ಹೊಟ್ಟೆಯ ಬೊಜ್ಜು ಕರಗಿಸಬೇಕೆ? ಹಾಗಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್!

ಅಂದವಾದ ಉಡುಪುಗಳು ನಿಮಗೂ ಅಂದವಾಗಿ ಕಾಣಬೇಕೆಂದರೆ ಅದಕ್ಕೆ ನಿಮ್ಮ ದೇಹದ ಆಕೃತಿಯೂ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಲು ಈ ಅಂಶಗಳನ್ನು ಪ್ರತಿನಿತ್ಯ ಪಾಲಿಸಿ.

Last Updated : Aug 19, 2018, 03:20 PM IST
ಹೊಟ್ಟೆಯ ಬೊಜ್ಜು ಕರಗಿಸಬೇಕೆ? ಹಾಗಿದ್ದರೆ ಇಲ್ಲಿದೆ ಸೂಪರ್ ಟಿಪ್ಸ್! title=

ನವದೆಹಲಿ: ಅಂದಚಂದದ ಉಡುಪುಗಳನ್ನು ಧರಿಸಿ, ಸುಂದರವಾಗಿ ಕಾಣಬೇಕೆಂದು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಆ ಅಂದವಾದ ಉಡುಪುಗಳು ನಿಮಗೂ ಅಂದವಾಗಿ ಕಾಣಬೇಕೆಂದರೆ ಅದಕ್ಕೆ ನಿಮ್ಮ ದೇಹದ ಆಕೃತಿಯೂ ಬಹಳ ಮುಖ್ಯವಾಗುತ್ತದೆ. ಕೆಲವರು ನೋಡಲು ಸುಂದರವಾಗಿದ್ದರೂ, ಹೊಟ್ಟೆಯ ಭಾಗದ ಬೊಜ್ಜು ಉಡುಪುಗಳ ಅಂದವನ್ನೇ ಕೆಡಿಸುತ್ತವೆ. ಅವರ ದೇಹದ ತೂಕ ಸಮತೋಲನದಿಂದ ಇದ್ದರೂ, ಹೊಟ್ಟೆ ಭಾಗದ ಬೊಜ್ಜು ಅವರ ಅಂದವನ್ನು ಕೆಡಿಸುತ್ತದೆ. 

ಹಾಗಿದ್ದರೆ ನೀವೂ ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ, ಈ ಲೇಖನವನ್ನು ನೀವು ಓದುವುದು ಬಹಳ ಅಗತ್ಯ. ಏಕೆಂದರೆ ಹೊಟ್ಟೆಯ ಭಾಗದ ಬೊಜ್ಜು ಡಯಾಬಿಟಿಸ್, ಹೃದ್ರೋಗ ಮತ್ತು ಇತರ ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ. ಹಾಗಾಗಿ ಹೊಟ್ಟೆಯ ಭಾಗದ ಬೊಜ್ಜನ್ನು ಕರಗಿಸಲು ಈ 20 ಅಂಶಗಳನ್ನು ಪ್ರತಿನಿತ್ಯ ಪಾಲಿಸಿ, Slim and beautiful ಆಗಿ ಕಾಣಿರಿ.

ಹೊಟ್ಟೆಯ ಬೊಜ್ಜು ಕರಗಿಸಲು ಈ ಟಿಪ್ಸ್ ತಪ್ಪದೇ ಅನುಸರಿಸಿ
1. ನಾರಿನಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಉದಾಹರಣೆಗೆ, ಮೊಳಕೆ ಕಾಳುಗಳು, ತರಕಾರಿ, ಸೊಪ್ಪು ಇತ್ಯಾದಿ.
2. ಟ್ರ್ಯಾನ್ಸ್ ಫ್ಯಾಟ್ ಇರುವ ಆಹಾರ ಸೇವಿಸಬೇಡಿ. ಉದಾಹರಣೆಗೆ ಬೇಕರಿ ತಿಂಡಿ ತಿನಿಸುಗಳು, ಬ್ರೆಡ್, ಪಿಜ್ಜಾ, ಬಿಸ್ಕೆಟ್ ಇತ್ಯಾದಿ.
3. ಅತಿ ಹೆಚ್ಚು ಮದ್ಯಪಾನ ಮಾಡಬೇಡಿ.
4. ಹೆಚ್ಚು ಪೌಷ್ಟಿಕಾಂಶ ಇರುವ ಆಹಾರ ಸೇವಿಸಿ.
5. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಅದಕ್ಕಾಗಿ ಯೋಗ, ಧ್ಯಾನ ಮಾಡಿ.
6. ಸಿಹಿ ತಿನಿಸುಗಳನ್ನು ಕಡಿಮೆ ಮಾಡಿ. ಅದರಲ್ಲೂ ಸಕ್ಕರೆಯಿಂದ ತಯಾರಿಸಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
7. ಪ್ರತಿನಿತ್ಯ ಏರೋಬಿಕ್ ವ್ಯಾಯಾಮ ಮಾಡಿ.
8. ಧಾನ್ಯಗಳನ್ನು ಹೆಚ್ಚು ಸೇವಿಸಿ.
9. ಇತರ ಎಣ್ಣೆಗಳಿಗಿಂತ ತೆಂಗಿನ ಎಣ್ಣೆಯನ್ನು ಆಹಾರ ತಯಾರಿಕೆಯಲ್ಲಿ ಹೆಚ್ಚು ಬಳಸಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆಯಲ್ಲದೆ, ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸುತ್ತದೆ.
10. ದೇಹಕ್ಕೆ ಅಗತ್ಯವಾದಷ್ಟು ಸಮಯ ನಿದ್ದೆ ಮಾಡಿ. 7 ರಿಂದ 8 ಗಂಟೆಗಳ ಕಾಲ ನಿದ್ದೆ ಅತ್ಯಗತ್ಯ.
11. ನೀವು ಸೇವಿಸುವ ಆಹಾರಕ್ಕೆ ತಕ್ಕಂತೆ ವ್ಯಾಯಾಮವನ್ನೂ ಅಳವಡಿಸಿಕೊಳ್ಳಿ.
12. ಕೊಬ್ಬಿದ ಮೀನುಗಳನ್ನು ಹೆಚ್ಚು ಸೇವಿಸಿ. ಇದು ತೂಕ ಕಡಿಮೆ ಮಾಡಿ ಮಾಡಿಕೊಳ್ಳಲು ಉಪಕಾರಿ.
13. ಪ್ಯಾಕ್ಡ್ ಹಣ್ಣಿನ ಜ್ಯೂಸ್ ಗಳನ್ನೂ ಸೇವಿಸದಿರಿ.
14. ನಿಮ್ಮ ಡಯಟ್'ನಲ್ಲಿ ಆಪಲ್ ಸೈದರ್ ವೆನಿಗರ್ ಸೇರಿಸಿ. ಇದು ರಕ್ತದಲ್ಲಿನ ಸಕ್ಕರೆ ಅಂಶಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
15. ಗ್ರೀನ್ ಟೀ ಸೇವಿಸಿ.

ನಿಜ ಹೇಳಬೇಕೆಂದರೆ, ಹೊಟ್ಟೆಯ ಭಾಗದ ಬೊಜ್ಜು ಕರಗಿಸಲು ಯಾವುದೇ ಮ್ಯಾಜಿಕಲ್ ಪರಿಹಾರ ಇಲ್ಲ. ಹಾಗಾಗಿ ದೇಹದ ತೂಕ ಇಲಿಸಬೇಕೆಂದರೆ ಶ್ರಮದ ಅಗತ್ಯವೂ ಇರುತ್ತದೆ. ನಿಮ್ಮ ಡಯಟ್ ಜೊತೆ ವ್ಯಾಯಮವನ್ನೂ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. 

Trending News