಳಸಿ. ಪ್ರತಿ ಬಳಕೆಯ ನಂತರ ಸ್ಕ್ರಾಪರ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮರೆಯಬೇಡಿ.
ಫಿಂಗರ್ ಬ್ರಷ್ ಬಳಸಿ :
ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಫಿಂಗರ್ ಬ್ರಷ್ ಕೂಡಾ ಬೆಸ್ಟ್ ಆಯ್ಕೆ. ಫಿಂಗರ್ ಬ್ರಷ್ ನಿಮ್ಮ ಬೆರಳಿಗೆ ಹೊಂದಿಕೊಳ್ಳುವ ಸಣ್ಣ, ಮೃದುವಾದ ಬ್ರಷ್ ಆಗಿದೆ. ಬೆಚ್ಚಗಿನ ನೀರಿನಿಂದ ಬ್ರಷ್ ಅನ್ನು ಒದ್ದೆ ಮಾಡಿ ಮತ್ತು ಅದನ್ನು ನಿಮ್ಮ ಮಗುವಿನ ನಾಲಗೆ ಮೇಲೆ ನಿಧಾನವಾಗಿ ಉಜ್ಜಿ.
ಮೈಲ್ಡ್ ಕ್ಲೆನ್ಸರ್ ಬಳಸಿ :
ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಮೈಲ್ಡ್ ಕ್ಲೆನ್ಸರ್ ಅನ್ನು ಬಳಸಬಹುದು. ಶಿಶುಗಳಿಗೆ ಸುರಕ್ಷಿತವಾದ ಕ್ಲೆನ್ಸರ್ ಅನ್ನು ಆಯ್ಕೆಮಾಡಿ. ಯಾವುದೇ ಕಾರಣಕ್ಕೂ ವಯಸ್ಕರ ಟೂತ್ಪೇಸ್ಟ್ ಅನ್ನು ಬಳಸಬೇಡಿ.
ಇದನ್ನೂ ಓದಿ : Summer Drink: ಬೇಸಿಗೆಯಲ್ಲಿ ಪ್ರತಿನಿತ್ಯ ಮಜ್ಜಿಗೆ ಸೇವಿಸಿದ್ರೆ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆ
ಯಾವುದೇ ರೀತಿಯ ಒತ್ತಡ ಬೇಡ :
ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸಲು ಯಾವ ವಿಧಾನವನ್ನು ಆರಿಸಿಕೊಂಡರೂ, ಯಾವುದೇ ಕಾರಣಕ್ಕೂ ಒತ್ತಡ ಹಾಕಬಾರದು ಎನ್ನುವುದು ನೆನಪಿರಲಿ. ಮಗುವಿನ ನಾಲಗೆಯು ಸೂಕ್ಷ್ಮವಾಗಿರುತ್ತದೆ. ಹೆಚ್ಚಿನ ಒತ್ತಡ ಹಾಕುವುದರಿಂದ ಸೌಮ್ಯವಾದ ಮಗುವಿನ ನಾಲಗೆಗೆ ಹಾನಿಯಾಗಬಹುದು.
ಮಗುವಿಗೆ ಮನರಂಜನೆ ನೀಡಿ :
ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸುವಾಗ ಹಾಡು ಹಾಡುವ ಮೂಲಕ, ಮಗುವಿನೊಂದಿಗೆ ಮಾತನಾಡುವ ಮೂಲಕ, ಮುಖದಲ್ಲಿ ತಮಾಷೆಯ ಸನ್ನೆಗಳನ್ನು ಮಾಡುವ ಮೂಲಕ ಮಗುವಿನ ಮನಸ್ಸನ್ನು ಡೈವರ್ಟ್ ಮಾಡಿ.
ವೈದ್ಯರ ಬಳಿಕೆ ಯಾವಾಗ ಕರೆದುಕೊಂಡು ಹೋಗಬೇಕು ? :
ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಮಗುವಿನ ನಾಲಗೆಯನ್ನು ಸ್ವಚ್ಛಗೊಳಿಸುವುದನ್ನು ಮನೆಯಲ್ಲಿಯೇ ಮಾಡಬಹುದು. ಆದರೂ, ನಾಲಿಗೆ ಅಥವಾ ಬಾಯಿಯೊಳಗೆ ಬಿಳಿ ತೇಪೆಗಳಂತಹ ಚಿಹ್ನೆಗಳು ಕಂಡು ಬಂದರೆ ಮಗು ನೋವು ಅನುಭವಿಸುತ್ತಿದೆ ಎಂದನಿಸಿದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.